ಏಷ್ಯನ್ ಚಾಂಪಿಯನ್‌ಶಿಪ್ಸ್‌ನಲ್ಲಿ ಬಾಕ್ಸರ್ ಅಮಿತ್‍ಗೆ ಚಿನ್ನದ ಪದಕ

ಈ ಸುದ್ದಿಯನ್ನು ಶೇರ್ ಮಾಡಿ

ಬ್ಯಾಂಕಾಕ್, ಏ.26-ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‍ನಲ್ಲಿ ನಡೆಯುತ್ತಿರುವ ಏಷ್ಯನ್ ಚಾಂಪಿಯನ್‍ಶಿಪ್‍ನಲ್ಲಿ ಭಾರತದ ಬಾಕ್ಸರ್‍ಗಳ ಪ್ರಾಬಲ್ಯ ಮುಂದುವರೆದಿದೆ. 52 ಕೆಜಿ ವಿಭಾಗದಲ್ಲಿ ಅಮಿತ್ ಪಂಗಲ್ ಇಂದು ದೇಶಕ್ಕೆ ಬಂಗಾರದ ಪದಕ ದಕ್ಕಿಸಿಕೊಟ್ಟಿದ್ದಾರೆ.

ಅಲ್ಲದೆ, ಇನ್ನೆರಡು ವಿಭಾಗಗಳ ಬಾಕ್ಸಿಂಗ್ ಸ್ಪರ್ಧೆಗಳಲ್ಲಿ ಎರಡು ರಜತ ಪದಕಗಳು ಭಾರತದ ಸಾಧನೆ ಪಟ್ಟಿಗೆ ಸೇರ್ಪಡೆಯಾಗಿವೆ. ಈ ವರ್ಷ ಅಮಿತ್ ಗಳಿಸುತ್ತಿರುವ ಎರಡನೇ ಚಿನ್ನದ ಪದಕ. ಈ ಸಾಧನೆಯೊಂದಿಗೆ ಅವರು ಏಷ್ಯನ್ ಚಾಂಪಿಯನ್‍ಶಿಪ್‍ನ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

ಕಳೆದ ವರ್ಷ ಏಷ್ಯನ್ ಗೇಮ್‍ನಲ್ಲಿ ಬಂಗಾರದ ಸಾಧನೆ ಮಾಡಿದ್ದ ಅಮಿತ್, ಇಂದು ನಡೆದ ಏಕಪಕ್ಷೀಯ ನಿರ್ಧಾರದ ಪಂದ್ಯದಲ್ಲಿ ಕೊರಿಯಾದ ಕಿಮ್ ಇಂಕ್ಯೂ ಕೊರಿಯಾ ಅವರನ್ನು ಮಣಿಸಿದರು.

ಫೆಬ್ರವರಿಯಲ್ಲಿ ಸ್ಟಂಜಾ ಮೆಮೋರಿಯಲ್ ಪಂದ್ಯಾವಳಿಯಲ್ಲೂ ಚಿನ್ನದ ಪದಕ ಗೆದ್ದಿದ್ದ ಅಮಿತ್ ತಮ್ಮ ಬಾಕ್ಸಿಂಗ್ ಸಾಮಥ್ರ್ಯದಲ್ಲಿ ಅಜೇಯಲಯ ಕಾಯ್ದುಕೊಂಡಿದ್ದಾರೆ.

ಈ ಹಿಂದೆ 49 ಕೆಜಿಗೆ ಸೀಮಿತವಾಗಿದ್ದ ಈ ವಿಭಾಗದ ಸ್ಪರ್ಧೆಯನ್ನು 52 ಕೆಜಿಗೆ ಏರಿಕೆ ಮಾಡಿದ ನಂತರ ಇದು ಅಮಿತ್ ಪಂಗಲ್‍ಗೆ ಚೊಚ್ಚಲ ಅಂತಾರಾಷ್ಟ್ರೀಯ ಸ್ಪರ್ಧೆಯಾಗಿತ್ತು.

49 ಕೆಜಿ ಬಾಕ್ಸಿಂಗ್‍ನಲ್ಲಿ ಭಾರತದ ಮತ್ತೊಬ್ಬ ಹೆಮ್ಮೆಯ ಬಾಕ್ಸರ್ ಮತ್ತು ನ್ಯಾಷನಲ್ ಚಾಂಪಿಯನ್ ದೀಪಕ್‍ಸಿಂಗ್ ರಜತ ಪದಕ ಗಳಿಸಿದ್ದಾರೆ. ಅವರು ಉಜಕಿಸ್ಥಾನದ ನಡಿರ್‍ಜೋನ್ ಮಿರ್ಜಾಮೆಡೋವ್ ಅವರನ್ನು ಮಣಿಸಿದರು. 56 ಕೆಜಿ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಕವಿಂದರ್ ಸಿಂಗ್ ಬಿಸ್ತ್ ಬೆಳ್ಳಿ ಪದಕ ಗೆದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ