ಅಯೋದ್ಯೆಯಲ್ಲಿ ನಿರ್ಮಾಣವಾಗಲಿದೆ 221ಮೀ. ವಿಶ್ವದ ಅತಿ ಎತ್ತರದ ರಾಮನ ಕಂಚಿನ ಪ್ರತಿಮೆ..!

ಈ ಸುದ್ದಿಯನ್ನು ಶೇರ್ ಮಾಡಿ

Ram-Statue--01
ಅಯೋಧ್ಯೆ, ನ.25- ಅಯೋಧ್ಯೆಯಲ್ಲಿ 221 ಮೀಟರ್ ಎತ್ತರದ ರಾಮನ ಪ್ರತಿಮೆ ನಿರ್ಮಾಣಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮನ ಪ್ರತಿಮೆ 151 ಮೀಟರ್ ಎತ್ತರವಿರಲಿದೆ. ಪ್ರತಿಮೆ ಮೇಲೆ 20 ಮೀಟರ್ ಎತ್ತರದ ಛತ್ರಿ ಇರಲಿದ್ದು, 50 ಮೀಟರ್ ಎತ್ತರದ ಆಧಾರದ ಪೀಠವಿದೆ ಎಂದು ಮಾಹಿತಿ ವಿಭಾಗದ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಅವನೀಶ್ ಅವಸ್ತಿ ಹೇಳಿದ್ದಾರೆ.

ಈ ಪ್ರತಿಮೆಯನ್ನು ಕಂಚಿನಿಂದ ಮಾಡಲಾಗುತ್ತಿದೆ. ಪ್ರತಿಮೆ ತಳದಲ್ಲಿ ಆಧುನಿಕ ಮ್ಯೂಸಿಯಂ ಇರಲಿದ್ದು, ಅಯೋಧ್ಯೆಯ ಇತಿಹಾಸವನ್ನು ಹೇಳಲಿದೆ. ರಾಮ ಮನುವಿನಿಂದ ಹಿಡಿದು ರಾಮ ಜನ್ಮಭೂಮಿಯ ಇಂದಿನ ಪರಿಸ್ಥಿತಿ ಮತ್ತು ಇಕ್ಷ್ವಾಕು ವಂಶದ ಕಥೆ ಈ ಮ್ಯೂಸಿಯಂನಲ್ಲಿರಲಿದೆ ಎಂದು ಅವರು ತಿಳಿಸಿದ್ದಾರೆ.

# ಅಯೋಧ್ಯೆಯಲ್ಲಿ ಮೊಳಗಿದ ರಾಮಕಹಳೆ; ಧರ್ಮಸಭೆಯಲ್ಲಿ ಮಾರ್ದನಿಸಿದ ರಾಮಮಂದಿರ ಬೇಡಿಕೆ
ಅಯೋಧ್ಯೆ, ನ.25- ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಹಿಂದೂಗಳು ರಾಮಕಹಳೆ ಮೊಳಗಿಸುತ್ತಿದ್ದು, ಧರ್ಮಸಭೆಯಲ್ಲಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ. ವಿಶ್ವ ಹಿಂದೂ ಪರಿಷತ್ ಮತ್ತು ಶಿವಸೇನೆ ಸೇರಿದಂತೆ ಪ್ರಮುಖ ಹಿಂದೂಪರ ಸಂಘಟನೆಗಳು ಇಂದು ಅಯೋಧ್ಯೆಯಲ್ಲಿ ಪ್ರತ್ಯೇಕ ರ್ಯಾಲಿ ಮತ್ತು ಸಭೆಗಳನ್ನು ನಡೆಸಿದವು. ರಾಮಮಂದಿರ ನಿರ್ಮಾಣವಾಗಲೇಬೇಕೆಂಬುದು ಹಿಂದೂಪರ ಸಂಘಟನೆಗಳ ಒಟ್ಟಾರೆ ಬೇಡಿಕೆಯಾಗಿತ್ತು.

ಈಗಾಗಲೇ ರಾಮಮಂದಿರಕ್ಕೆ ಭೇಟಿ ನೀಡಿರುವ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂಗಳ ಭಾವನೆಗಳೊಂದಿಗೆ ಚೆಲ್ಲಾಟವಾಡಬೇಡಿ. ಕೊಟ್ಟ ಮಾತಿನಂತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಿ ಎಂದು ಆಗ್ರಹಿಸಿದರು. ರ್ಯಾಲಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಉದ್ಧವ್ ಠಾಕ್ರೆಯವರು ಇದೇ ಮೊದಲ ಬಾರಿಗೆ ಅಯೋಧ್ಯೆಗೆ ಆಗಮಿಸಿದ್ದಾರೆ. ನಿನ್ನೆಯಷ್ಟೇ ಸರಯು ನದಿ ಬಳಿ ಪ್ರಾರ್ಥನೆ ಸಲ್ಲಿಸಿದ ಅವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.

Facebook Comments

Sri Raghav

Admin