ಮೊದಲ ಬಾರಿಗೆ ಬಹಿರಂಗವಾಗಿ ಪ್ರತಿಕ್ರಿಯೆ ನೀಡಿದ ಅಲೋಕ್ ವರ್ಮಾ, ಹೇಳಿದ್ದೇನು..?

ಈ ಸುದ್ದಿಯನ್ನು ಶೇರ್ ಮಾಡಿ

Alok Vermaನವದೆಹಲಿ, ಜ.11- ದೇಶದ ಅಗ್ರಮಾನ್ಯ ತನಿಖಾ ಸಂಸ್ಥೆ-ಸಿಬಿಐಗೆ ಬಾಹ್ಯ ಒತ್ತಡ ಎಂದಿಗೂ ಅಪಾಯಕಾರಿ ಎಂದು ನಿರ್ಗಮಿತ ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ ಬೇಸರದಿಂದ ನುಡಿದಿದ್ದಾರೆ. ಕೇಂದ್ರ ಸರ್ಕಾರ ಮತ್ತು ಸಿಬಿಐ ಸಂಸ್ಥೆಯ ನಡುವಿನ ಮುಸುಕಿನ ಗುದ್ದಾಟ ತೀವ್ರಗೊಂಡು ಇದೇ ಮೊದಲ ಬಾರಿಗೆ ವಿವಾದ ಸಂಬಂಧ ನಿರ್ಗಮಿತ ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ ಮನ ಮುರಿದಿದ್ದಾರೆ.

ಕೋರ್ಟ್ ಆದೇಶದ ಬಳಿಕ ಸಿಬಿಐಗೆ ವಾಪಸಾಗಿದ್ದ ಅಲೋಕ್ ವರ್ಮಾ ಅವರನ್ನು ಕೇಂದ್ರ ಸರ್ಕಾರ ಅಗ್ನಿಶಾಮಕ ದಳಕ್ಕೆ ವರ್ಗಾವಣೆ ಮಾಡುವ ಮೂಲಕ ಅಚ್ಚರಿ ಮೂಡಿಸಿದೆ. ಸರ್ಕಾರದ ಈ ನಿರ್ಧಾರಕ್ಕೆ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿರುವ ಅಲೋಕ್ ವರ್ಮಾ ಸಿಬಿಐ ಮುಖ್ಯಸ್ಥನಾಗಿ ಆಯ್ಕೆಯಾದ ದಿನದಿಂದಲೂ ನಾನು ಸಂಸ್ಥೆಯ ಸಮಗ್ರತೆ ಕಾಪಾಡಲು ಪ್ರಯತ್ನಿಸಿದ್ದೆ.

ದೇಶದ ಅತ್ಯುನ್ನತ ತನಿಖಾ ಸಂಸ್ಥೆ ಯಾವುದೇ ರೀತಿಯ ಬಾಹ್ಯ ಒತ್ತಡಗಳಿಗೆ ಒಳಗಾಗದೆ ಕಾರ್ಯ ನಿರ್ವಹಿಸಬೇಕು. ಆದರೆ, ಕೆಲ ವ್ಯಕ್ತಿಗಳ ಸ್ವಹಿತಾಸಕ್ತಿಗೆ ನನ್ನ ಪ್ರಯತ್ನಗಳೆಲ್ಲವೂ ಬಲಿಯಾಯಿತು ಎಂದು ನೊಂದು ನುಡಿದಿದ್ದಾರೆ. ದುಃಖದ ವಿಚಾರವೆಂದರೆ ಕೇವಲ ಓರ್ವ ವ್ಯಕ್ತಿಯ ಸುಳ್ಳು ಆರೋಪಗಳಿಂದಾಗಿ ಕೇಂದ್ರ ಸರ್ಕಾರ ಬೇರೊಂದು ಇಲಾಖೆಗೆ ವರ್ಗಾವಣೆ ಮಾಡಿದೆ.

ಆದರೆ, ಇಲಾಖೆ ಯಾವುದೇ ಆದರೂ ನಾನು ನನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ಮತ್ತೆ ಅವಕಾಶ ಲಭಿಸಿದರೆ ಕೆಲಸ ಮಾಡಲು ಸಿದ್ಧ ಎಂದು ಅಲೋಕ್ ವರ್ಮಾ ಹೇಳಿದ್ದಾರೆ. ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತಾಧಿಕಾರ ಆಯ್ಕೆ ಸಮಿತಿ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ಅಗ್ನಿ ಶಾಮಕ ದಳದ ಡಿಜಿ ಆಗಿ ವರ್ಗಾವಣೆ ಮಾಡಿತ್ತು.

Facebook Comments