ನವೀನ್ ತಲೆ ತಂದವರಿಗೆ 51 ಲಕ್ಷ ಘೋಷಣೆ ಮಾಡಿದ್ದ ಮುಸ್ಲಿಂ ನಾಯಕ ಅಂದರ್

ಈ ಸುದ್ದಿಯನ್ನು ಶೇರ್ ಮಾಡಿ

ಲಕ್ನೋ,ಆ.15- ಬೆಂಗಳೂರು ಗಲಭೆಗೆ ಸಂಬಂಸಿದಂತೆ ಕಾಂಗ್ರೆಸ್ ಶಾಸಕ ಅಖಂಡ ಶ್ರೂನಿವಾಸಮೂರ್ತಿ ಸಂಬಂಧಿ ನವೀನ್ ತಲೆಗೆ 51 ಲಕ್ಷ ಘೋಷಣೆ ಮಾಡಿದ್ದ ಮುಸ್ಲಿಂ ನಾಯಕನನ್ನು ಮೀರತ್ ಪೊಲೀಸರು ಬಂಸಿದ್ದಾರೆ. ಬಂಧಿತ ಶಹಜೀಬ್ ರಿಜ್ವಿ ಸಮಾಜವಾದಿ ಪಕ್ಷದ ಮಾಜಿ ಸದಸ್ಯ ಹಾಗೂ ಸಾಮಾಜಿಕ ಕಾರ್ಯಕರ್ತನಾಗಿದ್ದಾನೆ.

ಮೀರತ್ ನ ಫಲ್ವಾಡಾ ಒಟ್ಟಣದ ರಸೂಲ್‍ಪುರ ಗ್ರಾಮದ ನಿವಾಸಿಯಾಗಿರುವ ರಿಜ್ವಿ, ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದನು. ಈ ವಿಡಿಯೋದಲ್ಲಿ ಆತ, ಫೇಸ್‍ಬುಕ್ ನಲ್ಲಿ ಸಮುದಾಯದ ಬಗ್ಗೆ ಬರೆದುಕೊಂಡಿರುವ ನವೀನ್ ತಲೆಯನ್ನು ತಂದವರಿಗೆ 51 ಲಕ್ಷ ಕೊಡುವುದಾಗಿ ಘೋಷಣೆ ಮಾಡಿದ್ದನು.

ಈ ವಿಡಿಯೋ ಭಾರೀ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸರು ರಿಜ್ವಿಗಾಗಿ ತೀವ್ರ ಹುಡುಕಾಟ ನಡೆಸಿದ್ದರು. ಇದೀಗ ಆತನನ್ನು ಮೀರತ್ ಪೊಲೀಸರು ಬಂಸಿದ್ದಾರೆ.

ಕಾಂಗ್ರೆಸ್ ಶಾಸಕರ ಸಂಬಂಯ ಪೋಸ್ಟ್ ನಿಂದಾಗಿ ಮುಸ್ಲಿಂ ಸಮುದಾಯದ ಭಾವನೆಗಳಿಗೆ ನೋವುಂಟಾಗಿದೆ. ಅದಕ್ಕೆ ಪ್ರತಿಯಾಗಿ ಆತನ ತಲೆ ತಂದವರಿಗೆ 51 ಲಕ್ಷ ಕೊಡುವುದಾಗಿ ಘೋಷಿಸಿದ್ದನು. ಈ ಸಂಬಂಧ ನನ್ನನ್ನು ಬೆಂಬಲಿಸುವವರು ಹಣ ಸಂಗ್ರಹಿಸಿ ಕೊಡಿ ಎಂದು ಕೂಡ ರಿಜ್ವಿ ವಿಡಿಯೋದಲ್ಲಿ ಹೇಳಿದ್ದಾನೆ.

ಸದ್ಯ ರಿಜ್ವಿಯನ್ನು ಬಂಸಿರುವ ಮಾಹಿತಿ ನಿಡಿದ ಮೀರತ್ ನ ಪೊಲೀಸ್ ವರಿಷ್ಠಾಕಾರಿ, ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 153(ಎ)(ಎರಡು ಗುಂಪುಗಳ ನಡುವೆ ವೈಷಮ್ಯಕ್ಕೆ ಪ್ರಚೋದನೆ) ಹಾಗೂ 505(2) (ಕೋಮು ಸಂಘರ್ಷಕ್ಕೆ ಪ್ರೇರೇಪಣೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ಹಿಂದೆ ಸಮಾಜವಾದಿ ಪಕ್ಷದ ನಾಯಕನಾಗಿದ್ದ ರಿಜ್ವಿ, ಈಗ ರಾಜಕಾರಣದಿಂದ ದೂರ ಉಳಿದಿದ್ದಾನೆ. ಸಮಾಜವಾದಿ ಪಕ್ಷದ ಅಲ್ಪಸಂಖ್ಯಾತ ಘಟಕದ ಉತ್ತರಪ್ರದೇಶ ರಾಜ್ಯ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದನು. ಪಕ್ಷ ತೊರೆದ ಬಳಿಕ ಆತ ತಾನು ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಂಡಿದ್ದಾನೆ.

Facebook Comments

Sri Raghav

Admin