ಬಾಂಬ್ ಸ್ಫೋಟದಲ್ಲಿ ಆಫ್ಘಾನಿಸ್ತಾನದ ಉಪಾಧ್ಯಕ್ಷ ಪಾರು, ಇಬ್ಬರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಕಾಬೂಲ್, ಸೆ.9-ಹಿಂಸಾಚಾರ ಪೀಡಿತ ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್‍ನಲ್ಲಿ ಇಂದು ಬೆಳಗ್ಗೆ ನಡೆದ ಹತ್ಯೆ ಯತ್ನದಿಂದ ದೇಶದ ಪ್ರಥಮ ಉಪಾಧ್ಯಕ್ಷ ಅಮ್ರುಲ್ ಸಾಲೇ ಪಾರಾಗಿದ್ದಾರೆ.  ಈ ದಾಳಿಯಲ್ಲಿ ಉಪಾಧ್ಯಕ್ಷರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಬಾಂಬ್ ಸ್ಪೋಟದಲ್ಲಿ ಇಬ್ಬರು ಮೃತಪಟ್ಟು, ಹಲವರಿಗೆ ಗಾಯಗಳಾಗಿವೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಶೋಚನೀಯವಾಗಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವಕ್ತಾರ ರಜ್ವನ್ ಮುರಾದ್ ತಿಳಿಸಿದ್ದಾರೆ.

ಕಾಬೂಲ್‍ನಲ್ಲಿ ಇಂದು ಬೆಳಗ್ಗೆ ಉಪಾಧ್ಯಕ್ಷ ಅಮ್ರುಲ್ ಸಾಲೇ ಅವರಿದ್ದ ಕಾರು ಮತ್ತು ಅಂಗರಕ್ಷಕರ ಬೆಂಗಾವಲು ವಾಹನ ತೆರಳುತ್ತಿದ್ದಾರೆ ಉಗ್ರಗಾಮಿಗಳು ಬಾಂಬ್ ಸ್ಪೋಟಿಸಿದರು ಈ ಘಟನೆಯಲ್ಲಿ ಉಪಾಧ್ಯಕ ಕೈಗೆ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಆದರೆ ಈ ಕೃತ್ಯದಲ್ಲಿ ಇಬ್ಬರು ನಾಗರಿಕರು ಬಳಿಯಾಗಿದ್ದು, ಭದ್ರತಾಪಡೆ ಸಿಬ್ಬಂದಿ ಸೇರಿದಂತೆ ಅನೇಕರಿಗೆ ಗಾಯಗಳಾಗಿವೆ.

ಆಫ್ಘಾನಿಸ್ತಾನದ ಗುಪ್ತಚರ ದಳದ ಮಾಜಿ ಮುಖ್ಯಸ್ಥರಾದ ಅಮ್ರುಲ್ ಸಾಲೆ ಘಟನೆ ನಂತರ ದೂರದರ್ಶನದಲ್ಲಿ ನೇರ ಪ್ರಸಾರ ಭಾಷಣೆ ಮಾಡಿದರು. ಅವರ ಕೈಗೆ ಬ್ಯಾಂಡೇಜ್ ಕಟ್ಟಲಾಗಿತ್ತು. ನಾನು ಅಪಾಯದಿಂದ ಪಾರಾಗಿದ್ದೇನೆ ಎಂದು ಅವರು ತಿಳಿಸಿದರು.

ಉಗ್ರಗಾಮಿಗಳ ಈ ಕೃತ್ಯಕ್ಕೆ ತಕ್ಕ ಪಾಠ ಕಲಿಸುವುದಾಗಿ ಅವರು ಹೇಳಿದ್ದಾರೆ.  ಈ ಸ್ಪೋಟದ ಹೊಣೆಯನ್ನು ಯಾವುದೇ ಉಗ್ರಗಾಮಿ ಸಂಘಟನೆಗಳೂ ಹೊತ್ತುಕೊಂಡಿಲ್ಲವಾದರೂ ಈ ಕೃತ್ಯದ ಹಿಂದೆ ತನ್ನ ಕೈವಾಡ ಇಲ್ಲ ಎಂದು ತಾಲಿಬಾನ್ ತಿಳಿಸಿದೆ.

Facebook Comments