ದುರಂತ ಅಂತ್ಯವಾಯಿತು ಚಂದನ್ ಚಂದದ ಕುಟುಂಬ..!

ಈ ಸುದ್ದಿಯನ್ನು ಶೇರ್ ಮಾಡಿ

Chandan-Suicide--01

ಬೆಂಗಳೂರು. ಜೂ. 01 : ಸ್ಯಾಂಡಲ್ ವುಡ್ ನ ಉದಯೋನ್ಮುಖ ನಟ, ನಿರೂಪಕ ಚಂದನ್ ಸಾವಿನ ಬಳಿಕ ಮಗನ ಕತ್ತು ಸೀಳಿ ಕೊಂದು ತಾವು ಆತ್ಮಹತ್ಯೆಗೆ ಯತ್ನಿಸಿದ್ದ ಪತ್ನಿ ಮೀನಾ ಕೂಡ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಪತಿಯ ಸಾವಿನಿಂದ ಮನನೊಂದು ಆಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ನಿರೂಪಕ ಚಂದನ್ ಪತ್ನಿ ಮೀನಾ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಮೀನಾ ಅವರ ಅಂತ್ಯಕ್ರಿಯೆ ಇಂದು ದೊಡ್ಡಬಳ್ಳಾಪುರದ ಕೊಂಗಾಡಿಯಪ್ಪ ಕಾಲೇಜು ಬಳಿ ರುದ್ರಭೂಮಿಯಲ್ಲಿ ನಡೆಯಿತು.

ಸುದಾರವಾಗಿದ್ದ ಕುಟುಂಬ ಒಂದೇ ವಾರದಲ್ಲಿ, ಒಂದೇ ಜಾಗದಲ್ಲಿ ಸಾಮಾಧಿಯಾಗಿಹೋಯಿತು. ಪತಿ ಚಂದನ್ ಮಗ ತುಷಾರ್ ನನ್ನು ಮಣ್ಣು ಮಾಡಿದ ಜಾಗದ ಪಕ್ಕದಲ್ಲೇ ಮೀನಾ ಮೃತದೇಹವನ್ನು ಮಣ್ಣು ಮಾಡಲಾಯಿತು.

ಅಪಘಾತದಲ್ಲಿ ಖಾಸಗಿ ವಾಹಿನಿ ನಿರೂಪಕ ಚಂದನ್ ಸಾವಿನ ಬಳಿಕ ಮಾನಸಿಕವಾಗಿ ಕುಗ್ಗಿದ್ದ ಮೀನಾ ಗುರುವಾರ ಬೆಳಗ್ಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮೀನಾ ತನ್ನ 13 ವರ್ಷದ ಮಗ ತುಷಾರ್ ನ ಕತ್ತು ಕೊಯ್ದು ಕೊಲೆ ಮಾಡಿದ್ದರು. ಬಳಿಕ ತಾನೂ ಆಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಘಟನೆಯಲ್ಲಿ ಚಂದನ್ ಮಗ ತುಷಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದನು. ಮೀನಾ ಅವರನ್ನು ಕೂಡಲೇ ಆಸ್ಪತ್ರೆಗೆ ರವಾನಿಸಲಾಗಿತ್ತು. ಅಲ್ಲಿ ಅವರು ಚಿಕೆತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

Facebook Comments

Sri Raghav

Admin