ಅಮರನಾಥ್ ಯಾತ್ರೆಗೆ ಆನ್‍ಲೈನ್ ಮೂಲಕ ನೋಂದಣಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.6- ಮುಂದಿನ ತಿಂಗಳು 21ಕ್ಕೆ ಆರಂಭವಾಗಲಿರುವ ಅಮರನಾಥ್ ಯಾತ್ರೆಗೆ ಈ ಬಾರಿ ಆನ್‍ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅಮರನಾಥ್ ಯಾತ್ರೆ ಜು.21ರಿಂದ ಆ.3ರವರೆಗೆ ನಡೆಯಲಿದೆ. ಈ ಮೊದಲು ಸುಮಾರು 48 ದಿನ ನಡೆಯುತ್ತಿದ್ದ ಯಾತ್ರೆಯನ್ನು ಕೊರೊನಾದಿಂದಾಗಿ 15 ದಿನಗಳಿಗೆ ಕಡಿತಗೊಳಿಸಲಾಗಿದೆ.

ಅಮರ್‍ನಾಥ್ ಗುಹೆ ತಲುಪಲು ಎರಡು ಮಾರ್ಗಗಳಿದ್ದು, ಜಮ್ಮು, ಅನಂತ್‍ನಾಗ್, ಉಧಾಮ್‍ಪುರ್, ಪ್ಯಾನ್‍ಟಾಪ್ ದುರ್ಗಮ ಪ್ರದೇಶ ಹಾಗೂ ಪೆಹಲ್‍ಗಾಮ್ ವಾಹನಗಳನ್ನು ಬಳಸಿ 45 ಕಿ.ಮೀ. ನಡೆದರೆ ಪೋನಿ, ಕಾಪ್ಟರ್ ತಲುಪಬಹುದು. ಈ ಯಾತ್ರೆಗೆ ಕನಿಷ್ಠ 5 ದಿನ ಬೇಕಾಗುತ್ತದೆ.

ಈ ಬಾರಿ ಈ ರಸ್ತೆ ಬಳಕೆಗೆ ಅನುಮತಿ ರದ್ದು ಮಾಡಲಾಗಿದೆ. ಬದಲಿಗೆ ಶ್ರೀನಗರ, ಬಾಳ್‍ಟಾಲ್ ಮಾರ್ಗ ಬೆಸ್‍ಕ್ಯಾಮ್ಪ್‍ನಿಂದ 17 ಕಿ.ಮೀ. ನಡೆದು ಅತಿ ದುರ್ಗಮ ಪ್ರದೇಶದ ಮೂಲಕ ಹೆಲಿಸರ್ವೀಸ್, ಕುದುರೆ ಸವಾರಿ ಅಥವಾ ಡೋಲಿ ಮೂಲಕ ಯಾತ್ರಾರ್ಥಿಗಳು ಗುಹೆ ತಲುಪಬಹುದು.

ಈ ಮೊದಲು ಯಾತ್ರೆ ನೋಂದಣಿ ಅರ್ಜಿಗಳು ಕೆಲವು ಬ್ಯಾಂಕ್‍ಗಳಲ್ಲಿ ಲಭ್ಯವಿತ್ತು. ಈ ಬಾರಿ ಆನ್‍ಲೈನ್ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಆಹಾರ, ವಸತಿ, ಸೇನಾ ಲಂಗರ್‍ಗಳಲ್ಲಿ ಮಾತ್ರ ಲಭ್ಯವಿದೆ. ಶ್ರೀನಗರದಿಂದ ಬೆಸ್ ಕ್ಯಾಮ್ಪ್ ತಲುಪಲು ಸರ್ಕಾರ ನೋಂದಣಿ ಮಾಡಿದ ವಾಹನಗಳಲ್ಲೇ ಹೋಗಬೇಕು. ಬದಲಿ ವಾಹನಗಳಿಗೆ ಅವಕಾಶವಿಲ್ಲ ಎಂದು ಹೇಳಲಾಗಿದೆ.

ಯಾತ್ರಾರ್ಥಿಗಳಿಗೆ ಸೇನಾ ಕ್ಯಾಂಪ್‍ಗಳಲ್ಲಿ ಊಟ, ವಿಶ್ರಾಂತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. 120 ಕಿ.ಮೀ. ದಾರಿಯಲ್ಲಿ 60 ಲಂಗರ್‍ಗಳಿರುತ್ತವೆ. ಎಲ್ಲಾ ಕಡೆ ಶುದ್ಧ ಸಸ್ಯಹಾರ, ನೀರು, ಹಾಲು , ಬಿಸ್ಕೇಟ್, ಬ್ರೆಡ್, ರಸ್ಕು ಪದಾರ್ಥಗಳನ್ನು ಪೂರೈಕೆ ಮಾಡಲಾಗುತ್ತದೆ. ಯಾತ್ರೆಗೆ ಹೊರಡುವವರು ಮಾಸಿಕವಾಗಿ ಸಿದ್ದರಾಗುವಂತೆ ಸಲಹೆ ನೀಡಲಾಗಿದೆ. 50 ವರ್ಷ ಮೇಲ್ಪಟ್ಟವರಿಗೆ ಅವಕಾಶವಿಲ್ಲ.

Facebook Comments