ಅಭಿಮಾನಿಗಳಲ್ಲಿ ಕ್ಷಮೆ ಕೋರಿದ ಕಿಲಾಡಿ ಅಕ್ಷಯ್ ಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಏ. 21- ತಮ್ಮ ಚಿತ್ರಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕಾರ್ಯ ಮಾಡುವ ಅಕ್ಷಯ್‍ಕುಮಾರ್ ಅವರು ಈಗ ತಮ್ಮ ಅಭಿಮಾನಿಗಳಲ್ಲಿ ಕ್ಷಮಾಪಣೆ ಕೇಳಿದ್ದಾರೆ. ಅಕ್ಷಯ್‍ಕುಮಾರ್ ಅವರು ಚಿತ್ರರಂಗದಲ್ಲಿ ಮಾತ್ರ ಜಾಹೀರಾತು ರಂಗದಲ್ಲಿ ನಂಬರ್ 1 ನಟನೆಂದೇ ಬಿಂಬಿಸಿಕೊಂಡಿದ್ದಾರೆ, ಅವರು ಹಲವಾರು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಆದರೆ ಇತ್ತೀಚೆಗೆ ಕಿಲಾಡಿ ಅಕ್ಷಯ್‍ಕುಮಾರ್ ಅವರು ತಾವು ನಟಿಸಿದ್ದ ತಂಬಾಕು ಉತ್ಪನ್ನದ ಜಾಹೀರಾತಿಗೆ ಸಂಬಂಸಿದಂತೆ ಅವರು ಅಭಿಮಾನಿಗಳಲ್ಲಿ ಕ್ಷಮಾಪಣೆ ಕೋರಿದ್ದಾರೆ. ಅಕ್ಷಯ್‍ಕುಮಾರ್ ಅವರು ತಂಬಾಕು ಜಾಹೀರಾತಿನಲ್ಲಿ ಕಾಣಿಸಿಕೊಂಡಿ ದ್ದರಿಂದ ಅವರ ಅಭಿಮಾನಿಗಳು ಬೇಸರಗೊಂಡು ಸಾಮಾಜಿಕ ಜಾಲ ತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದರು.

ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿ ರುವ ಅಕ್ಷಯ್‍ಕುಮಾರ್, ನಾನು ತಂಬಾಕು ಜಾಹೀರಾತಿನಲ್ಲಿ ನಟಿಸಿದ್ದರಿಂದ ಅಭಿಮಾನಿಗಳಿಗೆ ಬೇಸರವಾಗಿರುವುದರಿಂದ ನಾನು ಅವರ ಬಳಿ ಕ್ಷಮಾಪಣೆ ಕೋರುತ್ತೇನೆ, ಈ ಜಾಹೀರಾತಿನಲ್ಲಿ ನಾನು ಸಾಕಷ್ಟು ದಿನ ನಟಿಸುತ್ತಿಲ್ಲ ಎಂದು ಅಕ್ಷಯ್‍ಕುಮಾರ್ ತಿಳಿಸಿದ್ದಾರೆ.
ಅಭಿಮಾನಿಗಳು ಹಾಗೂ ನನ್ನ ಹಿತೈಷಿಗಳು ನಾನು ತಂಬಾಕು ಉತ್ಪನ್ನಗಳಲ್ಲಿ ನಟಿಸಬಾರದು ಎಂದು ಮನವಿ ಮಾಡಿದ್ದಾರೆ, ಅವರ ಭಾವನೆಗಳಿಗೆ ಬೆಲೆ ಕೊಟ್ಟು ನಾನು ಇನ್ನು ಮುಂದೆ ಇಂತಹ ಜಾಹೀರಾತು ಗಳಲ್ಲಿ ನಟಿಸುವುದಿಲ್ಲ ಎಂದು ಅಕ್ಷಯ್‍ಕುಮಾರ್ ಟ್ವೀಟ್‍ನಲ್ಲಿ ತಿಳಿಸಿ ದ್ದಾರೆ.

# ಅಕ್ಕಿ ಹೇಳಿಕೆಗೆ ಸ್ವಾಗತ:
ಚಿತ್ರರಂಗದ ಖ್ಯಾತನಾಮರು ತಮ್ಮ ಬೇಡಿಕೆಗಳನುಗುಣವಾಗಿ ಜಾಹೀರಾತುಗಳಲ್ಲಿ ನಟಿಸು ವುದು ಸಾಮಾನ್ಯ, ಆದರೆ ಸಮಾಜವನ್ನು ತಪ್ಪು ದಾರಿಗೆ ಎಳೆಯುವ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಬಹುದು ಎಂದು ಕೆಲವು ನಟರು ಕಟ್ಟುಪಾಡುಗಳನ್ನು ಹಾಕಿಕೊಂಡಿದ್ದಾರೆ, ಅದೇ ನಿಯಮವನ್ನು ಅಕ್ಷಯ್‍ಕುಮಾರ್ ಪಾಲಿಸುತ್ತಿದ್ದರಾದರೂ ಅವರು ಈಗ ಪಾನ್‍ಮಸಾಲಾ ಜಾಹೀರಾತಿನಲ್ಲಿ ಕಾಣಿಸಿಕೊಂಡು ನಂತರ ಕ್ಷಮೆ ಕೇಳಿರುವುದು ಅಭಿಮಾನಿಗಳ ಮನ ಗೆದ್ದಿದೆ.

ಅದೇ ಅದೇ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್‍ನ ಬಾದ್ ಷಾ ಶಾರುಖ್‍ಖಾನ್ ಹಾಗೂ ಅಜಯ್‍ದೇವಗನ್ ಅವರು ಇದುವರೆಗೂ ಯಾವುದೇ ರೀತಿಯ ಸಮಾಜಾಯಿಷಿ ನೀಡಲು ಹೋಗದಿರುವುದು ಅವರ ಅಭಿಮಾನಿಗಳಲ್ಲೂ ಬೇಸರ ಮೂಡಿಸಿದೆ. ಇನ್ನಾದರೂ ಹಣ ಮಾಡುವ ದೃಷ್ಟಿಯಿಂದ ಕಲಾವಿದರು ತಂಬಾಕು, ಮದ್ಯ ಮತ್ತಿತರ ಜಾಹೀರಾತುಗಳಿಂದ ದೂರ ಉಳಿದು ಅಭಿಮಾನಿಗಳಿಗೆ ಬೆಲೆ ಕೊಡುತ್ತಾರೆಯೇ ಎಂಬುದನ್ನು ಕಾದು ನೋಡ ಬೇಕಾಗಿದೆ.  ಈ ಹಿಂದೆ ಬಾಲಿವುಡ್‍ನ ಬಿಗ್ ಬಿ ಕೂಡ ಕೆಲವು ಜಾಹೀರಾತುಗಳಲ್ಲಿ ನಟಿಸಿ ನಂತರ ಅಭಿಮಾನಿಗಳ ಕ್ಷಮಾಪಣೆ ಕೇಳಿದ ನಿದರ್ಶನಗಳು ಇವೆ.

Facebook Comments