ಭಾರತದ ಮೇಲೆ ದಾಳಿಗೆ ಎಕ್ಯೂಐಎಸ್ ಉಗ್ರರು ತಯಾರಿ

ಈ ಸುದ್ದಿಯನ್ನು ಶೇರ್ ಮಾಡಿ

Terrorist--01

ವಿಶ್ವಸಂಸ್ಥೆ, ಆ.13-ಭಾರತೀಯ ಉಪಖಂಡದಲ್ಲಿನ ಅಲ್ ಕೈದಾ(ಅಲ್-ಕೈದಾ ಇನ್ ದಿ ಇಂಡಿಯನ್ ಸಬ್‍ಕಾಂಟಿನೆಂಟ್-ಎಕ್ಯೂಐಎಸ್) ಎಂಬ ಹೊಸ ಭಯೋತ್ಪಾದನೆ ಸಂಘಟನೆಯ ಕರಾಳ ನೆರಳು ಈಗ ಭಾರತದ ಮೇಲೆ ಆವರಿಸಿದೆ.  ಪಾಕಿಸ್ತಾನದ ಹಲವು ಉಗ್ರಗಾಮಿ ಬಣಗಳು, ಅಲ್-ಕೈದಾ ಭಯೋತ್ಪಾದಕರು ಹಾಗೂ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳು ಭಾರತದ ವಿರುದ್ಧ ಕತ್ತಿ ಮಸೆಯುತ್ತಿರುವಾಗಲೇ ಹೊಸ ಸಂಘಟನೆಯೊಂದು ದಾಳಿಗೆ ಸಂಚು ರೂಪಿಸುತ್ತಿವೆ ಎಂಬ ಆತಂಕಕಾರಿ ಸಂಗತಿಯನ್ನು ವಿಶ್ವಸಂಸ್ಥೆ ವರದಿಯೊಂದು ತಿಳಿಸಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಅಲ್-ಕೈದಾ ದಿಗ್ಬಂಧನ ಸಮಿತಿಗೆ ವಿಶ್ಲೇಷಣಾತ್ಮಕ ಸಹಕಾರ ಮತ್ತು ದಿಗ್ಬಂಧನ ಉಸ್ತುವಾರಿ ಘಟಕವು 22ನೇ ವರದಿಯನ್ನು ಸಲ್ಲಿಸಿದೆ.

ಈ ವರದಿಯಲ್ಲಿ ಎಸ್‍ಕ್ಯೂಐಎಸ್ ಉಗ್ರಗಾಮಿ ಸಂಘಟನೆಯ ಸದಸ್ಯರು ಭಾರತದ ಒಳಗೆ ದಾಳಿಗಳನ್ನು ನಡೆಸಲು ಸೈದ್ಧಾಂತಿಕ ಒಲವು ಹೊಂದಿದ್ದಾರೆ ಎಂಬ ಸಂಗತಿಯನ್ನು ತಿಳಿಸಲಾಗಿದೆ. ಭಾರತದಲ್ಲಿ ದಾಳಿ ನಡೆಸಲು ಈ ಬಣದ ಉಗ್ರರು ಸಂಚು ರೂಪಿಸಿದ್ದರೂ, ಇದರ ಸಾಮಥ್ರ್ಯ ಕಡಿಮೆ. ಮಿಗಿಲಾಗಿ ಭಾರತದಾದ್ಯಂತ ವ್ಯಾಪಕ ಬಂದೋಬಸ್ತ್ ಇರುವುದರಿಂದ ಆಕ್ರಮಣ ನಡೆಸಲು ಹಿಂದೇಟು ಹಾಕುತ್ತಿವೆ. ಆದರೂ ಸಮಯ ಸಾಧಿಸಿ ಭದ್ರತಾ ಲೋಪದ ಅವಕಾಶಗಳನ್ನು ಪಡೆದು ಯಾವುದೇ ಸಮಯದಲ್ಲಿ ದಾಳಿಗೆ ಹುನ್ನಾರ ನಡೆಸಿವೆ ಎಂಬ ಅಂಶವನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಐಕ್ಯೂಐಎಸ್ ಉಗ್ರರ ಕೇಂದ್ರ ಸ್ಥಾನ ಆಫ್ತಾನಿಸ್ತಾನ. ಈ ಸಂಘಟನೆಯಲ್ಲಿ ಸಾವಿರಾರು ಸದಸ್ಯರಿದ್ದಾರೆ. ಲಾಘ್‍ಮನ್, ಪಾಕ್ಟಿಕಾ, ಕಂದಹಾರ್, ಘಜ್ನಿ ಮತ್ತು ಝಬುಲ್ ಪ್ರಾಂತ್ಯಗಳಲ್ಲಿ ಇದರ ಶಾಖಾ ಕಚೇರಿಗಳಿವೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin