ರಾಹುಲ್ ನಾಯಕನಾಗಿ ಮಿಂಚಲಿದ್ದಾರೆ : ಕುಂಬ್ಳೆ

ಈ ಸುದ್ದಿಯನ್ನು ಶೇರ್ ಮಾಡಿ

ದುಬೈ, ಸೆ.5- ಆತ ರಿಲ್ಯಾಕ್ಸ್ ಮೂಡ್‍ನಲ್ಲಿ ಇದ್ದಾನೆ. ಕ್ರಿಕೆಟ್ ಬಗ್ಗೆ ಅವನಿಗೆ ಪ್ರಬುದ್ಧತೆ ಬಂದಿದೆ ಮತ್ತು ತಂಡವನ್ನು ಹೇಗೆ ಮುನ್ನಡೆಸಬಹುದು ಎಂಬುದು ಗೊತ್ತಿದೆ ಎಂದು ಕಿಂಗ್ಸ್ ಎಲವೆನ್ ಪಂಚಾಬ್‍ನ ನಾಯಕ ಕೆ.ಎಲ್.ರಾಹುಲ್ ಅವರನ್ನು ತಂಡದ ಕೋಚ್ ಆಗಿರುವ ಅನಿಲ್‍ಕುಂಬ್ಳೆ ಸಮರ್ಥಿಸಿದ್ದಾರೆ.

ತಂಡಕ್ಕೆ ಇಂತಹ ಯುವ ಹಾಗೂ ಭರವಸೆಯ ಆಟಗಾರ ಸಾರಥ್ಯ ವಹಿಸಿರುವುದು ಉತ್ತಮವಾದ ಬೆಳವಣಿಗೆ ಎಂದು ಕನ್ನಡಿಗರೇ ಆಗಿರುವ ರಾಹುಲ್ ಬಗ್ಗೆ ಅನಿಲ್ ಕುಂಬ್ಳೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಈ ಐಪಿಎಲ್‍ನಲ್ಲಿ ನಾಯಕತ್ವ ಗುಣಗಳನ್ನು ರಾಹುಲ್ ಕಲಿಯುತ್ತಾರೆ. ಕಳೆದ ಬಾರಿ ಅಶ್ವಿನ್ ಅವರು ತಂಡದ ಸಾರಥ್ಯ ವಹಿಸಿದ್ದು. ಆದರೆ ಈಗ ಅವರು ಬೇರೆ ತಂಡದ ಪಾಲಾಗೊದ್ದಾರೆ. ಇದರಿಂದ ನಮಗೆನೂ ಅಳುಕಿಲ್ಲ ಎಂದು ಹೇಳಿದ್ದಾರೆ.

ನಾಯಕನಾಗಿ ರಾಹುಲ್ ಮಿಂಚುವುದರಲ್ಲಿ ಅನುಮಾನವಿಲ್ಲ. ಪಂದ್ಯಾವಳಿಯಲ್ಲಿ ನಮ್ಮ ನೈಜ್ಯ ಪ್ರದರ್ಶನ ಹೇಗೆ ಇರುತ್ತದೆ ಎಂಬುದನ್ನು ಕಾದು ನೋಡುತ್ತಿರಿ ಎಂದು ಹೇಳುವ ಮೂಲಕ ಕುಂಬ್ಳೆ ಕ್ರಿಕೆಟ್ ಪ್ರಿಯರಿಗೆ ಅಚ್ಚರಿ ಮೂಡಿಸಿದ್ದಾರೆ.

Facebook Comments