ಕ್ಯಾನ್ಸರ್ ಕ್ಯೂರ್ ಕುರಿತ ಜನಜಾಗೃತಿಗಾಗಿ ಜು.22 ರಂದು ‘ಅಕ್ಕ’ ಕಾಲ್ನಡಿಗೆ ಜಾಥಾ

ಈ ಸುದ್ದಿಯನ್ನು ಶೇರ್ ಮಾಡಿ

aKKA-011
ಬೆಂಗಳೂರು, ಜು.20-ಕ್ಯಾನ್ಸರ್ ಕ್ಯೂರ್ ಕುರಿತ ಜನಜಾಗೃತಿಗಾಗಿ ಜು.22 ರ ಬೆಳಗ್ಗೆ 6 ಗಂಟೆಗೆ ಕಬ್ಬನ್ ಪಾರ್ಕ್‍ನ ಕೆಎಸ್‍ಎಲ್‍ಪಿಎ ಸ್ಟೇಡಿಯಂನಿಂದ ಕಾಲ್ನಡಿಗೆ ಜಾಥವನ್ನು ಅಕ್ಕ (ಅಮೆರಿಕ ಕನ್ನಡ ಕೂಟಗಳ ಆಗರ) ಹಮ್ಮಿಕೊಂಡಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕ್ಕ ಅಧ್ಯಕ್ಷ ಶಿವಮೂರ್ತಿ, ಅಕ್ಕ ಸಂಸ್ಥೆಗೆ 20 ವರ್ಷ ಮತ್ತು ವಿಶ್ವ ಕನ್ನಡಿಗ ಸಮ್ಮೇಳನ 10 ವರ್ಷ ಪೂರೈಸಿರುವ ಸವಿನೆನಪಿಗಾಗಿ ರಾಜ್ಯದ ಹಳ್ಳಿಗಾಡಿನ ಹೆಣ್ಣು ಮಕ್ಕಳಿಗೆ ತಗಲುವ ಕ್ಯಾನ್ಸರ್ ರೋಗಗಳ ಪತ್ತೆಗೆ ಸಹಾಯಕವಾಗುವ ಮೊಬೈಲ್ ಮ್ಯೊಮೊಗ್ರಫಿ ಬಸ್ಸನ್ನು ಕೊಡುಗೆ ನೀಡಲು ನಿರ್ಧರಿಸಲಾಗಿದೆ.

ಕ್ಯಾನ್ಸರ್ ರೋಗದ ಜಾಗೃತಿಗಾಗಿ ಅಂದು ಕಾಲ್ನಡಿಗೆ ಏರ್ಪಡಿಸಲಾಗಿದೆ.ಅಮೆರಿಕದ ಡಲ್ಲಾಸ್ ನಗರದಲ್ಲಿ ಆ.31ರಿಂದ ಸೆ.2ರವರೆಗೆ ನಡೆಯುವ ಅಕ್ಕ 2018ರ ಸಂಭ್ರಮೋತ್ಸವಕ್ಕೆ ರಾಜ್ಯದ ಜನ ಸಹಾಯ ಹಸ್ತ ಚಾಚಬೇಕು. ದಾನಿಗಳ ಸಹಕಾರದಿಂದಲೇ ಅಕ್ಕ ಸಂಸ್ಥೆ ಇಷ್ಟೆಲ್ಲ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ತಿಳಿಸಿದರು. ಅಂದು ನಡೆಯುವ ಕಾಲ್ನಡಿಗೆ ಜಾಥಾದಲ್ಲಿ ನಾಡಿನ ಹೆಸರಾಂತ ಕಲಾವಿದರಾದ ಸಂಯುಕ್ತ ಹೊರನಾಡು, ಭವ್ಯ, ಪ್ರಥಮ್, ಮೇಘನಾ ಲಕ್ಷ್ಮಣ್, ರಾಜಶ್ರೀ ಭಾಗವಹಿಸಲಿದ್ದು, ಈ ಸಮಾಜಮುಖಿ ಕೆಲಸಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.

Facebook Comments

Sri Raghav

Admin