ಗುಂಡಿಟ್ಟು ಪಾಕಿಸ್ತಾನಿ ನ್ಯೂಸ್ ಆ್ಯಂಕರ್ ಹತ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ಕರಾಚಿ, ಜು.10 (ಪಿಟಿಐ)- ವೈಯಕ್ತಿಕ ವೈಷಮ್ಯದಿಂದಾಗಿ ನ್ಯೂಸ್ ಆ್ಯಂಕರ್(ವಾರ್ತಾ ವಾಚಕ)ಗೆ ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಪಾಕಿಸ್ತಾನದ ಕರಾಚಿಯ ಖಯಾಬನ್-ಎ-ಬುಖಾರಿ ಪ್ರದೇಶದಲ್ಲಿ ನಿನ್ನೆ ರಾತ್ರಿ ನಡೆದಿದೆ. ಈ ಘಟನೆಯಲ್ಲಿ ಸುದ್ದಿ ಉದ್ಘೋಷಕನ ಸ್ನೇಹಿತನಿಗೂ ಗುಂಡೇಟು ತಗುಲಿದೆ.

ಬೋಲ್ ನ್ಯೂಸ್ ಚಾನೆಲ್‍ನಲ್ಲಿ ನ್ಯೂಸ್ ರೀಡರ್ ಆಗಿದ್ದ ಮುರೀದ್ ಅಬ್ಬಾಸ್ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ಧಾರೆ.
ಅಬ್ಬಾಸ್ ಅವರ ಗೆಳೆಯ ಖಿಝಾರ್ ಹಯಾತ್ ಎಂಬುವರೂ ಸಹ ಗುಂಡೇಟಿನಿಂದ ಹತರಾಗಿದ್ದಾರೆ.

ಹಣಕಾಸು ವಿವಾದ ಮತ್ತು ವೈಯಕ್ತಿಕ ದ್ವೇಷದಿಂದ ಅಬ್ಬಾಸ್ ಅವರನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸ್ ಮಹಾ ನಿರೀಕ್ಷಕ(ಡಿಐಜಿ) ಶರ್ಜಿಲ್ ಖರಾಲ್ ತಿಳಿಸಿದ್ದಾರೆ. ದುಷ್ಕರ್ಮಿಗಳು ನಿನ್ನೆ ರಾತ್ರಿ ಅಬ್ಬಾಸ್ ಮತ್ತು ಹಯಾತ್ ಅವರ ಮೇಲೆ ಆಕ್ರಮಣ ಮಾಡಿ ಮನಬಂದಂತೆ ಗುಂಡು ಹಾರಿಸಿದರು. ಅನೇಕ ಬುಲೆಟ್‍ಗಳು ಅಬ್ಬಾಸ್ ಅವರ ದೇಹ ಒಕ್ಕಿದ್ದರಿಂದ ಅವರ ಸ್ಥಳದಲ್ಲೇ ಮೃತರಾದರು.

ಗುಂಡೇಟಿನಿಂದ ಗಾಯಗೊಂಡ ಹಯಾತ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು. ಪೊಲೀಸರಿಗೆ ಹಂತಕರ ಬಗ್ಗೆ ಸುಳಿವು ದೊರೆತಿದ್ದು, ಅವರ ಬಂಧನಕ್ಕೆ ಬಲೆ ಬೀಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ