ವೈಟ್ರಿವೇಲ್ ಯಾತ್ರೆ ಮೂಲಕ ತಮಿಳುನಾಡು ರಾಜಕೀಯವನ್ನು ಬದಲಾಯಿಸುತ್ತಾರಾ ಅಣ್ಣಾಮಲೈ..!

ಈ ಸುದ್ದಿಯನ್ನು ಶೇರ್ ಮಾಡಿ

ತಮಿಳು ನಾಡು,ಇಡೀ ಪ್ರಪಂಚದಲ್ಲಿ ಇವರದ್ದೇ ಆದ ಅಸ್ತಿತ್ವ,ಭಾಷಾ ಪ್ರೇಮ,ಮಾತೃ ಸಂಸ್ಕøತಿಯ ಅಭಿಮಾನ ಎಂದೆಂದಿಗೂ ಅಮರ,ಆಧುನಿಕ ಜಗತ್ತಿಗೆ ಮರುಳಾಗದೇ ಎಲ್ಲಿಯೂ ತಮ್ಮ ತನವನ್ನು ಬಿಟ್ಟು ಕೊಡದೇ ಇಂದಿಗೂ ಸ್ವಂತಿಕೆ ಉಳಿಸಿಕೊಂಡಿರುವ ಭಾರತದ ಏಕೈಕ ರಾಜ್ಯವೆಂದರೆ ಅದು ತಮಿಳು ನಾಡು ಪ್ರಾಯಶಃ ಈ ಮಾತು ಅತಿಶಯೋಕ್ತಿ ಆಗಲಾರದು.

ಪ್ರಬಲವಾಗಿ, ಪ್ರಬುದ್ಧವಾಗಿ,ಇಂದಿಗೂ ತಮಿಳರ ಜನಮಾನಸದಲ್ಲಿ ಪ್ರಭಾವ ಬೀರಿರುವ ಪಕ್ಷಗಳೆಂದರೆ ಮೊದಲನೆಯದು ಡಿಎಂಕೆ ಮತ್ತೊಂದು ಅಣ್ಣಾ ಡಿಎಂಕೆ. ತಮಿಳುನಾಡಿನಲ್ಲಿ ನಿರಂತರವಾಗಿ ಈ ಎರಡೇ ಪ್ರಾದೇಶಿಕ ಪಕ್ಷಗಳು ಅಧಿಕಾರ ನಡೆಸುವುದು ಎಂದರೆ ಸಾಮಾನ್ಯದ ಮಾತಲ್ಲ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಬಿಜೆಪಿ ಇವುಗಳು ಇಲ್ಲಿ ಶೂನ್ಯ, ಇವರ ಯಾವ ತಂತ್ರಗಾರಿಕೆಗೂ ತಮಿಳು ನಾಡಿನ ಜನ ಅವಕಾಶ ಕೊಟ್ಟಿಲ್ಲ..

ಅಷ್ಟರ ಮಟ್ಟಿಗೆ ಡಿ.ಎಂ.ಕೆ ಮತ್ತು ಅಣ್ಣಾ ಡಿ.ಎಂ.ಕೆ ಪಕ್ಷಗಳು ತಮಿಳುನಾಡಿಗೆ ಅದು ಬಿಟ್ಟರೆ ಇದು ಎಂಬಂತೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಜಗತ್ತಿಗೆ ಪರಿಚಿತವಾಗಿದ್ದವು. ಡಿಎಂಕೆ ಪಕ್ಷವನ್ನು ಕರುಣಾನಿಧಿ ಮುನ್ನೆಡಿಸಿದರೆ, ಅಣ್ಣಾ ಡಿಎಂಕೆ ಪಕ್ಷವನ್ನು ಜಯಲಲಿತಾ ಮುನ್ನಡೆಸಿ ಜಿದ್ದಾಜಿದ್ದಿನ ರಾಜಕೀಯ ಚರಿತ್ರೆಯನ್ನೆ ಸೃಷ್ಟಿಸಿದ್ದರು. ಆದರೆ ಈಗ ಇದೆಲ್ಲ ಇತಿಹಾಸ ಇಡೀ ಚರಿತ್ರೆಯಲ್ಲಿ ದಾಖಲಾಗಿರುವ ಪ್ರಕಾರ ಇಡೀ ಜಗತ್ತನ್ನೇ ಗೆಲ್ಲಬೇಕು ಎಂಬ ಆಸೆಯಲ್ಲಿ ಅಲೆಕ್ಸಾಂಡರ್ ಕನಸು ಕಂಡಿದ್ದರೆ, ಈಗ ಪ್ರಸ್ತುತ ಇಡೀ ಭಾರತವನ್ನೆ ಬಿಜೆಪಿ ಗೆಲ್ಲಬೇಕು ಎಂಬುದು ಅಮಿತ್ ಶಾರವರ ಕನಸು.

ಆದ್ದರಿಂದಲೇ ದೇಶದ ತುಂಬಾ ಸಂಘಟನೆಯಲ್ಲಿ ರಾಷ್ಟ್ರೀಯ ಭಾಜಪ ತೊಡಗಿದೆ.ತಮಿಳುನಾಡಿನ ಅಣ್ಣಾಮಲೈ ಎಂಬ ಮಾಜಿ ಐಪಿಎಸ್ ಅಧಿಕಾರಿಯನ್ನು ಭಾಜಪಗೆ ಸೇರ್ಪಡೆ ಮಾಡಿಕೊಂಡು ರಾಜ್ಯದ ಉಪಾಧ್ಯಕ್ಷ ಹುದ್ದೆ ನೀಡಿ ತಮಿಳು ನಾಡಿನಾದ್ಯಂತ ಹಿಂದುತ್ವದ ಹೆಸರಿನಲ್ಲಿ ಪಕ್ಷ ಸಂಘಟನೆ ಮಾಡಲು ಸೂಚನೆ ನೀಡಲಾಗಿದೆ.ಆ ಜವಾಬ್ದಾರಿಯನ್ನು ಶಿರಸಾವಹಿಸಿ ಪಾಲಿಸುತ್ತಿರುವ ಅಣ್ಣಾಮಲೈ ತಮಿಳು ನಾಡಿನ ಹಿಂದೂಗಳನ್ನು ಒಟ್ಟೂಗೂಡಿಸಲು ವೈಟ್ರಿವೇಲ್ ಯಾತ್ರೆ ಶುರು ಮಾಡಿದ್ದಾರೆ.

ಸ್ವಾತಂತ್ರ್ಯ ಪೂರ್ವದಲ್ಲಿ ಪೆರಿಯಾರ್ ಎಂಬ ಹೋರಾಟಗಾರ ದ್ರಾವಿಡರ ಸ್ವಾಭಿಮಾನದ ಗೌರವ ಪ್ರತೀಕವಾಗಿ ಪ್ರಾರಂಭಿಸಿದ ಹೋರಾಟದಲ್ಲಿ ಬ್ರಾಹ್ಮಣರನ್ನು ಮತ್ತು ಹಿಂದೂ ದೇವರುಗಳನ್ನು ಮನಸೋ ಇಚ್ಛೆ ನಿಂದಿಸುತ್ತಾರೆ.ಅದೇ ಸಿದ್ದಂತದಲ್ಲಿ ಹುಟ್ಟಿಕೊಂಡ ಡಿಎಂಕೆ ಪಕ್ಷ ಅಣ್ಣಾದೊರೈ, ಕರುಣಾನಿಧಿ ಆಧಿಯಾಗಿ ಹಿಂದೂಗಳನ್ನು ಹಿಂದೂ ದೇವತೆಗಳನ್ನು ವಾಚಮಗೋಚರವಾಗಿ ಬೈಯುತ್ತಲೇ ತಮ್ಮ ಸಿದ್ದಂತವನ್ನು ಮುಂದುವರೆಸಿದರು.

ತಮಿಳರು ಎಲ್ಲೇ ಇರಲಿ ಶ್ರೀಲಂಕಾದ ಜಾಪ್ನ, ಕದೀರ್ಮಗಂನಿಂದ ಹಿಡಿದು ಸಿಂಗಾಪೂರ್, ಮಲೇಷ್ಯಾ ಹೀಗೆ ಪ್ರಪಂಚದ ಯಾವ ಮೂಲೆಯಲ್ಲಿದ್ದರೂ ಅವರು ಆರಾಧಿಸುವ ದೇವರೆಂದರೆ ಮುರುಗ ಅಥವಾ ಇನ್ನೊಂದು ಹೆಸರು ಸುಬ್ರಹ್ಮಣ್ಯ. ಮುರುಗ ಎಂದರೆ ಅವರಿಗೆ ಪ್ರಾಣಕ್ಕಿಂತ ಹೆಚ್ಚು. ಪೂಜ್ಯ ಮನೋಭಾವನೆ ಹೊಂದಿರುವ ಇವರು ಪ್ರತಿದಿನ ಮುರುಗನನ್ನು ಪೂಜಿಸುವ ಸಲುವಾಗಿ ಕಂದಸಷ್ಟಿಕವಚಂ ಎಂಬ ಭಕ್ತಿ ಪ್ರಧಾನ ಶ್ಲೋಕ ಪ್ರತಿಯೊಬ್ಬರ ಮನೆ ಮನಗಳಲ್ಲು ಹರಿದಾಡುತ್ತಿತ್ತು.

ಆ ಸಂದರ್ಭದಲ್ಲಿ ಇವರ ಭಾವನೆಗಳಿಗೆ ದಕ್ಕೆ ಮಾಡಲೆಂದೇ ಕಂದಸಷ್ಟಿಕವಚಂ ಬಗ್ಗೆ ಕೆಟ್ಟದಾಗಿ ಚಿತ್ರಿಸಿ ಹೊಲಸು ಶಬ್ದಗಳಿಂದ ಇವರ ಭಾವನೆಗಳಿಗೆ ಕರ್ಪಕೂಟಂ ಎಂಬ ಒಂದು ಗುಂಪು ತೀವ್ರ ನೋವುಂಟು ಮಾಡಿತು. ಆಗ ಈ ಬೆಳವಣಿಗೆಯನ್ನು ಖಂಡಿಸಿ ಜಗತ್ತಿನಾದ್ಯಂತ ಮುರುಗನ ಭಕ್ತರು ವ್ಯಾಪಕವಾಗಿ ಹೋರಾಟ ನಡೆಸಿದರು.

ಆದರೆ ಡಿಎಂಕೆ ನೇತೃತ್ವದ ಕರುಣಾನಿಧಿ ಸರ್ಕಾರದಲ್ಲಿ ಹೋರಾಟಗಾರರಿಗೆ ಯಾವುದೇ ಪ್ರತಿಫಲ ಸಿಗಲಿಲ್ಲ ಜೊತೆಗೆ ಅವರ ಧ್ವನಿಯನ್ನು ಮತ್ತಷ್ಟು ಹತ್ತಿಕ್ಕಲಾಯಿತು ತಮಿಳುನಾಡಿನಲ್ಲಿ ಸುಮಾರು ವರ್ಷಗಳಿಂದ ಹಿಂದುತ್ವದ ಮೇಲೆ ದೊಡ್ಡ ದಬ್ಬಾಳಿಕೆಯೇ ನಡೆಯುತ್ತಿದೆ ಇದಕ್ಕೆ ಜೀವಂತ ಉದಾಹರಣೆಯೆಂದರೆ ತಿರುಮಾವಳವನ್ ತೋಲ್ ಎಂಬ ಚಿದಂಬರಂ ಕ್ಷೇತ್ರದ ಸಂಸದ ದಲಿತ್ ಪಾಲಿಪµ್ಟï ಎಂಬ ಸಂಘಟನೆಯ ಮೂಲಕ ವಿಡಿಯೋಗಳನ್ನು ಚಿತ್ರಿಸಿ ಪುಸ್ತಕಗಳನ್ನು ಬರೆಸಿ ಹಿಂದು ಸಂಪ್ರದಾಯ ಮತ್ತು ಹಿಂದುಗಳ ಮೇಲೆ ನಿರಂತರ ಮಾನಸಿಕ ದಾಳಿ ಮಾಡುತ್ತಿರುವುದು ಅತ್ಯಂತ ಖಂಡನೀಯ.

ಅದು ಎಷ್ಟರ ಮಟ್ಟಿಗೆ ಎಂದರೆ ಹಿಂದು ಹೆಣ್ಣು ಮಕ್ಕಳೆಲ್ಲ ವೇಶ್ಯೆಯರು ಎಂಬ ಹೇಳಿಕೆಯನ್ನೆ ಕೊಟ್ಟು ತಮ್ಮ ವಿಕೃತಿಯನ್ನು ಮೆರೆದರು ಸಹ ತಮಿಳುನಾಡಿನ ಸರ್ಕಾರ ತಿರುಮಾವಳವನ್ ರವರ ಮೇಲೆ ಯಾವುದೇ ಕ್ರಮ ಕೈಗೊಳ್ಳದಿರುವುದು ಅತ್ಯಂತ ದುರ್ದೈವದ ಸಂಗತಿ.

ಅರವತ್ತು ಎಪ್ಪತ್ತು ವರ್ಷಗಳಿಂದ ಹಿಂದುತ್ವದ ಮತ್ತು ಹಿಂದುಗಳ ಧ್ವನಿ, ಶಬ್ದ, ಉಸಿರು ಮೌನ ವಹಿಸಿ ಒಬ್ಬ ನಾಯಕನಿಗಾಗಿ ಕಾದು ಕುಳಿತಿದ್ದ ಇವರ ಕನಸು ಈಡೇರುವ ಕಾಲ ಬಂದಿದೆ.ದಕ್ಷ ಪ್ರಾಮಾಣಿಕ ಸಾಹಸಿ ಎಂದೇ ಪೊಲೀಸ್ ಇಲಾಖೆಯಲ್ಲಿ ಹೆಸರು ಮಾಡಿದ್ದ ಅಣ್ಣಾಮಲೈ ತಮಿಳುನಾಡಿನ ಬಿಜೆಪಿ ಉಪಾಧ್ಯಕ್ಷ ಸ್ಥಾನದ ಸಾರಥ್ಯ ವಹಿಸಿ ತಳ ಮಟ್ಟದಲ್ಲಿ ಬಿಜೆಪಿ ಸಂಘಟನೆಗೆ ಮುಂದಾಗಿದ್ದಾರೆ.

ಹಿಂದುತ್ವ ಮತ್ತು ಹಿಂದೂಗಳ ಮೇಲೆ ನಿರಂತರವಾಗಿ ನಡೆಯುತ್ತಲೇ ಇದ್ದ ದೌರ್ಜನ್ಯ ದಬ್ಬಾಳಿಕೆಗೆ ತಿಲಾಂಜಲಿ ಇಟ್ಟು ಸನಾತನ ಧರ್ಮದ ರಕ್ಷಣೆಗೆ ಸಂಕಲ್ಪ ಮಾಡಿ ವೈಟ್ರಿವೇಲ್ ಯಾತ್ರೆ ಕೈಗೊಂಡಿದ್ದಾರೆ. ವೈಟ್ರಿ ಎಂದರೆ ಗೆಲುವು ವೇಲ್ ಎಂದರೆ ಆಯುಧ ವೀರವೇಲ್ ಎಂದು ಸಹ ಕರೆಯುವರು. ಚೋಳರ ಪಾಂಡ್ಯರ ಕಾಲದಿಂದಲೂ ವೈಟ್ರಿವೇಲ್ ಎಂಬ ಶಬ್ದ ಧಾರ್ಮಿಕ ಶಬ್ದವಾಗಿ ಬಳಕೆಯಲ್ಲಿದೆ, ನಮಗೆ ಹರಾಹರಾಮಹಾದೇವ ಎಂಬ ಸಾಲಿನಂತೆ ಅವರಿಗೆ ವೈಟ್ರಿವೇಲ್ ಎಂಬ ಪದ ಪೂಜ್ಯನೀಯ.

ಮುರುಗ ಎಂದರೆ ಶಿವ ತನ್ನ ಮೂರನೇ ಕಣ್ಣು ಬಿಟ್ಟಾಗ ಉದ್ಬವವಾಗಿರುವ ದೇವರು ಎಂದು ಪುರಾಣದಲ್ಲಿ ಉಲ್ಲೇಖವಾಗಿದೆ. ಹಿಂದುಗಳ ಮೇಲಿನ ದಬ್ಬಾಳಿಕೆಯನ್ನು ಖಂಡಿಸಿ ಮತ್ತು ಹಿಂದೂಗಳನ್ನು ಒಟ್ಟುಗೂಡಿಸಲು ಸಾಂಸ್ಕøತಿಕ ಚಳವಳಿ ಅಥವಾ ಹಿಂದೂ ಚಳುವಳಿ ಎಂದೇ ಅರ್ಥೈಸಿರುವ ವೈಟ್ರಿವೇಲ್ ಯಾತ್ರೆಯನ್ನು ಮಾಡುತ್ತಿದ್ದಾರೆ.

ಡಿಸೆಂಬರ್ 5 ರಂದು ಅಸುರನನ್ನು ಸಂಹಾರ ಮಾಡಿದ ಐತಿಹಾಸಿಕ ಹಿನ್ನೆಲೆ ಇರುವ ತಿರುಚಂದೂರ್ ಮುರುಗನ ದೇವಸ್ಥಾನಕ್ಕೆ ಬಂದು ವೈಟ್ರಿವೇಲ್ ಯಾತ್ರೆ ತಲುಪಲಿದೆ. ಇಲ್ಲಿಂದ ಅಣ್ಣಾಮಲೈಯವರ ರಾಜಕೀಯ ಜೀವನಕ್ಕು ಒಂದು ದೊಡ್ಡ ತಿರುವು ಸಿಗಲಿದೆ ಎಂಬುದು ತಮಿಳುನಾಡಿನ ರಾಜಕೀಯ ಪಂಡಿತರ ಲೆಕ್ಕಚಾರ.

ಲೇಖನ:-ಮಹಾಂತೇಶ್ ಬ್ರಹ್ಮ

Facebook Comments