ಅಮಿತ್ ಶಾ ಭೇಟಿ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ ತೆರವು..!

ಈ ಸುದ್ದಿಯನ್ನು ಶೇರ್ ಮಾಡಿ

ಪಣಜಿ, ಅ.14- ಗೋವಾಕ್ಕೆ ಕೇಂದ್ರ ಗೃಹ ಸಚಿವ ಅಮಿತ್‍ಶಾ ಭೇಟಿ ನೀಡುವ ಸಂದರ್ಭದಲ್ಲಿ ಕಾಣಿಸಬಾರದು ಎಂದು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರ ಪೋಸ್ಟರ್ ಅನ್ನು ತೆರವುಗೊಳಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಅಮಿತ್ ಶಾ ಅವರು ಗುರುವಾರ ಗೋವಾಕ್ಕೆ ಭೇಟಿ ನೀಡಿ, ಧರ್ಬಂದೋರಾದಲ್ಲಿ ನಿರ್ಮಿಸಲು ಉದ್ದೇಶಿಸಿರುವ ರಾಷ್ಟ್ರೀಯ ಫೋರೆನ್ಸಿಕ್ ಸೈನ್ಸ್ ವಿಶ್ವವಿದ್ಯಾಲಯಕ್ಕೆ ತಾತ್ಕಾಲಿಕ ಸ್ಥಳ ಕೃತಿಯಲ್ಲಿ ಶಂಕುಸ್ಥಾಪನೆ ನೇರವೆರಿಸಲಿದ್ದಾರೆ.

ತೃಣಮೂಲ ಕಾಂಗ್ರೆಸ್‍ನ ಗೋವಾ ರಾಜ್ಯ ಘಟಕ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಫ್ಲೆಕ್ಸ್ ಅನ್ನು ಹೆದ್ದಾರಿಯ ಹೋರ್ಡಿಂಗ್‍ನಲ್ಲಿ ಅಳವಡಿಸಿತ್ತು. ಅಮಿತಾ ಶಾ ಭೇಟಿ ಹಿನ್ನೆಲೆಯಲ್ಲಿ ಹೋರ್ಡಿಂಗ್ ಅನ್ನು ತೆರವು ಮಾಡಲಾಗಿದೆ.

ಇದನ್ನು ಸ್ಥಳೀಯ ತೃಣಮೂಲ ಕಾಂಗ್ರೆಸ್ ನಾಯಕರು ಖಂಡಿಸಿದ್ದಾರೆ. ಮುಖಂಡರಾದ ಫಿರ್‍ಹದ್ ಹಕಿಮ್ ಮತ್ತಿತರರು ಟ್ವಿಟ್ ಮಾಡಿ, ಪಶ್ಚಿಮ ಬಂಗಾಳದಂತೆ ಗೋವಾದಲ್ಲೂ ಜನ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಇತಿಹಾಸವನ್ನು ಮರುಸೃಷ್ಠಿಸಬೇಕು ಎಂದು ಕರೆ ನೀಡಿದ್ದಾರೆ.
ಮುಂದಿನ ವರ್ಷ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಟಿಎಂಸಿ 40 ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡುವುದಾಗಿ ಘೋಷಿಸಿದೆ.

ಗೋವಾದ ಮಾಜಿ ಮುಖ್ಯಮಂತ್ರಿ ಲ್ಯೂಝಿನೋ ಫಲೇರಿಯೋ ಅವರು ಕಾಂಗ್ರೆಸ್ ತೊರೆದು ಟಿಎಂಸಿ ಸೇರ್ಪಡೆಯಾಗಿದ್ದರು. ಬಾಕ್ಸಿಂಗ್ ಛಾಂಪಿಯನ್ ಲೆನ್ನಿ ಡ ಗಾಮ ಮತ್ತು ಪುಟ್‍ಬಾಲ್ ಮಾಜಿ ಆಟಗಾರ ಡಿಂಜಿಲ್ ಫ್ರಾಂಕೋ ಅವರು ಕೂಡ ಟಿಎಂಸಿ ಸೇರಿದ್ದಾರೆ.

Facebook Comments