ಅಹಿಂಸಾ ವಾದವೇ ಹಿಂದೂ ಧರ್ಮದ ತಿರುಳು: ಅಮಿತ್ ಷಾ

ಈ ಸುದ್ದಿಯನ್ನು ಶೇರ್ ಮಾಡಿ

ಭೋಪಾಲ್,ಏ.24- ಹಿಂದೂ ಧರ್ಮದಲ್ಲಿ ಎಂದಿಗೂ ಉಗ್ರವಾದ ಇರಲು ಸಾಧ್ಯವೇ ಇಲ್ಲ. ವಿರೋಧ ಪಕ್ಷಗಳು ಯಾವುದೋ ಒಂದು ಘಟನೆಯನ್ನು ಮುಂದಿಟ್ಟುಕೊಂಡು ಕೇಸರಿ ಭಯೋತ್ಪಾದನೆ ಇಲ್ಲವೆ ಹಿಂದೂ ಭಯೋತ್ಪಾದನೆ ಹುಟ್ಟು ಹಾಕುತ್ತಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕಿಡಿಕಾರಿದ್ದಾರೆ.

ಈ ಮೂಲಕ ಪರೋಕ್ಷವಾಗಿ ಮಲೆಗಾಂವ್ ಬಾಂಬ್ ಸ್ಫೋಟದ ಪ್ರಮುಖ ಆರೋಪಿಯಾಗಿ ಸದ್ಯಕ್ಕೆ ನ್ಯಾಯಾಲಯದಿಂದ ಜಾಮೀನಿನ ಮೇಲೆ ಹೊರಬಂದು ಭೋಪಾಲ್ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸಾಧ್ವಿ ಪ್ರಜ್ಞಾ ಸಿಂಗ್‍ಗೆ ಟಿಕೆಟ್ ನೀಡಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.

ಸನಾತನ ಧರ್ಮ ಎನಿಸಿದ ಹಿಂದೂ ಧರ್ಮದಲ್ಲಿ ಉಗ್ರವಾದಿತನಕ್ಕೆ ಎಂದೂ ಅವಕಾಶ ನೀಡಿಲ್ಲ. ಹಿಂದೂ ಧರ್ಮ ಶಾಂತಿಪ್ರಿಯ ಧರ್ಮವೇ ಹೊರತು ಅಹಿಂಸಾ ಧರ್ಮಕ್ಕೆ ಪ್ರೇರಣೆ ನೀಡುವುದಿಲ್ಲ. ಭಾರತದ ಮೂಲ ತಿರುಳೇ ಅಹಿಂಸಾವಾದ ಎಂಬುದನ್ನು ನಾವ್ಯಾರು ಮರೆಯಬಾರದು.

ಮಧ್ಯಪ್ರದೇಶದಲ್ಲಿ ಮಾತನಾಡಿರುವ ಅವರು, ಸಾಧ್ವಿ ಪ್ರಜ್ಞಾ ಸಿಂಗ್‍ಗೆ ಭೋಪಾಲ್‍ನಿಂದ ಟಿಕೆಟ್ ನೀಡಿರುವುದನ್ನು ಬಲವಾಗಿ ಸಮರ್ಥಿಸಿ ಕೊಂಡಿದ್ದಾರೆ. ಮಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅವರ ಕೈವಾಡ ಇಲ್ಲ ಎಂಬುದು ದೃಢವಾದ ನಂತರವೇ ಟಿಕೆಟ್ ನೀಡಲು ಪಕ್ಷ ತೀರ್ಮಾನಿಸಿತು.

ಇಂದು ಭೋಪಾಲ್‍ನಲ್ಲಿ ಅವರಿಗೆ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತವಾಗುತ್ತಿ ದೆ.ಅನುಮಾನವೇ ಬೇಡ. ಭಾರೀ ಮತಗಳ ಅಂತರದಿಂದ ಅವರು ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ