ಅದ್ಭುತ ಕಂಠ ಸಿರಿಯ ಶ್ರೇಷ್ಠ ಗಾಯಕ ಎಸ್‍ಪಿಬಿ : ಬಿಗ್‍ಬಿ ಬಣ್ಣನೆ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಸೆ.27- ಸ್ವರ ಸಾಮ್ರಾಟ ಡಾ.ಎಸ್.ಪಿ.ಬಾಲಸುಬ್ರಮಣ್ಯಂ ಅವರನ್ನು ಅದ್ಭುತ ಕಂಠ ಸಿರಿಯ ಶ್ರೇಷ್ಠ ಗಾಯಕ ಎಂದು ಖ್ಯಾತ ಚಿತ್ರನಟ ಅಮಿತಾಬ್‍ ಬಚ್ಚನ್ ಬಣ್ಣಿಸಿದ್ದಾರೆ.

ಇಂದು ಬೆಳಗ್ಗೆ ಟ್ವಿಟ್ ಮಾಡಿರುವ ಬಿಗ್‍ಬಿ ಅವರು, ಎಸ್‍ಪಿಬಿ ಅವರದು ವಿಶಿಷ್ಟ ಕಂಠ. ಅವರ ಹಾಡುಗಾರಿಕೆ ಎಲ್ಲಾ ವಯೋಮಾನದವರಿಗೂ ಸೂಕ್ತವಾಗುವಂತಹ ವಿಶಿಷ್ಟ ಧ್ವನಿ ಎಂದು ಹೊಗಳಿದ್ದಾರೆ.

ಡಾ.ಎಸ್.ಪಿ.ಬಾಲಸುಬ್ರಮಣ್ಯಂ ಅವರ ನಿಧನದಿಂದ ಭಾರತೀಯ ಸಂಗೀತ ಕ್ಷೇತ್ರದ ಪ್ರಮುಖ ಕೊಂಡಿಯೊಂದು ಕಳಚಿದಂತಾಗಿದೆ. ನಾನು ಮೊದಲಿನಿಂದಲೂ ಬಾಲು ಅವರ ಗಾಯನವನ್ನು ಬಹುವಾಗಿ ಇಷ್ಟಪಡುತ್ತಲೇ ಬಂದಿದ್ದೇನೆ. ಅವರ ನಿಧನ ತುಂಬಲರಾದ ನಷ್ಟ ಎಂದು ಸಂತಾಪ ಸೂಚಿಸಿದ್ದಾರೆ.

Facebook Comments

Sri Raghav

Admin