ಬಚ್ಚನ್, ದೀಪಿಕಾ, ಧೋನಿ ಭಾರತದ ಅತ್ಯಂತ ಪ್ರಭಾವಶಾಲಿಗಳು

ಈ ಸುದ್ದಿಯನ್ನು ಶೇರ್ ಮಾಡಿ

Dhoni--01

ಮುಂಬೈ, ನ.20- ಬಾಲಿವುಡ್ ಸೂಪರ್‍ಸ್ಟಾರ್‍ಗಳಾದ ಅಮಿತಾಭ್ ಬಚ್ಚನ್ ಮತ್ತು ದೀಪಿಕಾ ಪಡುಕೋಣೆ ಭಾರತದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಾಗಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಮಹೇಂದ್ರಸಿಂಗ್ ಧೋನಿ ಅತ್ಯಂತ ಪ್ರಭಾವಿ ಕ್ರೀಡಾಪಟು ಎನಿಸಿದ್ದಾರೆ. ಬಚ್ಚನ್ ಹಾಗೂ ದೀಪಿಕಾ ಬಾಲಿವುಡ್ ಕ್ಷೇತ್ರದಲ್ಲಿ ಭಾರತದಲ್ಲೇ ಅತ್ಯಂತ ಪ್ರಭಾವ ಶಾಲಿಗಳೆಂದು ಅಧ್ಯಯನ ವರದಿಯೊಂದು ತಿಳಿಸಿದೆ. ಸುಮಾರು 60 ಟಾಪ್ ಬಾಲಿವುಡ್ ಪ್ರಸಿದ್ಧ ವ್ಯಕ್ತಿಗಳು ಮತ್ತು ಕ್ರೀಡಾ ಕ್ಷೇತ್ರದ ವ್ಯಕ್ತಿಗಳ ಕುರಿತ ಜನರ ಗ್ರಹಿಕೆಗಳನ್ನು ನಡೆಸಿದ ಸಮೀಕ್ಷೆಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ತಿಂಗಳೊಂದರಲ್ಲಿ 1,948 ಭಾರತೀಯರು ಸೇರಿದಂತೆ ವಿಶ್ವದಾದ್ಯಂತ ಆರು ದಶಲಕ್ಷ ಜನರು ಈ ಅಧ್ಯಯನದಲ್ಲಿ ತೊಡಗಿಕೊಂಡಿದ್ದಾರೆ.

ಆರೋಗ್ಯ, ಸೌಂದರ್ಯ, ವೈಯಕ್ತಿಕ ಆರೈಕೆ, ತಂತ್ರಜ್ಞಾನ , ವಾಹನ, ಫ್ಯಾಷನ್, ಉಡುಗೆ-ತೊಡುಗೆ ಆಹಾರ, ಪಾನೀಯ ಮತ್ತು ಪ್ರಯಾಣ ಹಾಗೂ ಹಣಕಾಸು ಸೇರಿ ಹಲವು ವಿಭಾಗಗಳಲ್ಲಿ ಜನರ ಗ್ರಹಿಕೆಯ ಮಟ್ಟವನ್ನು ಈ ಅಧ್ಯಯನದಲ್ಲಿ ಅಳೆಯಲಾಗಿದೆ. ಒಟ್ಟಾರೆ ಸೂಚ್ಯಂಕವು ಸಮಾನತೆ, ವಿಶ್ವಾಸಾರ್ಹತೆ ಮತ್ತು ವೈಯಕ್ತಿಕ ವಲಯದ ಪ್ರಭಾವದ ಅಂಶವನ್ನು ಒಳಗೊಂಡಿದೆ.

ಪಟ್ಟಿಯಲ್ಲಿ ಬಚ್ಚನ್ ಮೊದಲ ಸ್ಥಾನದಲ್ಲಿದ್ದರೆ ದೀಪಿಕಾ ಪಡುಕೋಣೆ ಎರಡನೆ ಸ್ಥಾನದಲ್ಲಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಮತ್ತು ಸಚಿನ್ ತೆಂಡೂಲ್ಕರ್ ಕ್ರಮವಾಗಿ ಮೂರು ಮತ್ತು ನಾಲ್ಕನೆ ಸ್ಥಾನ ಪಡೆದರೆ, ಅಕ್ಷಯ್ ಕುಮಾರ್ ಐದನೆ ಮತ್ತು ವಿರಾಟ್ ಕೊಹ್ಲಿ ಆರನೆ ಸ್ಥಾನದಲ್ಲಿದ್ದಾರೆ.ಅಮೀರ್ ಖಾನ್ ಮತ್ತು ಶಾರುಕ್ ಖಾನ್ ಅನುಕ್ರಮವಾಗಿ ಏಳು ಮತ್ತು ಎಂಟನೆ ಸ್ಥಾನ ಪಡೆದಿದ್ದರೆ.

ಅಲಿಯಾ ಭಟ್ ಮತ್ತು ಪ್ರಿಯಾಂಕಾ ಚೋಪ್ರಾ ಒಂಬತ್ತು ಹಾಗೂ ಹತ್ತನೆ ಸ್ಥಾನದಲ್ಲಿದ್ದಾರೆ. ಒಲಂಪಿಕ್ ಬೆಳ್ಳಿ ಪದಕ ವಿಜೇತರಾದ, ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧೂ ಭಾರತದ 15 ಪ್ರಭಾವಶಾಲಿ ಆಟಗಾರರಲ್ಲಿ ಒಬ್ಬರಾಗಿ ಸ್ಥಾನ ಗಿಟ್ಟಿಸಿದ್ದಾರೆ.

Facebook Comments

Sri Raghav

Admin