ಹೆಚ್ಚು ಸಂಭಾವನೆ ಪಡೆಯುವ ವಿಶ್ವದ ಟಾಪ್-10 ನಟರ ಪಟ್ಟಿಯಲ್ಲಿ ಅಕ್ಷಯ್, ಸಲ್ಮಾನ್‍..!

ಈ ಸುದ್ದಿಯನ್ನು ಶೇರ್ ಮಾಡಿ

Actors--01

ಮುಂಬೈ (ಪಿಟಿಐ), ಆ.23- ಬಾಲಿವುಡ್ ಸೂಪರ್‍ಸ್ಟಾರ್‍ಗಳಾದ ಅಕ್ಷಯ್ ಕುಮಾರ್ ಮತ್ತು ಸಲ್ಮಾನ್ ಖಾನ್ ವಿಶ್ವದ ಅತ್ಯಧಿಕ ಸಂಭಾವನೆ ಪಡೆಯುವ ನಟರ ವಾರ್ಷಿಕ ಟಾಪ್ ಟೆನ್ ಫೋರ್ಬ್ಸ್  ಪಟ್ಟಿಯಲ್ಲಿ ಸ್ಥಾನಗಳಿಸಿದ್ದಾರೆ. 2018ರಲ್ಲಿ ಅಕ್ಷಯ್ 40.5 ದಶಲಕ್ಷ ಡಾಲರ್‍ಗಳ ಗಳಿಕೆಯೊಂದಿಗೆ (ಸುಮಾರು 283 ಕೋಟಿ ರೂ.ಗಳು) ಟಾಪ್-10 ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ಧಾರೆ. ಒಂಭತ್ತನೆ ಸ್ಥಾನ ಗಳಿಸಿರುವ ಸಲ್ಮಾನ್ 2018ರಲ್ಲಿ 38.5 ದಶಲಕ್ಷ ಡಾಲರ್ (ಸುಮಾರು 269 ಕೋಟಿ ರೂ.ಗಳು) ಸಂಭಾವನೆ ಸ್ವೀಕರಿಸಿದ್ದಾರೆ.  ಪಟ್ಟಿಯಲ್ಲಿರುವ ಇತರ ಟಾಪ್-10 ಅತ್ಯಧಿಕ ಸಂಭಾವನೆ ನಟರಲ್ಲಿ ಹಾಲಿವುಡ್ ಜಾರ್ಜ್ ಕ್ಲೂನಿ ಅಗ್ರ ಸ್ಥಾನದಲ್ಲಿದ್ದಾರೆ(236 ದಶಲಕ್ಷ ಡಾಲರ್‍ಗಳು).

Akshay-Kumar--02

ಉಕ್ಕಿನ ಶರೀರದ ಡ್ವೈಯ್ನ್ ಜಾನ್ಸನ್ ದ್ವಿತೀಯ (124 ದಶಲಕ್ಷ ಡಾಲರ್‍ಗಳು), ರಾಬರ್ಟ್ ಡೌನೆ ಜ್ಯೂನಿಯರ್ ತೃತೀಯ (81 ದಶಲಕ್ಷ ಡಾಲರ್) ಹಾಗೂ ಕ್ರಿಸ್ ಹೆಮ್ಸ್‍ವರ್ಥ್ ನಾಲ್ಕನೇ(64.5 ದಶಲಕ್ಷ ಡಾಲರ್‍ಗಳು) ಕ್ರಮಾಂಕದಲ್ಲಿದ್ದಾರೆ.

ಜಗದ್ವಿಖ್ಯಾತ ಕುಂಗ್‍ಫು ಪಟು ಜಾಕೀ ಚಾನ್ 45.5 ದಶಲಕ್ಷ ಡಾಲರ್‍ಗಳ ವಾರ್ಷಿಕ ಗಳಿಕೆಯೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ. ವಿಲ್ ಸ್ಮಿತ್(42 ದಶಲಕ್ಷ ಡಾಲರ್), ಆಡ್ಯಮ್ ಸಂಡ್ಲೆರ್(39.5 ದಶಲಕ್ಷ ಡಾಲರ್) ಹಾಗೂ ಕ್ರಿಸ್ ಇವಾನ್ಸ್ (34 ದಶಲಕ್ಷ ಡಾಲರ್) ಅನುಕ್ರಮವಾಗಿ ಆರು, ಎಂಟು ಹಾಗೂ ಹತ್ತನೇ ಸ್ಥಾನದಲ್ಲಿದ್ದರು.

Akshay-Kumar--01

Facebook Comments

Sri Raghav

Admin