ಭಕ್ತರಿಲ್ಲದೆ ನಡೆಯುತ್ತಿರುವ ಇತಿಹಾಸ ಪ್ರಸಿದ್ದ ಅಂಬುಬಾಚಿ ಮೇಳ

ಈ ಸುದ್ದಿಯನ್ನು ಶೇರ್ ಮಾಡಿ

ಗುವಾಹಟಿ,ಜೂ.22- ಇತಿಹಾಸ ಪ್ರಸಿದ್ದ ಕಾಮಾಖ್ಯ ದೇವಸ್ಥಾನದಲ್ಲಿ ಇಂದಿನಿಂದ ಅಂಬುಬಾಚಿ ಮೇಳ ಪ್ರಾರಂಭವಾಗಿದ್ದು, ಜೂ.25ರವರೆಗೆ ನಡೆಯುವ ಈ ವಾರ್ಷಿಕ ಮೇಳದಲ್ಲಿ ಭಕ್ತರಿಗೆ ಅವಕಾಶವಿಲ್ಲದೆ ದೇವಾಲಯದ ಆಚರಣೆಗಳು ಮಾತ್ರ ನಡೆಯುತ್ತಿವೆ.

ದೇಶದ 51 ಶಕ್ತಿ ಪೀಠಗಳಲ್ಲೊಂದಾಗಿರುವ ನೀಲಾಚಲ್ ಬೆಟ್ಟದ ಮೇಲಿರುವ ಕಾಮಾಖ್ಯ ದೇವಾಲಯದಲ್ಲಿ ಪ್ರತಿವರ್ಷ ಜೂ. 22 ರಂದು ಅಂಬುಬಾಚಿ ಮೇಳ ಆರಂಭವಾಗುತ್ತದೆ.

ಅದರಿಂದ ಇಂದಿನಿಂದ ಮೇಳ ಪ್ರಾರಂಭವಾಇಗದ್ದು, ಜೂ.25ರವರೆಗೆ ಮೇಳ ನಡೆಯಲಿದೆ.  ಕಾಮಾಕ್ಯ ದೇವಿಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ.ಜಾತ್ರೆಗೆ ದೇಶದ ನಾನಾ ಕಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು, ಸಾಧುಸಂತರು ಆಗಮಿಸುತ್ತಾರೆ.

ಆದರೆ ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ಜಾತ್ರೆಗೆ ಬರುವ ಭಕ್ತರು, ಸಾಧುಗಳಿಗೆ ಈ ಬಾರಿ ಅವಕಾಶ ನೀಡದೆ ದೇವಾಲಯದ ಎಲ್ಲಾ ಪ್ರವೇಶದ್ವಾರಗಳನ್ನು ಮುಚ್ಚಲಾಗಿದೆ. ಇಂದು ಅಂಬುಬಾಚಿ ಪ್ರಬ್ರಿತಿ ಆಚರಣೆಗಳನ್ನು ನಡೆಸುವ ಮೂಲಕ ಅಂಬುಬಚಿ ಮೇಳ ಪ್ರಾರಂಭವಾಗಿದೆ.

ಕಳೆದ ವರ್ಷದ ಮೇಳದಲ್ಲಿ 25 ಲಕ್ಷಕ್ಕೂ ಹೆಚ್ಚು ಭಕ್ತರು, ಯಾತ್ರಿಕರನ್ನು ಒಟ್ಟುಗೂಡಿಸಲಾಯಿತು. ಕೊರೊನಾ ಹಿನ್ನೆಲೆಯಲ್ಲಿ, ದೇವಾಲಯಗಳ ಬಾಗಿಲುಗಳನ್ನು ಜೂ.30 ರವರೆಗೆ ಮುಚ್ಚಲು ದೇವಾಲಯ ನಿರ್ವಹಣಾ ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ಕಾಮಾಖ್ಯ ದೇವಾಲಯದ ಪ್ರಧಾನ ಅರ್ಚಕ ಕಬೀಂದ್ರ ಪ್ರಸಾದ್ ಶರ್ಮ ಹೇಳಿದ್ದಾರೆ.

Facebook Comments