ಆಲಿಬಾಬಾ ಸಂಸ್ಥೆಗೆ 2.8 ಬಿಲಿಯನ್ ಅಮೆರಿಕನ್ ಡಾಲರ್ ದಂಡ

ಈ ಸುದ್ದಿಯನ್ನು ಶೇರ್ ಮಾಡಿ

ಬೀಜಿಂಗ್, ಏ.10- ವಿಶ್ವದ ಬೃಹತ್ ಇ-ಕಾಮರ್ಸ್ ಸಂಸ್ಥೆಗೆ ಚೀನಾ ಸರ್ಕಾರ 2.8 ಬಿಲಿಯನ್ ಅಮೆರಿಕನ್ ಡಾಲರ್ ದಂಡ ವಿಧಿಸಿದೆ. ಚೀನಾದಲ್ಲಿ ಐಟಿ ಸಂಸ್ಥೆಗಳ ಬೆಳವಣಿಗೆಗೆ ಸರ್ಕಾರ ಕಡಿವಾಣ ಹಾಕುತ್ತಿದೆ ಎಂಬ ಹೇಳಿಕೆ ನೀಡುವ ಮೂಲಕ ಸ್ಪರ್ಧಾತ್ಮಕ ವಿರೋಧಿ ಧೋರಣೆ ಪ್ರದರ್ಶಿಸಿದ್ದ ಆಲಿಬಾಬಾ ಸಂಸ್ಥೆಗೆ ಚೀನಾ ದೇಶದ ಕಾನೂನು ನಿಯಂತ್ರಕರು ದಂಡ ವಿಧಿಸಿದ್ದಾರೆ.

ಅಲಿಬಾಬಾ ಸಂಸ್ಥೆಯವರು ಚಿಲ್ಲರೆ ವ್ಯಾಪಾರಿಗಳ ಸ್ಪರ್ಧೆಯನ್ನು ಮಿತಿಗೊಳಿಸಲು ಮತ್ತು ಸರಕುಗಳ ಮುಕ್ತ ಪ್ರಸರಣಕ್ಕೆ ಅಡ್ಡಿಮಾಡಲು ತನ್ನ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಭಾರಿ ದಂಡ ವಿಧಿಸಲಾಗಿದೆ ಎಂದು ಚೀನಾ ಸರ್ಕಾರ ಸ್ಪಷ್ಟಪಡಿಸಿದೆ.

Facebook Comments