ಕಾಲಿಗೆ ಬಿದ್ದರೂ ಕ್ಯಾರೆ ಎನ್ನದ ಶಾಸಕಿ ಅನಿತಾ ಕುಮಾರಸ್ವಾಮಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.11-ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಬಂದರೆ ಶಾಸಕಿ ಅನಿತಾ ಕುಮಾರಸ್ವಾಮಿಯವರು ಸ್ಪಂದಿಸದ ಕಾರಣ ಜನ ಘೇರಾವ್ ಮಾಡಿದ ಪ್ರಸಂಗ ನಡೆಯಿತು. ರಾಮನಗರ ನಗರಸಭೆಗೆ ಆಗಮಿಸಿದ್ದ ಶಾಸಕಿ ಅನಿತಾಕುಮಾರಸ್ವಾಮಿ ಅವರ ಬಳಿ ನೂರಾರು ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಮುಂದಾದರು.

ಅದರಲ್ಲೂ ಕೆಲವರು ಕಾಲಿಗೆ ಬಿದ್ದು ತಮ್ಮ ಸಮಸ್ಯೆ ಪರಿಹರಿಸುವಂತೆ ಬೇಡಿಕೊಂಡರು. ಆದರೆ ಇದ್ಯಾವುದಕ್ಕೂ ಕ್ಯಾರೆ ಎನ್ನದ ಶಾಸಕರು ಮುಂದೆ ನಡೆಯುತ್ತಲೇ ಹೋದರು. ಇದರಿಂದ ಕುಪಿತಗೊಂಡ ಜನರು ಅವರನ್ನು ಘೇರಾವ್ ಮಾಡಿ ನಮ್ಮ ಕಷ್ಟಗಳನ್ನು ಶಾಸಕರಾದ ನಿಮ್ಮ ಬಳಿ ಹೇಳಿಕೊಳ್ಳದೆ ಇನ್ಯಾರ ಮುಂದೆ ತೋಡಿಕೊಳ್ಳಬೇಕು.

ನೀವು ಯಾವಾಗಲೂ ನಮಗೆ ಸಿಗುವುದೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಶಾಸಕರು ಬರುವ ವಿಚಾರ ತಿಳಿದು ವಿವಿಧ ಹಳ್ಳಿಗಳಿಂದ ನೂರಾರು ಮಂದಿ ನಗರಸಭೆ ಮುಂದೆ ಜಮಾಯಿಸಿದ್ದರು.

ಆದರೆ ಜನರ ಸಮಸ್ಯೆ ಸ್ಪಂದಿಸದ ಕಾರಣ ಜನರು ಆಕ್ರೋಶ ಮೇರೆ ಮೀರಿತು. ಇದರಿಂದ ಕೆಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ತಕ್ಷಣ ಪೊಲೀಸರು ಜನರನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

Facebook Comments