ಭಾರತದಲ್ಲೇ ಎಕೆ-47 ತಯಾರಿಕೆಗೆ ರಷ್ಯಾ ಜೊತೆ ಒಪ್ಪಂದ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮಾಸ್ಕೋ, ಸೆ.4- ಎಕೆ-47- 203 ಶ್ರೇಣಿಯ ರೈಫಲ್‍ಗಳನ್ನು ಭಾರತದಲ್ಲೇ ತಯಾರಿಸುವ ಸಂಬಂಧ ರಷ್ಯಾ ಮತ್ತು ಇಂಡಿಯಾ ನಡುವೆ ಒಪ್ಪಂದ ಏರ್ಪಡುವ ಸಾಧ್ಯತೆ ಇದೆ. ರಷ್ಯಾ ಪ್ರವಾಸದಲ್ಲಿರುವ ರಕ್ಷಣಾ ಸಚಿವ ರಾಜನಾಥ್‍ಸಿಂಗ್ ಅವರು ಈ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿವೆ.

ಭಾರತೀಯ ಸೇನಾಪಡೆಗಳಿಗೆ 7.70 ಲಕ್ಷ ರೈಫಲ್‍ಗಳ ಅಗತ್ಯವಿದ್ದು, 1 ಲಕ್ಷ ರೈಫಲ್‍ಗಳನ್ನು ರಷ್ಯಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಉಳಿದ 6.70 ಲಕ್ಷ ರೈಫಲ್‍ಗಳನ್ನು ಭಾರತದಲ್ಲೇ ತಯಾರಿಸುವ ಒಪ್ಪಂದ ಇದಾಗಿದೆ.

Facebook Comments