ಉಗ್ರವಾದ ನಿಯಂತ್ರಣ ಕುರಿತು ಅಮಿತ್ ಶಾ ನೇತೃತ್ವದಲ್ಲಿ ಮಹತ್ವದ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.27- ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿಂದು ಎಡಪಂಥೀಯ ಉಗ್ರವಾದ ನಿಯಂತ್ರಣ ಕುರಿತು ಪರಿಶೀಲನಾ ಸಭೆ ನಡೆಯಿತು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಗಿರಿರಾಜ್ ಸಿಂಗ್, ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ, ಸಂಪರ್ಕ, ಮಾಹಿತಿ ತಂತ್ರಜ್ಞಾನ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ರಾಜ್ಯ ಸಚಿವ ಜನರಲ್ ವಿ.ಕೆ.ಸಿಂಗ್, ಗೃಹ ವ್ಯವಹಾರಗಳ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ, ಬಿಹಾರ, ಒಡಿಶಾ, ಮಹಾರಾಷ್ಟ್ರ, ತೆಲಂಗಣ, ಮಧ್ಯಪ್ರದೇಶ ಮತ್ತು ಜಾರ್ಖಂಡ್ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಆಂಧ್ರಪ್ರದೇಶದ ಗೃಹ ಸಚಿವರು, ಛತ್ತೀಸ್ ಗಢ, ಪಶ್ಚಿಮ ಬಂಗಾಳ ಮತ್ತು ಕೇರಳದ ಹಿರಿಯ ಅಧಿಕಾರಿಗಳು, ಕೇಂದ್ರ ಗೃಹ ಕಾರ್ಯದರ್ಶಿ, ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ ಹಿರಿಯ ಅಧಿಕಾರಿಗಳು ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಹಲವು ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕೇಂದ್ರ ಸರ್ಕಾರ ಎಡಪಂಥೀಯ ಉಗ್ರವಾದದಿಂದ ಬಾತವಾಗಿರುವ ರಾಜ್ಯಗಳ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಅಮಿತ್ ಶಾ ಹೇಳಿದರು. ಪ್ರಧಾನಮಂತ್ರಿ ಅವರ ನಾಯಕತ್ವದಲ್ಲಿ ಎಡಪಂಥೀಯ ಉಗ್ರವಾದವನ್ನು ತಗ್ಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಪ್ರಯತ್ನಗಳು ಸಾಕಷ್ಟು ಯಶಸ್ವಿ ನೀಡಿವೆ. ಕಳೆದ 40 ವರ್ಷದಲ್ಲಿ 16 ಸಾವಿರಕ್ಕೂ ಅಕ ನಾಗರಿಕರು ಹತರಾಗಿದ್ದಾರೆ. ಈಗ ಎಡಪಂಥೀಯ ಉಗ್ರವಾದ ಘಟನೆಗಳು ಶೇ.23ರಷ್ಟು ಕಡಿಮೆಯಾಗಿವೆ. ಸಾವಿನ ಸಂಖ್ಯೆ ಶೇ.21ರಷ್ಟು ಇಳಿಕೆಯಾಗಿದೆ ಎಂದು ತಿಳಿಸಿದರು.

ದಶಕಗಳ ಹೋರಾಟದ ಬಳಿಕ ಇದೇ ಮೊದಲ ಬಾರಿಗೆ ಸಾವಿನ ಸಂಖ್ಯೆ 200ಕ್ಕಿಂತ ಕಡಿಮೆ ಪ್ರಮಾಣದಲ್ಲಿದೆ. ಎಡಪಂಥೀಯ ಉಗ್ರವಾದ ಸಮಸ್ಯೆಯನ್ನು ಸಂಪೂರ್ಣವಾಗಿ ತೊಡೆದು ಹಾಕುವವರೆಗೆ ಬಾತ ರಾಜ್ಯಗಳ ಸಮಗ್ರ ಅಭಿವೃದ್ಧಿ ಅಸಾಧ್ಯ. ಅದನ್ನು ನಿರ್ಮೂಲನೆ ಮಾಡದ ಹೊರತು ಪ್ರಜಾಪ್ರಭುತ್ವವನ್ನು ತಳಮಟ್ಟಕ್ಕೆ ತೆಗೆದುಕೊಂಡು ಹೋಗುವುದು ಸಾಧ್ಯವಿಲ್ಲ. ಹೀಗಾಗಿ ಈವರೆಗೆ ಸಾಸಿರುವುದಕ್ಕೆ ತೃಪ್ತಿಪಟ್ಟುಕೊಳ್ಳುವ ಬದಲು ಇನ್ನೂ ಆಗಬೇಕಾಗಿರುವ ಕಾರ್ಯವನ್ನು ಸಾಸಲು ವೇಗ ಹೆಚ್ಚಿಸಬೇಕಿದೆ ಎಂದರು.

ಭಾರತ ಸರ್ಕಾರ ರಾಜಕೀಯ ಪಕ್ಷಗಳತ್ತ ಗಮನಹರಿಸದೆ ಹಲವು ವರ್ಷಗಳಿಂದ ಎರಡು ರಂಗಗಳಲ್ಲಿ ಸಮರವನ್ನು ನಡೆಸುತ್ತಿದೆ. ಯಾರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ಮುಖ್ಯವಾಹಿನಿಗೆ ಸೇರ್ಪಡೆಯಾಗಲು ಬಯಸುತ್ತಾರೋ ಅಂತವರನ್ನು ಆತ್ಮೀಯವಾಗಿ ಸ್ವಾಗತಿಸಲಾಗುತ್ತಿದೆ. ಯಾರು ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಅಮಾಯಕ ಜನರು ಮತ್ತು ಪೊಲೀಸರನ್ನು ಗಾಯಗೊಳಿಸುತ್ತಿದ್ದಾರೋ ಅವರಿಗೆ ಅದೇ ವಿಧಾನದಲ್ಲಿ ಉತ್ತರ ನೀಡಲಾಗುತ್ತಿದೆ.

ಸ್ವಾತಂತ್ರ್ಯಾ ನಂತರ ಕಳೆದ ಆರು ದಶಕಗಳಲ್ಲಿ ಅಭಿವೃದ್ಧಿ ತಲುಪದಿರುವುದೇ ಅತೃಪ್ತಿಗೆ ಮೂಲ ಕಾರಣವಾಗಿದೆ. ಇದೀಗ ಅತ್ಯಂತ ವೇಗದ ಅಭಿವೃದ್ಧಿ ಲಭ್ಯತೆಯನ್ನು ಖಾತ್ರಿ ಪಡಿಸಬೇಕಾಗಿದೆ ಎಂದು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಅಭಿವೃದ್ಧಿ ಕಾರ್ಯಗಳು ಮುಂದುವರಿಯುತ್ತಿವೆ. ಇದೀಗ ಮುಗ್ಧ ಜನರನ್ನು ದಾರಿತಪ್ಪಿಸಲಾಗದು ಎಂಬುದು ನಕ್ಸಲಿಯರಿಗೂ ಸಹ ಅರ್ಥವಾಗಿದೆ. ಹಾಗಾಗಿ ಯಾವುದೇ ಅಡೆತಡೆ ಇಲ್ಲದೆ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸುವ ಪ್ರಾಮುಖ್ಯವಿದೆ.

ಈ ಎರಡೂ ರಂಗಗಳಲ್ಲೂ ಯಶಸ್ಸು ಸಾಸುವಲ್ಲಿ ಯಶಸ್ವಿಯಾಗಿರುವುದು ಈ ಸಭೆಯ ಅತ್ಯಂತ ಪ್ರಮುಖ ಅಂಶವಾಗಿದೆ. ಎಡಪಂಥೀಯ ಉಗ್ರವಾದವನ್ನು ನಿಯಂತ್ರಿಸಲು ಬಾತವಾಗಿರುವ ರಾಜ್ಯಗಳು ಪ್ರತಿ ಮೂರು ತಿಂಗಳಿಗೊಮ್ಮೆ ಎಲ್ಲ ಕೇಂದ್ರೀಯ ಸಂಸ್ಥೆಗಳ ಅಕಾರಿಗಳು ಮತ್ತು ಡಿಜಿಪಿಗಳು ಪರಿಶೀಲನಾ ಸಭೆಗಳನ್ನು ನಡೆಸಬೇಕು ಎಂದು ಕರೆ ನೀಡಿದರು.

ಕಳೆದ ಎರಡು ವರ್ಷಗಳಿಂದೀಚೆಗೆ ಈವರೆಗೆ ಭದ್ರತೆ ಬಿಗಿಯಾಗಿಲ್ಲದಂತಹ ಪ್ರದೇಶಗಳಲ್ಲಿ ವಿಶೇಷವಾಗಿ ಛತ್ತೀಸ್ ಗಢ, ಮಹಾರಾಷ್ಟ್ರ ಮತ್ತು ಒಡಿಶಾದಲ್ಲಿ ಹೆಚ್ಚಿನ ಭದ್ರತಾ ಶಿಬಿರಗಳನ್ನು ಸ್ಥಾಪಿಸುವಲ್ಲಿ ಭಾರೀ ಯಶಸ್ಸು ಮತ್ತು ಪ್ರಯತ್ನ ನಡೆದಿದೆ.

ಈವರೆಗೆ ಸುಮಾರು 16,000 ಯೋಧರು ಸಮಾಜದ ಮುಖ್ಯವಾಹಿನಿಯನ್ನು ಸೇರ್ಪಡೆಯಾಗಿದ್ದಾರೆ. ಅವರಲ್ಲಿ ಬೋಡೋಲ್ಯಾಂಡ್ ಒಪ್ಪಂದ, ಬ್ರು ಒಪ್ಪಂದ ಮತ್ತು ಕರ್ಬಿ ಆಂಗ್ಲಾಂಗ್ ಒಪ್ಪಂದ ಮತ್ತು ತ್ರಿಪುರಾದ ಬಂಡುಕೋರ ಸಂಘಟನೆಗಳಿಂದ ಶರಣಾಗತರಾದವರು ಸೇರಿದ್ದಾರೆ. ಯಾರು ಹಿಂಸಾಚಾರವನ್ನು ತೊರೆದು ಮುಖ್ಯ ವಾಹಿನಿಯನ್ನು ಸೇರಲು ಬಯಸುತ್ತಾರೋ ಅಂತಹವರನ್ನು ಸ್ವಾಗತಿಸುತ್ತೇವೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು.

ರಾಜ್ಯ ಆಡಳಿತಗಳು ಇನ್ನಷ್ಟು ಕ್ರಿಯಾಶೀಲವಾಗಬೇಕು ಮತ್ತು ಕೇಂದ್ರೀಯ ಪಡೆಗಳ ಸಮನ್ವಯದೊಂದಿಗೆ ಮುನ್ನಡೆಯಬೇಕು. ಕೇಂದ್ರೀಯ ಪಡೆಗಳ ನಿಯೋಜನೆಗೆ ಸಂಬಂಸಿದಂತೆ ರಾಜ್ಯಗಳ ಬೇಡಿಕೆಗಳನ್ನು ಈಡೇರಿಸುವ ಕುರಿತು ಪ್ರಯತ್ನಗಳು ನಡೆದಿವೆ. ರಾಜ್ಯಗಳಿಗೆ ಕೇಂದ್ರೀಯ ಸಶಸ್ತ್ರ ಪೆÇಲೀಸ್ ಪಡೆಗಳ(ಸಿಎಪಿಎಫ್) ನಿಯೋಜನೆಗೆ ವೆಚ್ಚ ಮಾಡುತ್ತಿದ್ದ ನಿಶ್ಚಿತ ವೆಚ್ಚವನ್ನು ಕಡಿತಗೊಳಿಸುವಲ್ಲಿ ಪ್ರಮುಖ ನಿರ್ಧಾರವನ್ನು ಪ್ರಧಾನಿ ತೆಗೆದುಕೊಂಡಿದ್ದಾರೆ. ಇದರ ಪರಿಣಾಮವಾಗಿ 2018-19ಕ್ಕೆ ಹೋಲಿಸಿದರೆ 2019-20ರಲ್ಲಿ ಸಿಎಪಿಎಫ್ ಗಳ ನಿಯೋಜನೆಗೆ ರಾಜ್ಯಗಳ ವೆಚ್ಚ ಸುಮಾರು 2900 ಕೋಟಿ ರೂಪಾಯಿಗಳಷ್ಟು ಕಡಿತವಾಗಿದೆ ಎಂದರು.

ಎಡಪಂಥೀಯ ಬಂಡುಕೋರರ ಆದಾಯ ಮೂಲಗಳನ್ನು ತಟಸ್ಥಗೊಳಿಸುವ ಕಾರ್ಯ ಅತ್ಯಂತ ಪ್ರಮುಖವಾಗಿ ಆಗಬೇಕಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಾಗಿ ಸೇರಿ ವ್ಯವಸ್ಥೆಯನ್ನು ರೂಪಿಸುವ ಮೂಲಕ ಇದನ್ನು ತಡೆಯಲು ಪ್ರಯತ್ನಿಸಬೇಕಿದೆ. ಎಲ್ಲ ಮುಖ್ಯಮಂತ್ರಿಗಳು ಮುಂದಿನ ಒಂದು ವರ್ಷ ಎಡಪಂಥೀಯ ಬಂಡುಕೋರರ ಸಮಸ್ಯೆ ನಿವಾರಣೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಕರೆ ನೀಡಿದರು.

ಕಳೆದ ಹಲವು ದಶಕಗಳಿಂದೀಚೆಗೆ ಎಡಪಂಥೀಯ ಉಗ್ರವಾದ (ಎಲ್ ಡಬ್ಲ್ಯೂಇ) ಅತ್ಯಂತ ಮಹತ್ವದ ಭದ್ರತಾ ಸವಾಲಾಗಿದೆ. ಮೂಲತಃ ರಾಜ್ಯ ವಿಷಯವಾದರೂ ಗೃಹ ವ್ಯವಹಾರಗಳ ಸಚಿವಾಲಯ ಎಡಪಂಥೀಯ ಉಗ್ರವಾದ(ಎಲ್ ಡಬ್ಲ್ಯೂಇ) ಪಿಡುಗನ್ನು ಸಮಗ್ರವಾಗಿ ಹತ್ತಿಕ್ಕಲು, ಪರಿಸ್ಥಿತಿಯ ಬಗ್ಗೆ ನಿರಂತರವಾಗಿ ನಿಗಾವಹಿಸಲು ಮತ್ತು ಪ್ರಗತಿ ಪರಾಮರ್ಶೆಗೆ ಹಾಗೂ ಬಹುಹಂತದ ಕಾರ್ಯಾಚರಣೆಗಳನ್ನೊಳಗೊಂಡ ¾ರಾಷ್ಟ್ರೀಯ ನೀತಿ ಮತ್ತು ಕ್ರಿಯಾ ಯೋಜನೆಯನ್ನು 2015ರಿಂದ ಜಾರಿಗೊಳಿಸಿದೆ. ಈ ನೀತಿಯ ಪ್ರಮುಖ ಅಂಶವೆಂದರೆ ಶೂನ್ಯ ಸಹಿಷ್ಣುತೆ, ಹಿಂಸಾಚಾರ ಬದಿಗೊತ್ತಿ ಅಭಿವೃದ್ಧಿ ಚಟುವಟಿಕೆಗಳಿಗೆ ಭಾರೀ ಉತ್ತೇಜನ ನೀಡುವ ಮೂಲಕ ಬಾತ ಪ್ರದೇಶಗಳಲ್ಲಿನ ದುರ್ಬಲ ಮತ್ತು ಬಡಜನರಿಗೆ ಅಭಿವೃದ್ಧಿಯ ಪ್ರಯೋಜನಗಳನ್ನು ತಲುಪಿಸುವುದಾಗಿದೆ ಎಂದರು.

Facebook Comments