ಗೋದಾಮಿನಲ್ಲಿದ್ದ 1000ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿಗೆ ಕನ್ನ

ಈ ಸುದ್ದಿಯನ್ನು ಶೇರ್ ಮಾಡಿ

Annabhagya--01
ಮೈಸೂರು, ಜು.14-ಅನ್ನಭಾಗ್ಯ ಯೋಜನೆಯ ಒಂದು ಸಾವಿರ ಕ್ವಿಂಟಾಲ್ ಅಕ್ಕಿ ಕಳುವಾಗಿರುವ ಘಟನೆ ನಂಜನಗೂಡಿನ ಎಪಿಎಂಸಿಯ 5ನೇ ಗೋದಾಮಿನಲ್ಲಿ ನಡೆದಿದೆ. ಐವತ್ತು ಕೆಜಿ ತೂಕದ ಎರಡು ಸಾವಿರ ಅಕ್ಕಿ ಮೂಟೆಗಳು ಗೋದಾಮಿನಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.  ಬೆಂಗಳೂರಿನ ಆಹಾರ ಇಲಾಖೆ ಅಧಿಕಾರಿಗಳು ನಂಜನಗೂಡಿನ ಎಪಿಎಂಸಿಯಲ್ಲಿ ತಪಾಸಣೆ ನಡೆಸಿದ ಸಂದರ್ಭದಲ್ಲಿ ಅಕ್ಕಿ ಮೂಟೆಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮೈಸೂರು ಆಹಾರ ಇಲಾಖೆ ಉಪನಿರ್ದೇಶಕ ಕಾಮೇಶ್ವರಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Facebook Comments

Sri Raghav

Admin