ಪೊಲೀಸರ ನೆರವಿಗೆ ಧಾವಿಸಿದ ಕುಂಬ್ಳೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 27- ಕೊರೊನಾ ಸೋಂಕು ಹರಡುವುವಿಕೆ ತಡೆಯುವಲ್ಲಿ ಹಗಲಿರುಳು ಶ್ರಮಿಸುತ್ತಿರುವ ಪೊಲೀಸರಿಗೆ ಒಂದು ಸಾವಿರ ಸೇಫ್ಟಿ ಕಿಟ್‍ಗಳನ್ನು ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆ ನೀಡಿದರು. ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್‍ರಾವ್ ಅವರಿಗೆ ಆಯುಕ್ತರ ಕಚೇರಿಯಲ್ಲಿ ಈ ಕಿಟ್‍ಗಳನ್ನು ಅವರು ನೀಡಿದರು. ಯುವ ಎಂಬ ಎನ್‍ಜಿಒ ಸಂಸ್ಥೆ ಜತೆಗೂಡಿ ಈ ಸೇಫ್ಟಿ ಕಿಟ್‍ಗಳನ್ನು ಅನಿಲ್‍ಕುಂಬ್ಳೆ ವಿತರಿಸಿದರು.

ಕೊರೊನಾ ವಾರಿಯರ್ಸ್‍ಗಳ ಹಿತದೃಷ್ಟಿಯಿಂದ ಈ ಕಿಟ್‍ಗಳನ್ನು ವಿತರಿಸಲಾಗಿದೆ ಎಂದು ಈ ವೇಳೆ ಅನಿಲ್‍ಕುಂಬ್ಳೆ ತಿಳಿಸಿದರು. ಈ ಸೇಫ್ಟಿ ಕಿಟ್‍ಗಳಲ್ಲಿ ಸೋಪು, ಸ್ಯಾನಿಟೈಜರ್, ಮಾಸ್ಕ್, ರೋಗ-ನಿರೋಧಕ ಔಷಧಗಳಿವೆ.

Facebook Comments