ಚೀನಾ ಗಡಿ ಸಂಘರ್ಷ ಕುರಿತು ಪ್ರಧಾನಿ-ದೋವೆಲ್ ಮಹತ್ವದ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಸೆ.12- ಪೂರ್ವ ಲಡಾಕ್‍ನ ವಾಸ್ತವ ನಿಯಂತ್ರಣ ರೇಖೆ (ಎಲ್‍ಎಸಿ) ಬಳಿ ಇಂಡೋ ಚೀನಾ ನಡುವೆ ಗಡಿ ಬಿಕ್ಕಟ್ಟು ಸೃಷ್ಟಿಯಾಗಿ ಸಂಘರ್ಷದ ವಾತಾವರಣ ಸೃಷ್ಟಿಯಾದ ವಿದ್ಯಮಾನದ ಸಂಬಂಧ ರಾಷ್ಟ್ರೀಯ ಭದ್ರತಾ ಸಲಹೆಗಾರ(ಎನ್‍ಎಸ್‍ಎ) ಅಜಿತ್ ದೋವೆಲ್ ಪ್ರಧಾನಿ ನರೇಂದ್ರಮೋದಿ ಅವರನ್ನು ಭೇಟಿ ಮಾಡಿ ಮಹತ್ವದ ಸಭೆ ನಡೆಸಿದ್ದಾರೆ.

ಸಭೆ ವೇಳೆ ಪೂರ್ವ ಲಡಾಕ್‍ನ ಪಾಂಗಾಂಗ್ ಸರೋವರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿನ ಪ್ರಸ್ತುತ ಪರಿಸ್ಥಿತಿ ಮತ್ತು ಭಾರತೀಯ ಗಡಿ ಭಾಗದ ರಕ್ಷಣೆ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ಅಜಿತ್ ದೋವೆಲ್ ಪ್ರಧಾನಿಯವರಿಗೆ ವಿವರಣೆ ಒದಗಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಿನ್ನೆ ರಾತ್ರಿಯಷ್ಟೇ ವಿದೇಶಾಂಗ ವ್ಯವಹಾರಗಳ ಸಚಿವ ಎಚ್.ಜೈಶಂಕರ್, ಚೀನಾದ ತಮ್ಮ ಸಹವರ್ತಿ(ವಿದೇಶಾಂಗ ಮಂತ್ರಿ) ವಾಂಗ್ ಇ ಅವರೊಂದಿಗೆ ಲಡಾಕ್ ಗಡಿ ಸಂಘರ್ಷ ಶಮನಕ್ಕೆ ಐದು ಅಂಶಗಳ ಸೂತ್ರಕ್ಕೆ ಸಹಮತ ನೀಡಿದರು.

ಈ ಬಗ್ಗೆಯೂ ಕೂಡ ಸಭೆಯಲ್ಲಿ ಪ್ರಧಾನಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಚರ್ಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.

Facebook Comments