ಇಸ್ಲಮೋಫೋಬಿಯಾ ತಡೆಗೆ ವಿಶೇಷ ರಾಯಭಾರಿ ನೇಮಿಸಿ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್,ಜು.22-ಚೀನಾ, ಭಾರತ ಮತ್ತು ಮೈನ್ಮಾರ್ ದೇಶಗಳಲ್ಲಿ ಹೆಚ್ಚುತ್ತಿರುವ ಮುಸ್ಲೀಂರ ಮೇಲಿನ ಹಲ್ಲೆ ಪ್ರಕರಣಗಳನ್ನು ತಡೆಗಟ್ಟಲು ವಿಶೇಷ ರಾಯಭಾರಿ ನೇಮಕ ಮಾಡಬೇಕು ಎಂದು ಅಮೆರಿಕಾದ 24ಕ್ಕೂ ಹೆಚ್ಚು ಸಂಸದರು ಅಧ್ಯಕ್ಷ ಜೈ ಬೈಡೆನ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ಇಸ್ಲಮೋಫೋಬಿಯಾ ಇಂದು ಜಾಗತಿಕ ಸಮಸ್ಯೆಯಾಗಿ ಪರಿವರ್ತನೆಯಾಗಿದೆ. ಹೀಗಾಗಿ ಹಲ್ಲೆಗೊಳಗಾಗುತ್ತಿರುವ ಮುಸ್ಲಿಂರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ ಎಂದು ಅವರು ಬೈಡೆನ್‍ಗೆ ಬರೆದಿರುವ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಮುಂಬರುವ ಮಾನವ ಹಕ್ಕುಗಳ ವಾರ್ಷಿಕ ವರದಿಯಲ್ಲಿ ದುರುದ್ದೇಶಪೂರ್ವಕವಾಗಿ ಮುಸ್ಲೀಂರ ಮೇಲೆ ನಡೆಸಲಾಗುತ್ತಿರುವ ಹಲ್ಲೆ ವಿವರಗಳನ್ನು ಪ್ರಕಟಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಕಳೆದ ಒಂದು ವರ್ಷದಿಂದ ವಿಶ್ವದೆಲ್ಲೆಡೆ ಮುಸ್ಲೀಂರ ಮೇಲಿನ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬ ಮಾಹಿತಿ ಬಹಿರಂಗಗೊಂಡ ಬೆನ್ನಲ್ಲೆ ಸಂಸದರ ನಿಯೋಗ ಬೈಡೆನ್ ಅವರಿಗೆ ಈ ಮನವಿ ಮಾಡಿಕೊಂಡಿದೆ.

Facebook Comments