“ಗಾಂಜಾ ಅಂದ್ರೆ ಏನು ಅಂತಾ ನಂಗೆ ಗೊತ್ತೇ ಇಲ್ಲ “: ಅನನ್ಯ ಪಾಂಡೆ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಅ.22- ಸಮಯ ಸಿಕ್ಕಾಗಲೆಲ್ಲಾ ಶಾರುಕ್ ಖಾನ್ ಕುಟುಂಬದ ಜೊತೆ ನಮ್ಮ ಕುಟುಂಬದ ಸದಸ್ಯರು ಸಮಯ ಕಳೆಯುತ್ತೇವೆ. ಎರಡು ಕುಟುಂಬಗಳ ನಡುವೆ ಉತ್ತಮ ಬಾಂಧವ್ಯವಿದೆ. ಆದರೆ ನಾವು ಎಂದಿಗೂ ಮಾದಕ ವಸ್ತುಗಳನ್ನು ಬಳಕೆ ಮಾಡಿಲ್ಲ ಹಾಗೂ ಯಾರಿಗೂ ಸರಬರಾಜು ಮಾಡಿಲ್ಲ ಎಂದು ನಟಿ ಅನನ್ಯ ಪಾಂಡೆ ಎನ್‍ಸಿಬಿ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾಳೆ.

ಶಾರುಕ್ ಖಾನ್ ಅವರ ಪುತ್ರ ಆರ್ಯನ್‍ಖಾನ್ ಮತ್ತು ನಾನು ೀರುಬಾಯಿ ಅಂಬಾನಿ ಅಂತರಾಷ್ಟ್ರೀಯ ಶಾಲೆಯಲ್ಲಿ ಒಟ್ಟಿಗೆ ಓದಿದ್ದೇವೆ. ಆರ್ಯನ್ ಸಹೋದರಿ ಸುಹಾನ ನನ್ನ ಆಪ್ತ ಸ್ನೇಹಿತೆ. ಚಿತ್ರಿಕರಣದ ಸಮಯ ಹೊರತು ಪಡಿಸಿ ಎರಡು ಕುಟುಂಬಗಳ ಸದಸ್ಯರು ಒಟ್ಟಿಗೆ ಕಲೆತು ಸಮಯ ಕಳೆಯುತ್ತೇವೆ ಎಂದಿದ್ದಾರೆ.

ಮುಂಬೈನಿಂದ ಗೋವಾಕ್ಕೆ ಮೋಜಿನ ಪ್ರವಾಸಕ್ಕೆ ಹೊರಟ್ಟಿದ್ದ ಐಶರಾಮಿ ಹಡಗಿನಲ್ಲಿ ಮಾದಕ ವಸ್ತುಗಳನ್ನು ಬಳಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಎನ್‍ಸಿಬಿ ಅಕಾರಿಗಳು ಆರ್ಯನ್ ಖಾನ್ ಸೇರಿ ಎಂಟು ಮಂದಿಯನ್ನು ಅ.3ರಂದು ಬಂಧಿಸಿದ್ದರು.

ಎನ್‍ಸಿಬಿ ಅಧಿಕಾರಿಗಳು ಆರ್ಯನ್ ಮೊಬೈಲ್ ಪರಿಶೀಲನೆ ನಡೆಸಿದಾಗ ಅದರಲ್ಲಿ ಗಾಂಜಾ ಹಾಗೂ ಇತರೆ ಮಾದಕ ವಸ್ತುಗಳ ವಹಿವಾಟಿನ ಬಗ್ಗೆ ಚಾಟ್ ನಡೆದಿದೆ ಎಂದು ಹೇಳಲಾಗಿತ್ತು. ಅದರಲ್ಲಿ ಆರ್ಯನ್ ಗಾಂಜಾ ವ್ಯವಸ್ಥೆಯಾಗಿದೆಯೇ ಎಂದು ಕೇಳಿದ್ದು, ಅದಕ್ಕೆ ಅನನ್ಯ ನಾನು ವ್ಯವಸ್ಥೆ ಮಾಡುತ್ತೇನೆ ಎಂದು ಉತ್ತರಿಸಿರುವ ದಾಖಲೆ ಸಿಕ್ಕಿತ್ತು. ಇದನ್ನು ಆಧರಿಸಿ ನಟಿಯನ್ನು ನಿನ್ನೆ ಎನ್‍ಸಿಬಿ ಅಧಿಕಾರಿಗಳು ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.

ಆದರೆ ಅನನ್ಯ ತಮ್ಮ ಮೇಲಿನ ಆರೋಪವನ್ನು ಅಲ್ಲಗಳೆದಿದ್ದಾರೆ. ಗಾಂಜಾ ಎಂದರೆ ಮಾದಕ ವಸ್ತು ಎಂದೇ ನನಗೆ ಗೋತ್ತಿಲ್ಲ. ಯಾವುದೇ ರೀತಿಯ ಮಾದಕ ವಸ್ತುಗಳನ್ನು ನಾವು ಬಳಸುತ್ತಿಲ್ಲ. ಯಾರಿಗೂ ಒದಗಿಸಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಮೊಬೈಲ್ ಚಾಟ್ ಬಗ್ಗೆ ಕೇಳಲಾದ ಪ್ರಶ್ನೆಗೆ ಮೊದಲು ಅದು ಜೋಕ್ ಆಗಿತ್ತು ಎಂದು ಹೇಳಿರುವ ಆಕೆ, ನಂತರ ಇದು ಬಹಳ ಹಿಂದೆ ನಡೆದಿರುವ ಚಾಟ್ ಆಗಿದೆ. ಸಿಗರೇಟ್ ಕುರಿತು ಮಾತನಾಡಿಕೊಂಡಿದ್ದೇವೆ. ಅದು ಮಾದಕ ವಸ್ತು ಕುರಿತಲ್ಲ ಎಂದು ಆಕೆ ಹೇಳಿದ್ದಾರೆ ಎಂದು ಎನ್‍ಸಿಬಿ ಮೂಲಗಳು ತಿಳಿಸಿವೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

Facebook Comments