ಭಾರತರತ್ನ ಪುರಸ್ಕಾರದಿಂದ ಅಂಬೇಡ್ಕರ್ ವಂಚಿತರಾಗಿರುವುದು ವಿಷಾದನೀಯ : ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

ಅಲೋಕ(ಮಹಾರಾಷ್ಟ್ರ), ಅ.16(ಪಿಟಿಐ)-ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಮ್ಮ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಭಾರತರತ್ನ ಪುರಸ್ಕಾರದಿಂದ ವಂಚಿತರಾಗಿರುವುದು ಅತ್ಯಂತ ವಿಷಾದನೀಯ ಎಂದು ಬೇಸರದಿಂದ ನುಡಿದಿದ್ದಾರೆ. ವಿನಾಯಕ ದಾಮೋದರ ಸಾರ್ವಕರ್ ಅವರ ಸಂಸ್ಕಾರ ಮತ್ತು ಮೌಲ್ಯಗಳೇ ನಮ್ಮ ರಾಷ್ಟ್ರ ನಿರ್ಮಾಣದ ತಳಹದಿಯಾಗಿದೆ ಎಂದು ಅವರು ಬಣ್ಣಿಸಿದ್ದಾರೆ.

ಮಹಾರಾಷ್ಟ್ರದ ಅಲೋಕದಲ್ಲಿಂದು ಬಿಜೆಪಿ ಅಭ್ಯರ್ಥಿ ಪರ ಬೃಹತ್ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.ನಮ್ಮ ರಾಷ್ಟ್ರೀಯತೆಯ ಭದ್ರ ಬುನಾದಿಗೆ ಸಾರ್ವಕರ್ ಅವರ ತತ್ವಾದರ್ಶಗಳು ಮತ್ತು ಮೌಲ್ಯಗಳೇ ಕಾರಣ ಎಂದು ಮೋದಿ ಹೇಳಿದರು.

ಮಹಾರಾಷ್ಟ್ರ ಬಿಜೆಪಿ ಘಟಕ ಸಾರ್ವಕರ್ ಅವರಿಗೆ ಭಾರತರತ್ನ ಪುರಸ್ಕಾರ ನೀಡಬೇಕೆಂದು ಒತ್ತಾಯಿಸಿದ ಸಂದರ್ಭದಲ್ಲೇ ಮೋದಿಯವರ ಹೇಳಿಕೆ ಭಾರೀ ಪ್ರಾಮುಖ್ಯತೆ ಪಡೆದುಕೊಂಡಿದೆ. ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ದೇಶದ ಏಕತೆ ಮತ್ತು ಸಮಗ್ರತೆಗಾಗಿ 370ನೇ ವಿಧಿ ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಪಾಕಿಸ್ತಾನ ರೀತಿಯಲ್ಲಿ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿರುವುದು ನಾಚಿಕೆ ಗೇಡಿತನ ಎಂದು ಖಂಡಿಸಿದರು.

ಈ ಹಿಂದೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್-ಎಂಸಿಪಿ ಸರ್ಕಾರ ಇತ್ತು. ಭಾರೀ ಭ್ರಷ್ಟಾಚಾರದಿಂದ ಈ ಮೈತ್ರಿ ಕೂಟ ಮಹಾರಾಷ್ಟ್ರವನ್ನು ದಶಕಗಳಷ್ಟು ಹಿಂದಕ್ಕೆ ತಳ್ಳಿತು ಎಂದು ಆರೋಪಿಸಿದ ಮೋದಿ, ಬಿಜೆಪಿಯಿಂದ ಮಾತ್ರ ಸುಭದ್ರ ಸರ್ಕಾರ ಸಾಧ್ಯ ಎಂದು ಹೇಳಿದರು.

Facebook Comments