“ದಲಿತ ನಾಗರಿಕರೊಬ್ಬರಿಗೆ ಡಿಸಿಎಂ ಹುದ್ದೆ ಕೊಡಿ”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.19- ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ದಲಿತ ಜನಾಂಗದ ಹಿರಿಯ ನಾಗರಿಕರೊಬ್ಬರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಸಾಮಾಜಿಕ ನ್ಯಾಯ ಪರಿಷತ್‍ನ ಅಧ್ಯಕ್ಷ ಅನಂತರಾಯಪ್ಪ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತ ಜನಾಂಗ ಅತ್ಯಧಿಕ ಮತ ಪಡೆದು ಅಧಿಕಾರಕ್ಕೆ ಬರುತ್ತಿದ್ದ ಕಾಂಗ್ರೆಸ್ ಪಕ್ಷ ದಲಿತರಿಗೆ ಒಮ್ಮೆ ಕೂಡ ಮುಖ್ಯಮಂತ್ರಿ ಸ್ಥಾನ ನೀಡದೆ ವಂಚಿಸಿದೆ.

ಆದ್ದರಿಂದ ಈ ಬಾರಿ ನಡೆದ ಚುನಾವಣೆಗಳಲ್ಲಿ ನಮ್ಮ ಸಮುದಾಯದವರು ಬಿಜೆಪಿಗೆ ಮತ ನೀಡಿ ಏಳು ಮಂದಿ ಜನ ದಲಿತ ಸಂಸದರ ಪೈಕಿ ಎಲ್ಲರೂ ಮತ್ತು ಶಾಸಕರ ಪೈಕಿ ಅರ್ಧದಷ್ಟು ಗೆದ್ದಿ ದ್ದಾರೆ. ಆದ್ದರಿಂದ ದಲಿತರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡು ವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ಒತ್ತಾಯಿಸಿದರು.

ಪರಿಶಿಷ್ಟ ಜಾತಿಯ ಬಲಗೈ ಜನಾಂಗದ ಒಬ್ಬರಿಗೆ ಶಾಸಕ ಸ್ಥಾನ ನೀಡಬೇಕು ಮತ್ತು ಪರಿಶಿಷ್ಟ ಜಾತಿಯ ಬಲಗೈ ಎಡಗೈ ಲಂಬಾಣಿ ಭೋವಿ ಸಮುದಾಯಗಳು ದೊಡ್ಡ ಸಂಖ್ಯೆಯಲ್ಲಿದ್ದು, ಈ ನಾಲ್ಕು ಉಪಜಾತಿಗಳಿಗೆ ತಲಾ ಒಂದೊಂದು ಮಂತ್ರಿ ಸ್ಥಾನ ನೀಡಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಪರಿಷತ್‍ನ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ, ಅಹಿಂದ ಹೋರಾಟ ಸಮಿತಿ ರಾಜ್ಯಧ್ಯಕ್ಷ ಎಂ.ಮುತ್ತುರಾಜು, ದಲಿತ ಪದವೀದರ ಸಂಘದ ಡಾ.ಶಂಕರಪ್ಪ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Facebook Comments