ಪಾವಗಡ ತಾಲೂಕಿನ ಎಲ್ಲ ಹೋಬಳಿಗಳಲ್ಲಿ ಜನೌಷಧಿ ಕೇಂದ್ರ : ಅನಂತ್‍ಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

Anant-Kumar--01

ಬೆಂಗಳೂರು, ಆ.26- ರಾಜ್ಯದಲ್ಲಿ ಪಾವಗಡ ತಾಲೂಕಿನಲ್ಲಿ ಕಿತ್ತು ತಿನ್ನುವ ಬಡತನವಿದ್ದು, ಇಲ್ಲಿನ ಎಲ್ಲ ಹೋಬಳಿಗಳಲ್ಲಿ ಜನೌಷಧ ಕೇಂದ್ರ ಪ್ರಾರಂಭಿಸಲಾಗುವುದು ಎಂದು ಕೇಂದ್ರ ಸಚಿವ ಅನಂತ್‍ಕುಮಾರ್ ಹೇಳಿದರು.  ನಗರದಲ್ಲಿ ಹಮ್ಮಿಕೊಂಡಿದ್ದ ಪಾವಗಡ ತಾಲೂಕಿನ ಶ್ರೀರಾಮಕೃಷ್ಣ ಸೇವಾಶ್ರಮ ರಜತ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜನೌಷಧ ಕೇಂದ್ರ ಸ್ಥಾಪಿಸಲು ರಾಮಕೃಷ್ಣ ಸೇವಾಶ್ರಮದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ವತಿಯಿಂದಲೇ ಅತ್ಯಗತ್ಯವಿರುವ ಮುಂಗಡ ಔಷಧಗಳನ್ನು ಒದಗಿಸಲಾಗುವುದು ಹಾಗೂ ಜನರಿಕ್ ಕೇಂದ್ರದ ಒಳಾಂಗಣಕ್ಕೆ ಬೇಕಾಗುವ ಖರ್ಚನ್ನು ಕೂಡ ನಮ್ಮ ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದರು. ಒಂದು ತಿಂಗಳೊಳಗೆ ಇದಕ್ಕೆ ಸಂಬಂಧಪಟ್ಟಂತೆ ಒಪ್ಪಂದಕ್ಕೆ ಸಹಿ ಹಾಕಲಾಗುವುದು ಎಂದು ಹೇಳಿದ ಅವರು, ಪಾವಗಡ ತಾಲೂಕಿನಲ್ಲಿ ಕೇಂದ್ರ ಸರ್ಕಾರದ ವತಿಯಿಂದಲೇ ಶಾಶ್ವತ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು ತರಲಾಗುವುದು ಎಂದು ಭರವಸೆ ನೀಡಿದರು.

ಸದ್ಯದಲ್ಲಿಯೇ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಅವರನ್ನು ಸ್ಥಳ ಪರಿಶೀಲನೆಗೆ ಕಳುಹಿಸಿಕೊಡಲಾಗುವುದು ಎಂದರು. ಕಳೆದ ಹಲವಾರು ದಶಕಗಳಿಂದ ಸ್ವಾಮೀಜಿಯವರು ಸೇವೆಯ ಜಪ ಮಾಡುತ್ತಿದ್ದಾರೆ. ಹಾಗಾಗಿಯೇ ಅವರಿಗೆ ಜಪಾನಂದ ಸ್ವಾಮೀಜಿ ಎಂಬ ಹೆಸರು ಬಂದಿರಬಹುದು ಎಂದು ತಿಳಿಸಿದರು.  ಪಾವಗಡ ಹಿಂದುಳಿದ ತಾಲೂಕುಗಳಲ್ಲಿ ಒಂದಾಗಿದೆ. ಜನರ ಸೇವೆಯನ್ನು ಸ್ವಾಮೀಜಿಯವರು ಮಾಡುತ್ತಿದ್ದಾರೆ. ಕುಷ್ಠರೋಗಿಗಳಿಗೆ ಅವಿರತ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Facebook Comments

Sri Raghav

Admin