ಟ್ವಿಂಕಲ್ಗೆ ಈರುಳ್ಳಿ ಕಿವಿಯೋಲೆ ಗಿಫ್ಟ್ ಕೊಟ್ಟ ಅಕ್ಷಯ್..!
ಮುಂಬೈ, ಡಿ.13-ದೇಶದಲ್ಲಿ ಈರುಳ್ಳಿ ಬೆಲೆಯು ಗಗನಮುಖಿಯಾಗಿರುವುದರಿಂದ ಮದುವೆ ಸಮಾರಂಭಗಳಲ್ಲಿ ವಧು-ವರರಿಗೆ ಈರುಳ್ಳಿ ಇರುವ ಗಿಫ್ಟ್ಬಾಕ್ಸ್ಗಳನ್ನು ನೀಡುತ್ತಿದ್ದರೆ, ಬಾಲಿವುಡ್ನ ಕಿಲಾಡಿ ಸ್ಟಾರ್ ಅಕ್ಷಯ್ಕುಮಾರ್ ಕೂಡ ತಮ್ಮ ಪತ್ನಿ ಟ್ವಿಂಕಲ್ ಖನ್ನಾಗೆ ವಿಶಿಷ್ಟ ಉಡುಗೊರೆಯನ್ನು ನೀಡಿದ್ದಾರೆ.
ಅಕ್ಷಯ್ಕುಮಾರ್ ನಟಿಸಿರುವ ಗುಡ್ನ್ಯೂಸ್ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು ಅದರ ಪ್ರಚಾರದ ಅಂಗವಾಗಿ ಕಪಿಲ್ ಶರ್ಮಾರ ಶೋಗೆ ಹೋಗಿದ್ದ ಅಕ್ಕಿಗೆ ಸಿಕ್ಕ ಈರುಳ್ಳಿ ಒಲೆಗಳನ್ನು ಟ್ವಿಂಕಲ್ಖನ್ನಾಗೆ ನೀಡುವ ಮೂಲಕ ಗಮನ ಸೆಳೆದಿದ್ದಾರೆ.
ಟ್ವಿಂಕಲ್ ತನಗೆ ಸಿಕ್ಕಿರುವ ಈರುಳ್ಳಿ ಒಲೆಯನ್ನು ಇನ್ಸ್ಟ್ರಾಗ್ರಾಮ್ಗೆ ಹಾಕಿದ್ದು ನನ್ನ ಪತಿ ನನಗೆ ನೀಡಿರುವ ಈರುಳ್ಳಿಯ ಕಿವಿಯೋಲೆಯು ತುಂಬಾ ಚೆನ್ನಾಗಿದೆ, ಅವರ ಇದನ್ನು ಕಪಿಲ್ ಶೋನಲ್ಲಿದ್ದ ಕರೀನಾಗೆ ನೀಡಲು ಹೋದಾಗ ಅವರು ಅದನ್ನು ನಿರಾಕರಿಸಿದ್ದರಂತೆ ಆದರೆ ನಿಜಕ್ಕೂ ಅಕ್ಷಯ್ ನೀಡಿರುವ ಉಡುಗೊರೆಯು ನನ್ನ ಮನಸ್ಸನ್ನು ಗೆದ್ದಿದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಅಕ್ಷಯ್ಕುಮಾರ್ ನಟಿಸಿರುವ ಗುಡ್ನ್ಯೂಸ್ ಚಿತ್ರವು ಡಿಸೆಂಬರ್ 27 ರಂದು ಬಿಡುಗಡೆಯಾಗಲಿದೆ.