ಮಹಿಳಾ ಉದ್ಯಮಿಗಳನ್ನು ಉತ್ತೇಜಿಸಲು ವೈಎಸ್‍ಆರ್ ಚೇಯುಥಾ ಯೋಜನೆ ಘೋಷಣೆ

ಈ ಸುದ್ದಿಯನ್ನು ಶೇರ್ ಮಾಡಿ

ಆಂಧ್ರಪ್ರದೇಶ,ಆ.12- ಮಹಿಳಾ ಉದ್ಯಮಿಗಳನ್ನು ಉತ್ತೇಜಿಸಲು ಮುಖ್ಯಮಂತ್ರಿ ವೈ.ಎಸ್.ಜಗನ್‍ಮೋಹನ್ ರೆಡ್ಡಿ ಅವರು ವೈಎಸ್‍ಆರ್ ಚೆಯುಥಾ ಎಂಬ ಮತ್ತೊಂದು ಯೋಜನೆಯನ್ನು ಜಾರಿಗೆ ತಂದಿದ್ದಾರೆ.

ಎಸ್‍ಸಿ, ಎಸ್‍ಟಿ, ಬಿ.ಸಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ 45-60 ವರ್ಷದೊಳಗಿನ ಸುಮಾರು 23 ಲಕ್ಷ ಮಹಿಳೆಯರಿಗೆ ಈ ಯೋಜನೆಯಡಿ ವಾರ್ಷಿಕ 18,750ರೂ.ಗಳಂತೆ ನಾಲ್ಕು ವರ್ಷಗಳಲ್ಲಿ ಒಟ್ಟು 75,000 ರೂ.ಗಳನ್ನು ನೀಡಲಾಗುವುದು.

45-60 ವರ್ಷ ವಯಸ್ಸಿನ ಸುಮಾರು 8 ಲಕ್ಷ ವಿಧವೆಯರು ಮತ್ತು ಒಂಟಿ ಮಹಿಳೆಯರು, ಈಗಾಗಲೇ ಮಾಸಿಕ ಸಾಮಾಜಿಕ ಪಿಂಚಣಿ ಪಡೆಯುತ್ತಿದ್ದು, ವೈಎಸ್‍ಆರ್ ಚೆಯುಥಾ ಯೋಜನೆಯಲ್ಲಿ ಹೆಚ್ಚುವರಿ ಲಾಭ ಪಡೆಯಬಹುದು ಎಂದು ಜಗನ್‍ಮೋಹನ್ ತಿಳಿಸಿದ್ದಾರೆ.

ಪಿಂಚಣಿಗೆ ಅರ್ಹರಾದ ಮಹಿಳೆಯರು(ವಿಧವೆ/ಒಂಟಿ ಮಹಿಳೆಯರು) ತಿಂಗಳಿಗೆ 2,250 ರೂ.ನಂತೆ ವಾರ್ಷಿ 27,000 ರೂ.ಗಳಲ್ಲದೆ ನೂತನ ಯೋಜನೆಯಡಿ ವಾರ್ಷಿಕ 18,750 ರೂಗಳನ್ನು ಪಡೆಯುತ್ತಾರೆ.

ಚೇಯುಥಾ ಯೋಜನೆಯಡಿ ಫಲಾನುಭವಿಗಳಿಗೆ ಮಾರ್ಕೆಟಿಂಗ್ ಮತ್ತು ತಾಂತ್ರಿಕ ನೆರವನ್ನೂ ಸಹ ಸರ್ಕಾರದಿಂದ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Facebook Comments

Sri Raghav

Admin