ಬಾಲಿವುಡ್‍ ನಟ ಅಕ್ಷಯ್‌ಕುಮಾರ್‌‌ಗೆ ಮಾತೃ ವಿಯೋಗ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಸೆ.8-ಬಾಲಿವುಡ್‍ನ ಖ್ಯಾತ ಚಿತ್ರ ನಟ ಅಕ್ಷಯ್‍ಕುಮಾರ್ ಅವರಿಗೆ ಮಾತೃ ವಿಯೋಗವಾಗಿದೆ. ಆಸ್ಪತ್ರೆಗೆ ದಾಖಲಾಗಿದ್ದ ಅಕ್ಷಯ್‍ಕುಮಾರ್ ಅವರ ತಾಯಿ ಅರುಣಾ ಭಾಟೀಯಾ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.ಹೀರಾನಂದಾನಿ ಆಸ್ಪತ್ರೆಯ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಮ್ಮ ತಾಯಿ ಇಹಲೋಕ ತ್ಯಜಿಸಿದ್ದಾರೆ ಎಂದು ಅಕ್ಷಯ್‍ಕುಮಾರ್ ಟ್ವಿಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ.

ನನ್ನ ತಾಯಿ ನನ್ನ ಮೂಲ. ಅವರಿಲ್ಲದ ಈ ದಿನ ನನಗೆ ತುಂಬಾ ನೋವುಂಟು ಮಾಡಿದೆ. ಬೇರೆ ಲೋಕದಲ್ಲಿರುವ ನನ್ನ ತಂದೆಯ ಬಳಿಗೆ ನನ್ನ ತಾಯಿ ತೆರಳಿದ್ದಾರೆ ಎಂದು ಭಾವುಕರಾಗಿದ್ದಾರೆ. ನಿನ್ನೆ ರಾತ್ರಿ ಆಸ್ಪತ್ರೆಯಲ್ಲಿರುವ ನನ್ನ ತಾಯಿಯ ಆರೋಗ್ಯಕ್ಕಾಗಿ ಅಕ್ಷಯ್ ಪ್ರಾರ್ಥನೆ ಮಾಡಿಕೊಂಡಿದ್ದಾರೆ. ಮಗನ ಪ್ರಾರ್ಥನೆ ಬೆನ್ನಲ್ಲೇ ತಾಯಿ ಇಹಲೋಕ ತ್ಯಜಿಸಿರುವುದು ವಿಪರ್ಯಾಸವೇ ಸರಿ.

Facebook Comments