BIG NEWS : ಸಿಎಎ ವಿರೋಧಿಸಿ ಗಲಭೆ ಸೃಷ್ಟಿಗೆ ಪಿಎಪ್ಐನಿಂದ ಕೆಲವು ಕಾಂಗ್ರೆಸ್ ನಾಯಕರಿಗೆ ಕೋಟಿಗಟ್ಟಲೆ ಹಣ ಸಂದಾಯ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ : ದೇಶದದ್ಯಾಂತ ಭಾರೀ ಕೋಲಾಹಲ ಸ್ರಷ್ಪಿಸಿರುವ ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ( ಸಿಎಎ) ವಿರೋಧಿಸಿ ನಡೆದ ಪ್ರತಿಭಟನೆಗೆ ಪಿಎಪ್ ಐ ನಿಂದ ಕೆಲವು ಕಾಂಗ್ರೆಸ್ ನಾಯಕರಿಗೆ ಹಣ ಸಂದಾಯವಾಗಿರುವುದನ್ನು ಪತ್ತೆ ಮಾಡಲಾಗಿದೆ.

ಹಣ ಪಡೆದ ಫಲಾನುಭವಿಗಳಲ್ಲಿ ಕಾಂಗ್ರೆಸ್​ ನಾಯಕ ಕಪಿಲ್​ ಸಿಬಲ್​, ಸುಪ್ರೀಂಕೋರ್ಟ್​ ವಕೀಲೆ ಇಂದಿರಾ ಜೈಸಿಂಗ್​, ದುಶ್ಯಂತ್​ ಎ ದೇವ್​ ಮತ್ತು ಅಬ್ದುಲ್​ ಸಮಂದ್​ ಕೂಡ ಸೇರಿದ್ದಾರೆ ಎಂದು ತಿಳಿದುಬಂದಿದೆ. PFI ಸಂಘಟನೆಯನ್ನು ನಿಷೇಧಿಸಬೇಕು ಅನ್ನೋವಂಥ ಹಲವು ಒತ್ತಾಯಗಳು ದೇಶಾದ್ಯಂತ ಕೇಳಿಬರುತ್ತಿರುವ ಈ ಸಂದರ್ಭದಲ್ಲೇ ರಾಜಕೀಯ ನಾಯಕರು ಹಾಗೂ ಸಂಘ ಸಂಸ್ಥೆಗಳಿಗೆ ಹಣ ಸಂದಾಯವಾಗಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.

ಖ್ಯಾತ ವಕೀಲರು, ಕೆಲವು ಸಂಸ್ಥೆಗಳು ಹಾಗೂ ರಾಜಕೀಯ ಪಕ್ಷಗಳ ನಾಯಕರಿಗೆ ಇದೇ ಪಾಪ್ಯುಲರ್ ಫ್ರಂಟ್ ಆಫ್​ ಇಂಡಿಯಾ ಸಂಘಟನೆ ಬರೋಬ್ಬರಿ 120 ಕೋಟಿ ರೂಪಾಯಿಗಳನ್ನು ಸಂದಾಯ ಮಾಡಿದೆ ಎಂದು ಜಾರಿ ನಿರ್ದೇಶನಾಲಯದ (Enforcement Directorate ) ವರದಿ ತಿಳಿಸಿದೆ.

ಸುಮಾರು 73 ಖಾತೆಗಳಲ್ಲಿ ಫ್ರಂಟಿನ ಹಣ ವರ್ಗಾವಣೆಗೊಂಡಿದ್ದು, ಉತ್ತರಪ್ರದೇಶದಲ್ಲಿ ಪ್ರತಿಭಟನಾ ನಿರತ ಪ್ರದೇಶಗಳಿಗೆ ಹೆಚ್ಚಿನ ಹಣ ಸಂದಾಯವಾಗಿರುವ ಅಂಶವನ್ನು ಸಹ ಅಧಿಕಾರಿಗಳು ಗೃಹ ಸಚಿವಾಲಯದ ಗಮನಕ್ಕೆ ತಂದಿದ್ದಾರೆ.
ಉತ್ತರ ಪ್ರದೇಶದ ಹೊರತಾಗಿ ಜಮ್ಮು ಕಾಶ್ಮೀರದಲ್ಲಿರುವ ಖಾತೆಗೆ ಸಹ ಹಣ ಸಂದಾಯವಾಗಿರುವುದು ಬೆಳಕಿಗೆ ಬಂದಿದೆ.
ಈ ಮಧ್ಯೆ, ಪಿಎಫ್ಐ ವಿರುದ್ಧ ಅಕ್ರಮ ಹಣ ವಹಿವಾಟು ತಡೆ ಕಾಯ್ದೆ ಅಡಿ ಇಡಿ ತನಿಖೆ ನಡೆಸುತ್ತಿದ್ದು, ಇತ್ತೀಚಿನ ತನಿಖೆಯಲ್ಲಿ ಆಘಾತಕಾರಿ ಹೊಸ ವಿಷಯಗಳು ಬಹಿರಂಗಗೊಂಡಿವೆ. ಸಂಸತ್ತಿನಲ್ಲಿ ಸಿಎಎ ಅಂಗೀಕಾರಗೊಂಡ ನಂತರ ಪಶ್ಚಿಮ ಉತ್ತರ ಪ್ರದೇಶದ ವಿವಿಧ ಬ್ಯಾಂಕ್ ಖಾತೆಗಳಿಗೆ ಕನಿಷ್ಠ 120 ರೂಪಾಯಿ ಜಮೆಯಾಗಿರುವುದು ಪತ್ತೆಯಾಗಿದ್ದು, ಈ ಹಣವನ್ನು ಸಿಎಎ ವಿರೋಧಿ ಪ್ರತಿಭಟನೆಗೆ ಬಳಸಿಕೊಳ್ಳಲಾಗಿದೆ ಎಂಬ ಶಂಕೆ ವ್ಯಕ್ತಪಡಿಸಲಾಗಿದೆ.

ಸಿಎಎ ವಿರೋಧಿ ಪ್ರತಿಭಟನೆ ಮತ್ತು ಪಿಎಫ್ಐ ನಡುವಿನ ಆರ್ಥಿಕ ನಂಟಿನ ಕುರಿತು ಜಾರಿ ನಿರ್ದೇಶನಾಲಯ ಕೇಂದ್ರ ಗೃಹ ಸಚಿವಾಲಯಕ್ಕೆ ಮಾಹಿತಿ ನೀಡಿದೆ ಎಂದು ಮೂಲಗಳು ತಿಳಿಸಿವೆ. ಬೇನಾಮಿ ಹಣ ಪಡೆಯಲೆಂದು 27 ಖಾತೆ ತೆರೆಯಲಾಗಿತ್ತು. ರೆಹಬ್ ಇಂಡಿಯಾ ಹೆಸರಲ್ಲಿ 9 ಖಾತೆಗಳು, ಒಟ್ಟಾರೆ ದೇಶ-ವಿದೇಶದಿಂದ ಹಣ ಪಡೆಯಲು 73 ಅಕೌಂಟ್ ಓಪನ್ ಮಾಡಲಾಗಿತ್ತು ಎನ್ನಲಾಗಿದೆ.

ಡಿಸೆಂಬರ್​ 4ರಂದು ಸದನದಲ್ಲಿ ಸಿಟಿಜನ್​ಶಿಪ್ ಅಮೆಂಡ್​ಮೆಂಟ್​ ಬಿಲ್​ ಮಂಡನೆಯಾದ ಬಳಿಕ ಅಂದರೆ, ಡಿಸೆಂಬರ್​ 6ರ ನಂತರ ಈ ಹಣ ಸಂದಾಯವಾಗಿರೋವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.  ವಿಶೇಷ ಎಂದರೆ ಈ ಅಕೌಂಟ್​​ಗಳಿಂದ ಬಹುತೇಕ ಹಣ ಕೂಡ ಹಿಂಪಡೆಯಲಾಗಿದೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ. ಅದರಲ ಡಿಸೆಂಬರ್​ 12ರಂದು ಹಿಂಸಾಚಾರ ಭುಗಿಲೆದ್ದ ವೇಳೆ ಅತಿ ಹೆಚ್ಚು ಹಣ ಸಂದಾಯವಾಗಿರುವುದನ್ನು ಪತ್ತೆ ಹಚ್ಚಲಾಗಿದೆ.

ಮೂಲಗಳ ಪ್ರಕಾರ ಒಟ್ಟು 120 ಕೋಟಿ ರೂ. ಮೌಲ್ಯದ ಬ್ಯಾಂಕ್​ ವಹಿವಾಟು ಪಿಎಫ್​ಐನ 73 ಬ್ಯಾಂಕ್​ ಖಾತೆಗಳಿಂದ ನಡೆದಿದೆ. ಇದರಲ್ಲಿ ಕಪಿಲ್​ ಸಿಬಲ್​ಗೆ​ 77 ಲಕ್ಷ ರೂ, ಜೈಸಿಂಗ್​ 4 ಲಕ್ಷ ರೂ., ದುಶ್ಯಂತ್​ ಎ ದೇವ್ 11 ಲಕ್ಷ ರೂ. ಮತ್ತು ಅಬ್ದುಲ್​ ಸಮಂದ್​ 3.10 ಲಕ್ಷ ರೂ. ಹಣ ಸ್ವೀಕರಿಸಿದ್ದಾರೆ ಎಂದು ಹೇಳಲಾಗಿದೆ. ಇದಲ್ಲದೆ, ನ್ಯೂ ಜೋತಿ ಗ್ರೂಪ್​ಗೆ 1.17 ಕೋಟಿ ರೂ. ಮತ್ತು ಪಿಎಫ್​ಐ ಕಾಶ್ಮೀರಕ್ಕೆ 1.65 ಕೋಟಿ ರೂ. ಸಂದಾಯವಾಗಿದೆ ಎನ್ನಲಾಗಿದೆ.

ಪಿಎಫ್​ಐಗೆ ಸಂಬಂಧಿಸಿದ 73 ಬ್ಯಾಂಕ್​ ಖಾತೆಗಳನ್ನು ಪರಿಶೀಲಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಒಟ್ಟಾರೆ ಬ್ಯಾಂಕ್​ ವ್ಯವಹಾರವನ್ನು ಪರೀಕ್ಷಿಸಿದಾಗ ಒಟ್ಟು 120.5 ಕೋಟಿ ರೂ. ಈ ಖಾತೆಗಳಲ್ಲಿ ಸಂದಾಯವಾಗಿದ್ದು, ಅದೇ ದಿನ ಅಥವಾ ಎರಡು ಮೂರು ದಿನದೊಳಗೆ ಖಾತೆಗಳಲ್ಲಿ ಕನಿಷ್ಠ ನಗದು ಉಳಿತಾಯ ಮಾಡಿ ಹಣವನ್ನು ಹಿಂಪಡೆದಿರುವುದು ಬೆಳಕಿಗೆ ಬಂದಿದೆ.

ಇಡಿ ಅಧಿಕಾರಿಗಳ ಮಾಹಿತಿ ಪ್ರಕಾರ, 73 ಬ್ಯಾಂಕ್​ ಖಾತೆಗಳಿಂದ ಒಟ್ಟು 120 ಕೋಟಿ ರೂಪಾಯಿ ವರ್ಗಾವಣೆಗೊಂಡಿದೆಯಂತೆ. ಡಿಸೆಂಬರ್​ ಮೊದಲ ವಾರದಲ್ಲೇ ನಡೆದ ಈ ವಹಿವಾಟನ್ನ. ಕೆಲ ವಿದೇಶಿ ಶೇರುಗಳಿಂದ ಖಾಸಗಿ ಹೂಡಿಕೆ ಸಂಸ್ಥೆಗಳ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೇ ಈ ಹಣ ಉತ್ತರ ಪ್ರದೇಶದ ಬಿಜ್ನೋರ್​, ಹಾಪುರ್, ಬಹ್ರೇಚ್, ಶಾಮ್ಲಿ ಹಾಗೂ ದಾಸ್ನಾಗಳಲ್ಲಿ ವರ್ಗಾವಣೆಯಾಗಿದೆ ಅಂತಾ ಇಡಿ ಮೂಲಗಳು ತಿಳಿಸಿವೆ.

ಪಿಎಫ್​ಐನ(10) ಮತ್ತು ರೆಹಬ್​ ಇಂಡಿಯಾ(5) ಸೇರಿ ಒಟ್ಟು 15 ಬ್ಯಾಂಕ್​ಗಳಲ್ಲಿ 1.04 ಕೋಟಿ ರೂ. ಹಣವನ್ನು ಡಿಸೆಂಬರ್ 4, 2019ರಿಂದ ಜನವರಿ 6 2020ರವರೆಗೆ ಜಮಾವನೆ ಮಾಡಲಾಗಿದೆ. ಈ ಹಣವನ್ನು ಮೊಬೈಲ್​ ಬಳಸಿ ಐಎಂಪಿಎಸ್ ಮೂಲಕ ಜಮಾವಣೆ ಮಾಡಲಾಗಿದೆ.​ ಜಮಾವಣೆ ಮಾಡುವವರ ಗುರುತನ್ನು ಬಹಿರಂಗ ಪಡಿಸದೇ 50 ಸಾವಿರ ರೂ. ಕೆಳಗೆ ಹಣವನ್ನು ಖಾತೆಗೆ ಜಮಾ ಮಾಡಲಾಗಿದೆ.

ಪ್ರಸ್ತುತ ನಡೆಯುತ್ತಿರುವ ಸಿಎಎ ವಿರುದ್ಧ ಪ್ರತಿಭಟನೆಗೆ ನಿಧಿಯನ್ನು ನೀಡಲು ಪಿಎಫ್​ಐನ 9 ಕಚೇರಿಗಳು ಮತ್ತು ಸಂಬಂಧಿತ ಸಂಘಟನೆಗಳು ದೆಹಲಿಯ ಶಾಹೀನ್​ ಬಾಘ್​ ಏರಿಯಾದಲ್ಲಿ ತೆರೆದಿವೆ ಎಂಬ ಭಯಾನಕ ಮಾಹಿತಿಯನ್ನು ಕೂಡ ಮೂಲಗಳು ತಿಳಿಸಿವೆ.

# ಹೇಗೆ.. ಬಹಿರಂಗವಾಯ್ತು..?
ಪಿಎಫ್​ಐ (Popular Front of India) ಅಕ್ರಮ ಹಣ ಸಾಗಣೆ ಮಾಡ್ತಿದೆ ಎಂಬ ಆರೋಪದ ಮೇಲೆ ಇಡಿ (Enforcement Directorate) ಈ ಸಂಘಟನೆಯ ವಹಿವಾಟು ಮೇಲೆ ನಿಗಾವಹಿಸಿತ್ತು. 2018ರಿಂದ ಪಿಎಂಎಲ್​ಎ (Prevention of Money Laundering Act) ಆ್ಯಕ್ಟ್​ನಡಿ, ಉತ್ತರ ಪ್ರದೇಶ ಹಾಗೂ ಇನ್ನಿತರ ಭಾಗಗಳ ಪಿಎಫ್​​​​ಐ ವಹಿವಾಟು ಮೇಲೆ ಕಣ್ಣಿಟ್ಟಿತ್ತು. ಇದಾದ ಬಳಿಕ ಕಳೆದ ಡಿಸೆಂಬರ್​​ನಲ್ಲಿ ಸಂಸತ್​ನಲ್ಲಿ ಸಿಎಎ ಕಾಯ್ದೆ ಪಾಸಾದ ಬಳಿಕ, ಪಿಎಫ್​ಐ ವಹಿವಾಟಿನ ಸಂಪೂರ್ಣ ದಾಖಲೆಗಳನ್ನ ಇಡಿ ಅಧಿಕಾರಿಗಳು ಕಲೆ ಹಾಕಿದ್ದಾರೆ. ಈ ವೇಳೆ ಪಿಎಫ್​​ಐನಿಂದ ಈ ವಕೀಲರಿಗೆ ಹಣ ವರ್ಗಾವಣೆಯಾಗಿರುವ
ಮಾಹಿತಿ ಸಿಕ್ಕಿದೆ.

ಇನ್ನು ಈ ಬಗ್ಗೆ ಇಡಿ ಅಧಿಕಾರಿಗಳು ಕೇಂದ್ರ ಗೃಹ ಸಚಿವಾಲಯಕ್ಕೆ ಮಾಹಿತಿ ನೀಡಿದ್ದು, ಎಲ್ಲ ದಾಖಲಾತಿಗಳನ್ನ ನೀಡಿ ಹಣ ವರ್ಗಾವಣೆ ಬಗ್ಗೆ ಸಂಪೂರ್ಣ ವರದಿ ಸಲ್ಲಿಸಿದ್ದಾರೆ. ಸಿಎಎ ವಿರೋಧಿ ಪ್ರತಿಭಟನೆ ವೇಳೆ ನಡೆದ, ಹಿಂಸಾಚಾರ, ಅಗ್ನಿಸ್ಪರ್ಶ, ವಿಧ್ವಂಸಕ ಕೃತ್ಯಗಳ ಹಿಂದೆ ಎಫ್‌ಐ ಪಾತ್ರ ಇದ್ದು, ಅದನ್ನು ನಿಷೇಧಿಸಬೇಕು ಎಂದು ಉತ್ತರ ಪೊಲೀಸರು ಕೇಂದ್ರಕ್ಕೆ ಪತ್ರ ಸಹ ಬರೆದಿದ್ದರು.  ಮಂಗಳೂರಿನಲ್ಲಿ ನಡೆದ ಪ್ರತಿಭಟನೆಗೂ ಪಾಪುಲರ್‍ ಫ್ರಂಟಿನ ಕುಮ್ಮಕ್ಕು ಇತ್ತೇ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲದಾಗಿದೆ.

# ಯಾರಿಗೆಲ್ಲ ಹಣ ಸಂದಾಯ?
ಸುಪ್ರೀಂ ಕೋರ್ಟ್​​ನ ಖ್ಯಾತ ವಕೀಲ ಹಾಗೂ ಕಾಂಗ್ರೆಸ್​​ನ ಹಿರಿಯ ನಾಯಕ ಕಪಿಲ್ ಸಿಬಲ್ ಅಕೌಂಟ್​​ಗೆ 77 ಲಕ್ಷ ರೂಪಾಯಿ, ಇತ್ತೀಚೆಗಷ್ಟೇ ನಿರ್ಭಯಾ ಅಪರಾಧಿಗಳನ್ನು ಕ್ಷಮಿಸಬೇಕು ಎಂದು ಕರೆ ಕೊಟ್ಟಿದ್ದ ಸುಪ್ರೀಂ ಕೋರ್ಟ್​ ಲಾಯರ್ ಇಂದಿರಾ ಜೈಸಿಂಗ್​ ಅವರ ಅಕೌಂಟ್​​ಗೆ 4 ಲಕ್ಷ, ದುಶ್ಯಂತ್​ ಅನ್ನೋರ ಅಕೌಂಟ್​ಗೆ 11 ಲಕ್ಷ, ಈಗಾಗಲೇ ಮನಿ ಲಾಂಡರಿಂಗ್​ ಪ್ರಕರಣದಲ್ಲಿ ವಿಚಾರಣೆ ಎದುರಿಸಿರುವ ಅಬ್ದುಲ್ ಸಮ್ನಾದ್​ ಅಕೌಂಟ್​​ಗೆ 3.10 ಲಕ್ಷ ರೂಪಾಯಿ, ನ್ಯೂ ಜ್ಯೋತಿ ಗ್ರೂಪ್​ ಹೆಸರಲ್ಲಿ 1.17 ಕೋಟಿ ಹಾಗೂ ಪಿಎಫ್​ಐ ಕಾಶ್ಮೀರ ಅಕೌಂಟಿಗೆ 1.65 ಕೋಟಿ ರೂಪಾಯಿ ಹಣ ಸಂದಾಯವಾಗಿತ್ತು ಎಂದು ED ತಿಳಿಸಿದೆ.

Facebook Comments

Sri Raghav

Admin