ಕಿಸ್ ಕೊಡಲು ಹೋಗಿ ಜೈಲು ಪಾಲಾದ ಬಾಕ್ಸರ್..!

ಈ ಸುದ್ದಿಯನ್ನು ಶೇರ್ ಮಾಡಿ

kiss

ರಿಯೋ ಡಿ ಜನೈರೋ, ಆ.9-ಇಲ್ಲಿನ ಒಲಂಪಿಕ್ ಗ್ರಾಮದಲ್ಲಿ ಓರ್ವ ಕೆಲಸದಾಕೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ನಮೀಬಿಯಾ ಬನಾಕ್ಸರ್‍ನನ್ನು ಪೊಲೀಸರು ಬಂಧಿಸಿದ್ದಾರೆ.
ಒಲಂಪಿಕ್ ಉದ್ಘಾಟನಾ ಸಮಾರಂಭದಲ್ಲಿ ದೇಶದ ಧ್ವಜ ಹಿಡಿದು ತಮ್ಮ ತಂಡವನ್ನು ಮುನ್ನಡೆಸಿದ ನಮೀಬಿಯಾದ 22 ವರ್ಷದ ಜೋನಾಸ್ ಜುನಿಯಸ್ ಈಗ ಪೊಲೀಸರ ವಶದಲ್ಲಿದ್ದಾನೆ.
ತನ್ನನ್ನು ಈತ ಬರಸೆಳೆದು ಚುಂಬನ ನೀಡಲು ಯತ್ನಿಸಿದ. ಅಲ್ಲದೆ ಲೈಂಗಿಕ ಸಹಕಾರಕ್ಕಾಗಿ ಹಣದ ಆಮಿಷವೊಡ್ಡಿದ ಎಂದು ಕೆಲಸದಾಕೆ ಆರೋಪಿಸಿದ್ದಾಳೆ.  ಬಂಧಿತನಾಗಿರುವ ಲೈಟ್‍ವೇಟ್ ವಿಭಾಗದ ಈ ಬಾಕ್ಸರ್‍ನನ್ನು 15 ದಿನಗಳ ಕಾಲ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಕಳೆದ ವಾರ ಮಹಿಳಾ ಪರಿಚಾರಕಿಯರಿಗೆ  ಲೈಂಗಿಕ ಕಿರುಕುಳ ನೀಡಿದ ಮೊರೊಕೊ ಬಾಕ್ಸರ್‍ನನ್ನು ಪೊಲೀಸರು ಬಂಧಿಸಿದ್ದರು.

Facebook Comments

Sri Raghav

Admin