ಆಸ್ಪತ್ರೆಗೆ ದಾಖಲಾದ ಅಕ್ಷಯ್‍, ‘ರಾಮ ಸೇತು’ ಚಿತ್ರತಂಡದ 45 ಸಿಬ್ಬಂದಿಗಳಿಗೂ ಕೊರೋನಾ..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಏ.5-ಆಕ್ಷನ್ ಕಿಂಗ್ ಅಕ್ಷಯ್‍ಕುಮಾರ್‍ಗೂ ಕೊರೊನಾ ಕಾಣಿಸಿಕೊಂಡಿದ್ದು ಮುಂಜಾಗ್ರತಾ ಕ್ರಮವಾಗಿ ಅವರು ಅಸ್ಪತ್ರೆಗೆ ದಾಖಲಾಗಿದ್ದಾರೆ. ನನ್ನ ಆರೋಗ್ಯ ಸ್ಥಿರವಾಗಿದೆ. ಆದರೂ ಸೋಂಕು ಕಾಣಿಸಿಕೊಂಡಿರುವುದರಿಂದ ಸಿಟಿ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ನನ್ನ ಅಭಿಮಾನಿಗಳು ಆತಂಕಪಡಬೇಕಿಲ್ಲ ಎಂದು ಅಕ್ಷಯ್‍ಕುಮಾರ್ ಟ್ವೀಟ್ ಮಾಡಿದ್ದಾರೆ.

ರಾಮ ಸೇತು ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಂಡ ಐದು ದಿನಗಳ ನಂತರ ಅಕ್ಷಯ್‍ಕುಮಾರ್ ಅವರಿಗೆ ಸೋಂಕು ಕಾಣಿಸಿಕೊಂಡಿತ್ತು.ಮಾತ್ರವಲ್ಲಿ ಚಿತ್ರಿಕರಣದಲ್ಲಿ ಪಾಲ್ಗೊಂಡಿದ್ದ 45ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿರುವುದರಿಂದ ಆತಂಕ ಎದುರಾಗಿದೆ. ಇಂದು ಮಾದ್ ದ್ವೀಪದಲ್ಲಿ ಸಿನಿಮಾ ಚಿತ್ರೀಕರಣ ಮಾಡಬೇಕಿತ್ತು.

ಶೂಟಿಂಗ್‍ನಲ್ಲಿ 100 ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಬೇಕಿತ್ತು. ಹೀಗಾಗಿ ಎಲ್ಲರನ್ನೂ ತಪಾಸಣೆಗೆ ಒಳಪಡಿಸಿದಾಗ 40 ಮಂದಿ ಜೂನಿಯರ್ ಕಲಾವಿದರಿಗೆ ಸೋಂಕು ದೃಢಪಟ್ಟಿದೆ ಎಂದು ಭಾರತೀಯ ಸಿನಿ ನೌಕರರ ಒಕ್ಕೂಟದ ಅಧ್ಯಕ್ಷ ಬಿ.ಎನ್.ತಿವಾರಿ ತಿಳಿಸಿದ್ದಾರೆ.

Facebook Comments