ನಾಳೆಯಿಂದ ಸಂಸತ್ ಅವೇಶನ ಹಿನ್ನೆಲೆಯಲ್ಲಿ ಇಂದು ಸರ್ವಪಕ್ಷ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ನ.28- ಸಂಸತ್ತಿನ ಚಳಿಗಾಲದ ಅವೇಶನ ಸೋಮವಾರ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಸರ್ಕಾರವು ಇಂದು ನಡೆಸಿದ ಸರ್ವಪಕ್ಷಗಳ ಸಭೆಯಲ್ಲಿ ಬಹುತೇಕ ಪ್ರತಿಪಕ್ಷಗಳು ಪೆಗಾಸಸ್ ಗೂಢಚರ್ಯೆ ವಿವಾದ, ಬೆಲೆ ಏರಿಕೆ ಮತ್ತು ನಿರುದ್ಯೋಗ ಸಮಸ್ಯೆಗಳ ಬಗ್ಗೆ ಚರ್ಚೆನಡೆಸಬೇಕು ಎಂದು ಒತ್ತಾಯಿಸಿದೆ.

ಪಶ್ಚಿಮ ಬಂಗಾಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಗಡಿಭದ್ರತಾ ಪಡೆ(ಬಿಎಸ್‍ಎಫ್) ಕಾರ್ಯ ವ್ಯಾಪ್ತಿ ಹೆಚ್ಚಿಸಿರುವ ವಿಷಯವನ್ನು ಸಹ ಸಭೆಯಲ್ಲಿ ಪ್ರತಿಪಕ್ಷ ನಾಯಕರು ಪ್ರಸ್ತಾಪಿದಿರು ಎಂದು ಬಲ್ಲಮೂಲಗಳು ತಿಳಿಸಿವೆ.

ತೃಣ ಮೂಲ ಕಾಂಗ್ರೆಸ್ ಧುರೀಣರಾದ ಸುದೀಪ್ ಬಂಧೊಪಾಧ್ಯಾಯ ಮತ್ತು ಡೆರಿಕ್ ಓಬ್ರಿಯಾನ್ ಅವರು ಕನಿಷ್ಠ ಬೆಂಬಲ ಬೆಲೆ ಮತ್ತು ಲಾಭದಾಯಕ ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳ ಬಂಡವಾಳವನ್ನು ವಾಪಸಾತಿ ವಿಚಾರವನ್ನು ಪ್ರಸ್ತಾಪಿದರೆಂದು ಗೊತ್ತಾಗಿದೆ.

ಅವೇಶನದ ಮುನ್ನಾ ದಿನ ನಡೆದ ಈ ಸಾಂಪ್ರದಾಯಿಕ ಸಭೆಯಲ್ಲಿ ಕಾಂಗ್ರೆಸ್‍ನಿಂದ ಮಲ್ಲಿಕಾರ್ಜುನ ಖರ್ಗೆ, ಅೀರ್ ರಂಜನ್ ಚೌಧರಿ ಮತ್ತು ಆನಂದ ಶರ್ಮಾ ಡಿಎಂಕೆ ಇಂದ ಟಿಆರ್.ಬಾಲು ಮತ್ತು ತಿರುಚ್ಚಿ ಶಿವ, ಎನ್‍ಸಿಪಿಯಿಂದ ಶರದ್‍ಪವಾರ್, ಶಿವಸೇನಾರಿಂದ ವಿನಾಯಕ್ ರಾವುತ್, ಸಮಾಜವಾದಿ ಪಕ್ಷದಿಂದ ರಾಮ್‍ಗೋಪಾಲ್ ಯಾದವ್, ಬಿಎಸ್‍ಪಿಯಿಂದ ಸತೀಶ್ ಮಿಶ್ರ, ಬಿಜೆಪಿಯಿಂದ ಪ್ರಸನ್ನ ಆಚಾರ್ಯ ಮತ್ತು ನ್ಯಾಷನಲ್ ಕಾನರೆನ್ಸ್ ನಾಯಕ ಫಾರೂಖ್ ಅಬ್ದುಲ್ಲಾ ಸೇರಿದಂತೆ ರಾಜಕೀಯ ಪಕ್ಷಗಳ ಧುರೀಣರು ಪಾಲ್ಗೊಂಡರು.

Facebook Comments

Sri Raghav

Admin