ಅಮರನಾಥ ಯಾತ್ರೆಗೆ ತೆರಳಿದ 21ನೇ ತಂಡ

ಈ ಸುದ್ದಿಯನ್ನು ಶೇರ್ ಮಾಡಿ

ಜಮ್ಮು,ಜು.22- ಕಳೆದ 21 ದಿನಗಳವರೆಗೆ ಒಟ್ಟು 2.70 ಲಕ್ಷ ಯಾತ್ರಿಕರು ಅಮರನಾಥ ಯಾತ್ರೆಯಲ್ಲಿ ಪಾಲ್ಗೊಂಡು ಗುಹಾಂತರ ದೇವಾಲಯದಲ್ಲಿ ಹಿಮಲಿಂಗ ದರ್ಶನ ಪಡೆದು ಪುನೀತರಾಗಿದ್ದಾರೆ.

ಈ ಮಧ್ಯೆ ಇಂದು 21ನೇ ತಂಡದ 3,178 ಯಾತ್ರಿಕರು ಜಮ್ಮುವಿನ ಭಗವತಿ ಬೇಸ್ ಕ್ಯಾಂಪ್‍ನಿಂದ 3,880 ಮೀಗಳಷ್ಟು ಎತ್ತರವಿರುವ ಅಮರನಾಥ ಯಾತ್ರೆಗೆ ವ್ಯಾಪಕ ಬಂದೋಬಸ್ತ್ ನಡುವೆ ಕಾಶ್ಮೀರ ಕಣಿವೆ ಮಾರ್ಗದಲ್ಲಿ ಪ್ರಯಾಣ ಬೆಳೆಸಿದ್ದಾರೆ.

ಜುಲೈ 1ರಿಂದ ಪ್ರಾರಂಭವಾಗಿರುವ 46ದಿನಗಳ ಅಮರನಾಥ ಯಾತ್ರೆಗೆ ಈತನಕ 2,72,004 ಯಾತ್ರಿಕರು ಅಮರನಾಥನ ದರ್ಶನ ಪಡೆದಿದ್ದಾರೆ ಎಂದು ಶ್ರೀ ಅಮರನಾಥ್‍ಜೀ ಪವಿತ್ರ ಮಂಡಳಿಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

21ನೇ ದಿನವಾದ ಇಂದು ಕೂಡ 3,178 ಯಾತ್ರಿಕರು ಭಗವತಿನಗರ ಯಾತ್ರಿ ನಿವಾಸದಿಂದ ಎರಡು ಬೆಂಗಾವಲು ಪಡೆಯೊಂದಿಗೆ ಯಾತ್ರೆ ಅಮರನಾಥ ಯಾತ್ರೆ ಕೈಗೊಂಡಿದ್ದಾರೆ.

ಇದರಲ್ಲಿ 1,544 ಮಂದಿ ಬಾಲ್ತಾಲ್ ಬೇಸ್ ಕ್ಯಾಂಪ್‍ನಲ್ಲಿ ಹಾಗೂ 1634 ಮಂದಿ ಪ್ರಯಾಣ ಮಹಲ್ಗಾಮ್ ಬೇಸ್ ಶಿಬಿರದಿಂದ ಪ್ರಯಾಣ ಬೆಳೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಎರಡು ಶಿಬಿರಗಳಿಂದ ಯಾತ್ರಾತ್ರಿಗಳ ಅನುಕೂಲಕ್ಕಾಗಿ ಹೆಲಿಕಾಪ್ಟರ್‍ಗಳ ವಿಶೇಷ ಸೇವೆ ಸಹ ಲಭ್ಯವಿದೆ.

Facebook Comments