ಅಮಿತಾಬ್ ಬಚ್ಚನ್ @ 79

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಅ.11-ಬಾಲಿವುಡ್ ಬಿಗ್-ಬಿ ಅಮಿತಾಬ್ ಬಚ್ಚನ್ 79ನೆ ವಸಂತಕ್ಕೆ ಕಾಲಿರಿಸಿದ್ದಾರೆ. ನಿನ್ನೆ ರಾತ್ರಿಯಿಂದಲೇ ದೇಶದ ನಾನಾ ಮೂಲೆಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಅಭಿಮಾನಿ ದೇವರುಗಳ ಈ ಪ್ರೀತಿ ಕಂಡು ನನ್ನ ಹೃದಯ ಉಕ್ಕಿ ಬರುತ್ತಿದೆ ಎಂದು ಬಿಗ್‍ಬಿ ತಮ್ಮ ಬ್ಲಾಗ್‍ನಲ್ಲಿ ಬರೆದುಕೊಂಡಿದ್ದಾರೆ.

ಅಭಿಮಾನಿಗಳು ನನ್ನ ಮೇಲೆ ಇಟ್ಟಿರುವ ಈ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಾನು ಇತ್ತಿಚೆಗೆ ಚಿತ್ರಗಳಲ್ಲಿ ನಟಿಸುವುದು ಕಡಿಮೆಯಾದರೂ ಅಭಿಮಾನಿಗಳು ನನಗೆ ಅವರ ಹೃದಯದಲ್ಲಿ ಸ್ಥಾನ ನೀಡಿದ್ದಾರೆ. ಅಭಿಮಾನಿಗಳು ಮತ್ತು ನನ್ನ ನಡುವಿನ ಬಾಂಧವ್ಯ ಹಾಗೆ ಮುಂದುವರೆಯಲಿ ಎಂದು ಅವರು ವಿನಂತಿಸಿಕೊಂಡಿದ್ದಾರೆ.

70 ರ ದಶಕದಲ್ಲಿ ಬಾಲಿವುಡ್‍ಗೆ ಎಂಟ್ರಿ ಪಡೆದು 2000 ನೆ ಇಸವಿ ತನಕ ಬಾಲಿವುಡ್ ಬಾದ್‍ಶಾ ಎಂದು ಗುರುತಿಸಿಕೊಂಡಿದ್ದ ಅಮಿತಾಬ್ ಅವರು 2000ದ ನಂತರ ಕಿರುತೆರೆಯಲ್ಲೂ ತಮ್ಮ ಛಾಪು ಮೂಡಿಸಿದ್ದರು.

ಹಿಂದಿ ಚಿತ್ರರಂಗದಲ್ಲಿ ಐದು ದಶಕಗಳ ಕಾಲ ಮೇರು ನಟರಾಗಿ ಗುರುತಿಸಿಕೊಂಡಿದ್ದ ಅಮಿತಾಬ್ ಅವರು ಈವರೆಗೂ ನಾಲ್ಕು ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. 2019ರಲ್ಲಿ ಅವರಿಗೆ ಚಿತ್ರರಂಗದ ಪ್ರತಿಷ್ಠಿತ ಪ್ರಶಸ್ತಿಯಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯೂ ಒಲಿದು ಬಂದಿತ್ತು.

Facebook Comments