ಆಂಧ್ರಪ್ರದೇಶದಲ್ಲಿ 67 ಜನರಿದ್ದ ದೋಣಿ ಮುಳುಗಡೆ ಹಲವರು ಜಲಸಮಾಧಿ

ಈ ಸುದ್ದಿಯನ್ನು ಶೇರ್ ಮಾಡಿ

ರಾಜಮಂಡ್ರಿ, ಸೆ.15-ಆಂಧ್ರಪ್ರದೇಶದ ರಾಜಮಂಡ್ರಿ ಗೋದಾವರಿ ನದಿಯಲ್ಲಿ ಇಂದು ಮಧ್ಯಾಹ್ನ 67 ಜನರಿದ್ದ ದೋಣಿಯೊಂದು ಮುಳುಗಿ ಕೆಲವರು ಜಲಸಮಾಧಿಯಾಗಿದ್ದಾರೆ.

ಈವರೆಗೂ 10 ಜನರನ್ನು ರಕ್ಷಿಸಲಾಗಿದ್ದು, ನೀರು ಪಾಲಾಗಿರುವವರಿಗಾಗಿ ನುರಿತ ಈಜುಗಾರರು ಮತ್ತು ರಕ್ಷಣಾ ಪಡೆಗಳು ತೀವ್ರ ಶೋಧ ಮುಂದುವರೆಸಿದೆ.

ಪಾಪಿಕೊಂಡಲು ಪ್ರದೇಶಕ್ಕೆ ದೋಣಿ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ಸಾಗಿದ್ದು, ದೋಣಿಗಳ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.

Facebook Comments

Sri Raghav

Admin