ಗಡಿ ಉಲ್ಲಂಘನೆಗೆ ತಕ್ಕ ಶಾಸ್ತಿ : ಅಮಿತ್ ಶಾ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.17-ಭಾರತದ ಭದ್ರತೆ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಗಡಿ ಉಲ್ಲಂಘನೆ ಮಾಡುವವರಿಗೆ ತಕ್ಕ ಶಾಸ್ತಿ ಶತ ಸಿದ್ಧ ಎಂದು ಪಾಕಿಸ್ತಾನಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ. ಭಾರತದ ಗಡಿ ಉಲ್ಲಂಘನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಅಂತಹ ದುಸ್ಸಾಹಸಕ್ಕೆ ದಿಟ್ಟ ಪ್ರತ್ಯುತ್ತರ ನೀಡುತ್ತೇವೆ ಎಂದು ಪುನರುಚ್ಚರಿಸಿದರು.

ದೆಹಲಿಯಲ್ಲಿಂದು ನಡೆದ ಆಲ್ ಇಂಡಿಯಾ ಮ್ಯಾನೇಜ್‍ಮೆಂಟ್ ಅಸೋಸಿಯೇಷನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ಗಡಿ ಪ್ರದೇಶದಲ್ಲಿ ಒಂದೇ ಒಂದು ಅಂಗುಲ ಉಲ್ಲಂಘನೆಯಾಗಲು ಬಿಡುವುದಿಲ್ಲ. ಅದೇ ರೀತಿ ನಮ್ಮ ಯೋಧರ ಒಂದೇ ಒಂದು ಹನಿ ರಕ್ತ ವ್ಯರ್ಥವಾಗಲು ಆಸ್ಪದ ನೀಡುವುದಿಲ್ಲ ಎಂದು ಶಾ ಹೇಳಿದರು.

Facebook Comments