ಅಮಾನಿಕೆರೆಯಲ್ಲಿ ನೀರಿಲ್ಲ, ಹಕ್ಕಿಗಳ ಚಿಲಿಪಿಲಿ ಇಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು,ಜೂ.24- ಒಂದು ಕಡೆ ನೀರಿನ ಭವಣೆ, ಜಾನುವಾರುಗಳಿಗೆ ಮೇವಿಲ್ಲ. ನಿರೀಕ್ಷೆಯಂತೆ ಮಳೆಯಾಗದೆ ಬಹುತೇಕ ಕೆರೆಗಳಲ್ಲಿ ನೀರು ಸಂಗ್ರಹವಾಗಿಲ್ಲ. ಜಿಲ್ಲೆಯ ಅಮಾನಿಕೆರೆಯಲ್ಲೂ ಕೂಡ ನೀರು ಬತ್ತುಹೋಗಿದೆ. ಇದರಿಂದಾಗಿ ಸ್ಥಳೀಯ ಮತ್ತು ವಿದೇಶಿ ಹಕ್ಕಿಗಳಿಗೂ ತೊಂದರೆ ಎದುರಾಗಿದೆ.

ಸಂತಾನೋತ್ಪತ್ತಿಗೆಂದು ಜಿಲ್ಲೆಗೆ ಬರುತ್ತಿದ್ದ ವಿದೇಶಿ ಪಕ್ಷಿಗಳ ಪ್ರಮಾಣ ಕಡಿಮೆಯಾಗಿದೆ. ವಲಸೆ ಬಂದು ಕೆರೆಯ ದಂಡೆಗಳಲ್ಲಿ ಆಶ್ರಯಿಸುವ ಓಪನ್ ಸ್ಟಾರ್ಕ್, ಕೊಕ್ಕರೆ, ಕ್ಯಾಟಲ್ ಎಗ್ರೆಟ್, ಲಿಟಲ್ ಗ್ರೀನ್, ಬಿಟ್ಟರೇಟ್ ಸೇರಿದಂತೆ ಬಹುತೇಕ ವಿದೇಶಿ ಪಕ್ಷಿಗಳು ಕೆರೆಗಳಲ್ಲಿ ನೀರಿಲ್ಲದಿದೆ ಮರಳಿ ತಮ್ಮ ಮೂಲ ಸ್ಥಾನದತ್ತ ಹೊರಟಿವೆ.

ಬಿಟ್ಟರೇಟ್ ಹಕ್ಕಿಗಳಿಗೆ ಮಾರ್ಚ್ ನಿಂದ ಆಗಸ್ಟ್ ಅವರಿಗೆ ಸಂತಾನೋತ್ಪತ್ತಿಗೆ ಸೂಕ್ತ ಕಾಲ. ಈ ಪಕ್ಷಿಗಳು ಜೌಗುಪ್ರದೇಶದಲ್ಲಿ ತಮ್ಮ ಆಹಾರ ಅನ್ವೇಷಣೆಗೆ ತೊಡಗುತ್ತವೆ. ಈ ಪಕ್ಷಿಗಳಿಗೆ ಏಡಿ, ಮೀನು, ಸಿಗಡಿ ಸೇರಿದಂತೆ ಕೆಸರಿನ ಹುಳುಗಳು ಆಹಾರ. ಆದರೆ, ಕೆರೆಯಲ್ಲಿ ನೀರಿಲ್ಲದ ಕಾರಣ ಇವುಗಳಿಗೆ ತೀವ್ರ ಆಹಾರದ ಕೊರತೆ ಎದುರಾಗಿದೆ. ಗೂಡು ಕಟ್ಟುವಿಕೆಗೂ ಅಡ್ಡಿಯಾಗಿದೆ.

ಅಮಾನಿಕೆರೆ ಸುತ್ತಲೂ ಇರುವ ಬೆಟ್ಟಗುಡ್ಡಗಳಲ್ಲಿ ಮಳೆ ಸುರಿದರೆ ನೇರವಾಗಿ ಕೆರೆಗೆ ಹರಿದು ಬರುತ್ತದೆ. ಆದರೆ, ಕೆರೆಯ ಸುತ್ತಲೂ ಹೆಚ್ಚು ಪ್ರಮಾಣದಲ್ಲಿ ಒತ್ತುವರಿ ಜಮೀನಿದೆ. ಅಲ್ಲದೆ ಕೆರೆ ನೀರು ಹರಿದು ಬರುವಂತಹ ಮಾರ್ಗದಲ್ಲಿ ಒತ್ತುವರಿದಾರೂ ಒಡ್ಡುಗಳನ್ನು ನಿರ್ಮಿಸಿದ್ದು ಕೆರೆಗೆ ನೀರು ಬಾರದಂತೆ ಮಾಡಿದ್ದಾರೆ.

ಇದರ ಬಗ್ಗೆ ಹಲವು ವರ್ಷಗಳಿಂದ ಅಮಾನಿಕೆರೆಗೆ ನೀರು ಬಾರದೆ ಜಲ ಚರ ಪ್ರಾಣಿಗಳಿಗೆ ಬಾರಿ ಸಂಚಕಾರ ಬಂದಿದೆ. ತುಮಕೂರು ಅಮಾನಿಕೆರೆಗೆ ರಾಯಗಾಲುವೆಯಲ್ಲಿ ಸರಾಗವಾಗಿ ನೀರು ಸರಬರಾಜು ಮಾಡಲು ತ್ವರಿತವಾಗಿ ಕ್ರಮ ಕೈಗೂಂಡಿದ್ದರಿಂದ ನೀರು ಹರಿದಿತ್ತು.

ಅದರೆ ಮತ್ತೆ ರಾಯಗಾಲುವೆ ನ್ನು ಒತ್ತುವರಿ ಮಾಡಿರುವ ಹಿನ್ನಲೆಯಲ್ಲಿ ಅಮನಿಕೆರೆಗೆ ಒಳ ಹರಿವು ಕಡಿಮೆ ಅಗಿದೆ, ಅಲ್ಲದೆ ಹೇಮಾವತಿ ನಾಲೆಯ ನೀರು ಹರಿಸದೆ ಇರುವ ಹಿನ್ನೆಲೆಯಲ್ಲಿ ಅಂತರ್ಜಲ ಬತ್ತಿ ಹೋಗಿದೆ, ಅಲ್ಲದೆ ವಿದೇಶದಿಂದ ಬರುವ ವಲಸೆ ಪಕ್ಷಿಗಳು ಗಣ ನೀಯವಾಗಿ ಕಡಿಮೆ ಅಗಿದೆ ಇನ್ನಾದರು ನೀರು ಹರಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಅಗ್ರಹಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ