“ನಟ ಸುಶಾಂತ್ ಸಿಂಗ್ ಆತ್ಮಹತ್ಮೆ ಪಕರಣದ ಕುರಿತು ಸಿಬಿಐ ತನಿಖೆ ಅಗತ್ಯವಿಲ್ಲ”

ಈ ಸುದ್ದಿಯನ್ನು ಶೇರ್ ಮಾಡಿ

ನಾಗ್ಪುರ,ಜು.18- ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಮೆ ಪ್ರಕರಣದ ತನಿಖೆ ನಡೆಸಲು ಮುಂಬೈ ಪೊಲೀಸರೇ ಸಮರ್ಥರಾಗಿರುವುದರಿಂದ ಸಿಬಿಐ ತನಿಖೆಗೊಳಪಡಿಸುವ ಅಗತ್ಯವಿಲ್ಲ ಎಂದು ಮಹಾರಾಷ್ಟ್ರದ ಸಚಿವ ಅನಿಲ್ ದೇಶ್ಮುಖ್ ಹೇಳಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ (34) ಜೂ.14 ರಂದು ಮುಂಬೈನ ಬಾಂದ್ರಾ ಅಪಾಟ್ರ್ಮೆಂಟ್‍ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಆತ್ಮಹತ್ಯೆ ಪ್ರಕರಣ ಎಂದು ಪೆÇಲೀಸರು ಹೇಳಿಕೊಂಡಿದ್ದಾರೆ. ಆರಂಭಿಕ ತನಿಖೆಯಲ್ಲಿ, ಮುಂಬೈ ಪೆÇಲೀಸರು ನಟ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದುಬಂದಿದೆ.

ರಜಪೂತ್ ಸ್ನೇಹಿತ ಹಾಗೂ ನಟ ರಿಯಾ ಚಕ್ರವರ್ತಿ ಅವರು ಟ್ವೀಟ್ ನಲ್ಲಿ ಸಿಬಿಐ ತನಿಖೆಗೆ ಒತ್ತಾಯಿಸಿದ್ದು, ಯಾವ ಒತ್ತಡಗಳು ರಜಪೂತನನ್ನು ಆತ್ಮಹತ್ಯೆಯ ತೀವ್ರ ಹೆಜ್ಜೆ ಇಡಲು ಪ್ರೇರೇಪಿಸಿತು ಎಂಬುದನ್ನು ಅರ್ಥಮಾಡಿಕೊಳ್ಳಿ ಎಂದು ಬರೆದುಕೊಂಡಿದ್ದರು.

ಇದೀಗ ಗೃಹ ಸಚಿವ ಅನಿಲ್ ದೇಶ್ಮುಖ್ ಪೊಲೀಸರೇ ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸಲಿದ್ದಾರೆ. ಈಗಾಗಲೇ ನಾನಾ ದೃಷ್ಟಿಕೋನಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಪ್ರಕರಣವನ್ನು ಸಿಬಿಐ ವಹಿಸುವುದರ ಅಗತ್ಯವೇನಿಲ್ಲ ಎಂದಿದ್ದಾರೆ.

Facebook Comments

Sri Raghav

Admin