ಬಾಲಿವುಡ್ ಬೆಡಗಿ ಆಲಿಯಾ ಭಟ್‍ಗೂ ಕೊರೊನಾ..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಏ.2-ಬಾಲಿವುಡ್ ಬೆಡಗಿ ಆಲಿಯಾ ಭಟ್‍ಗೂ ಕೊರೊನಾ ಸೋಂಕು ತಗುಲಿದೆ. ನನಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಗೃಹ ನಿರ್ಬಂಧನದಲ್ಲಿದ್ದೇನೆ ಎಂದು ಆಲಿಯಾ ಇನ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ನನ್ನನ್ನು ತಪಾಸಣೆ ನಡೆಸಿದ ವೈದ್ಯರು ಸೋಂಕು ತಗುಲಿರುವುದನ್ನು ದೃಢಪಡಿಸುತ್ತಿದ್ದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಸ್ವಯಂ ನಿರ್ಬಂಧನೆಗೆ ಒಳಗಾಗಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.

ಕಳೆದ ಮಾ.11 ರಂದು ತಪಾಸಣೆಗೆ ಒಳಗಾಗಿದ್ದ ಆಲಿಯಾ ಅವರಿಗೆ ನೆಗೆಟಿವ್ ವರದಿ ಬಂದಿತ್ತು. ನಂತರ ಆಕೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಹಾಗೂ ಆಕೆಯ ಬಾಯ್‍ಫ್ರೆಂಡ್ ರಣಬೀರ್ ಕಫೂರ್ ನಾಯಕತ್ವದ ಗಂಗೂಭಾಯಿ ಕಥಿಯಾವಾಡಿ ಚಿತ್ರದ ಶೂಟಿಂಗ್‍ನಲ್ಲಿ ಪಾಲ್ಗೊಂಡ ನಂತರ ಕೊರೊನಾ ಪಾಸಿಟಿವ್ ಆಗಿದೆ.

ಇತ್ತಿಚೆಗೆ ಮುಂಬೈನಲ್ಲಿ ಕೊರೊನಾ ಸೋಂಕು ಪ್ರಕರಣಗಳು ಉಲ್ಬಣಗೊಳ್ಳುತ್ತಿವೆ. ನಿನ್ನೆ ಒಂದೇ ದಿನ 8646 ಹೊಸ ಸೋಂಕು ಪ್ರಕರಣಗಳು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

Facebook Comments