ಬೆಂಗಳೂರಿನ ಶ್ವಾನಕ್ಕೆ ಅಮೇರಿಕನ್ ಪ್ರಶಸ್ತಿ!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,- ಭಾರತದ ಶ್ವಾನಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರೋಮ್ಯಾಂಟಿಕಾಡೆವಿ ತಳಿಯ ಸೈಬೀರಿಯನ್ ಹಸ್ಕಿ ಎಂಬ ಹೆಸರಿನ ಶ್ವಾನಕ್ಕೆಅತ್ಯುತ್ತಮ ತಳಿ ಎಂಬ ಅಮೇರಿಕನ್‍ಚಾಂಪಿಯನ್ ಪಟ್ಟ ಲಭಿಸಿದೆ. ಬೆಂಗಳೂರಿನ ಮನೋಜ್ ಕೃಷ್ಣ ಸಿ. ಅವರು ಸಾಕುತ್ತಿರುವ ಶ್ವಾನಕ್ಕೆ ಇತ್ತೀಚೆಗೆ ನಡೆದ ಅಮೇರಿಕನ್ ಕೆನ್ನೆಲ್ ಕ್ಲಬ್ ಡಾಗ್ ಶೋನಲ್ಲಿ ಪ್ರಶಸ್ತಿ ಸಂದಿದೆ.

ಬೆಂಗಳೂರಿನ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಟೆಲಿ ಕಮ್ಯುನಿಕೇಷನ್‍ಇಂಜಿನಿಯರಿಂಗ್ ಮಾಡಿರುವ ಮನೋಜ್ ಕೃಷ್ಣ ಅವರು, ಪ್ರಸ್ತುತ ಐಟಿ ಕಂಪನಿಯೊಂದರಲ್ಲಿ ಲೀಡ್‍ಕನ್ಸಲ್ಟೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಭಾರತದಲ್ಲಿ ಅತ್ಯಂತ ಹಳೆಯ ಕೆನ್ನೆಲ್‍ಕ್ಲಬ್‍ನಲ್ಲಿ ಒಂದಾಗಿರುವ ಸಿಲಿಕಾನ್ ಸಿಟಿ ಕೆನ್ನೆಲ್‍ಕ್ಲಬ್‍ನ (ಹಿಂದಿನ ಮೈಸೂರುಕೆನ್ನೆಲ್‍ಕ್ಲಬ್) ಜಂಟಿ ಕಾರ್ಯದರ್ಶಿಯಾಗಿರುವ ಮನೋಜ್ ಕೃಷ್ಣ ದೇಶಾದ್ಯಂತ ನಡೆಯುವ ಹಲವಾರು ಶ್ವಾನ ಪ್ರದರ್ಶನದಲ್ಲಿ ಭಾಗಿಯಾಗಿದ್ದಾರೆ.

ರಷ್ಯಾ, ದಕ್ಷಿಣಕೊರಿಯಾ, ಬೆಲಾರಸ್ ಮತ್ತುರೊಮೇನಿಯಾದಲ್ಲಿಅತ್ಯಂತಜನಪ್ರಿಯವಾಗಿರುವ ವಿಶ್ವದಅತ್ಯುತ್ತಮ ತಳಿಗಳು ಎನಿಸಿರುವ ಸೈಬೀರಿಯನ್ ಹಸ್ಕಿ ಮತ್ತುಚೋವ್‍ಚೋವ್ ಎಂಬ ಶ್ವಾನದ ತಳಿಗಳನ್ನು ಹೊಂದಿದ್ದಾರೆ. ದೇಶಾದ್ಯಂತ ನಡೆಯುವ ಶ್ವಾನ ಪ್ರದರ್ಶನಗಳಲ್ಲಿ ರೊಮ್ಯಾಂಟಿಕಾಕೆನ್ನೆಲ್ಸ್ ಬ್ಯಾನರ್‍ನಡಿಯಲ್ಲಿ ಅವರು ತಮ್ಮ ಎಲ್ಲಾ ಶ್ವಾನಗಳನ್ನು ಪ್ರದರ್ಶಿಸುತ್ತಾ ಬಂದಿದ್ದಾರೆ.

ಪ್ರಶಸ್ತಿ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಮನೋಜ್ ಕೃಷ್ಣ, ರೊಮ್ಯಾಂಟಿಕಾಡೆವಿ 2017ರ ಏಪ್ರಿಲ್ 1ರಂದು ಜನಿಸಿದ್ದು, ಇಂಟರ್‍ನ್ಯಾಷನಲ್ ಎಫ್‍ಸಿಐ ಡಾಗ್ ಶೋನಲ್ಲಿ ಪಾಲ್ಗೊಳ್ಳುವ ಮೂಲಕ ಪ್ರದರ್ಶನಕ್ಕೆ ಪಾದಾರ್ಪಣೆ ಮಾಡಿತ್ತಲ್ಲದೇ ಅತ್ಯುತ್ತಮ ಶ್ವಾನ ಎಂಬ ಪ್ರಶಸ್ತಿಯನ್ನೂ ಪಡೆದಿದೆ. ಇದಾದ ಬಳಿಕ ದೇಶದ ಚಾಂಪಿಯನ್‍ಶಿಪ್‍ಗಳಲ್ಲಿ ಅತ್ಯುತ್ತಮ ಹೆಣ್ಣು ಹಸ್ಕಿ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ ಎಂದು ತಿಳಿಸಿದರು.

Facebook Comments