ಧ್ರುವಾಸ್ತ್ರ ಯಶಸ್ವಿ ಪ್ರಯೋಗ : ಭಾರತೀಯ ಸೇನಾ ಬತ್ತಳಿಕೆಗೆ ಮತ್ತೊಂದು ಮಹಾ ಆಯುಧ ಸೇರ್ಪಡೆ..!  

ಈ ಸುದ್ದಿಯನ್ನು ಶೇರ್ ಮಾಡಿ

ಬಾಲಸೋರ್ (ಒಡಿಶಾ) ಜು.23- ಭಾರತದ ಕಡು ವೈರಿ ದೇಶಗಳಾದ ಚೀನಾ ಮತ್ತು ಪಾಕಿಸ್ತಾನದಿಂದ ದೇಶಕ್ಕೆ ಪದೇ ಪದೇ ಗಂಡಾಂತರಗಳು ಎದುರಾಗುತ್ತಿರುವ ಸಂದರ್ಭದಲ್ಲಿ ದೇಶದ ಸೇನಾಪಡೆ ಮತ್ತಷ್ಟು ಬಲಗೊಳ್ಳುತ್ತಿದ್ದು, ಹೊಸ ಹೊಸ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಭತ್ತಳಿಕೆಗೆ ಸೇರ್ಪಡೆಯಾಗುತ್ತಿವೆ.

ವೈರಿಗಳ ಟ್ಯಾಂಕರ್‍ಗಳು, ಬಂಕರ್‍ಗಳು ಮತ್ತು ಸಶಸ್ತ್ರ ವಾಹನಗಳನ್ನು ಧ್ವಂಸಗೊಳಿಬಲ್ಲ ಅತ್ಯಾಧುನಿಕ ಧ್ರುವಾಸ್ತ್ರ ಕ್ಷಿಪಣಿಗಳನ್ನು ಓಡಿಶಾದ ಬಾಲಸೋರ್‍ನಲ್ಲಿ ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಲಾಗಿದೆ.

ಇಲ್ಲಿನ ಚಂಡೀಪುರದ ಸಮಗ್ರ ಪರೀಕ್ಷಾ ವಲಯ (ಐಟಿಆg) ದಿಂದ ಎರಡು ಬಾರಿ ಟ್ಯಾಂಕರ್ ಧ್ವಂಶಕ ಅತ್ಯಾಧುನಿಕ ಧ್ರುವಾಸ್ತ್ರ ಕ್ಷಿಪಣಿಗಳನ್ನು ಎರಡು ಬಾರಿ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ (ಡಿಆರ್‍ಡಿಒ) ಅಭಿವೃದ್ದಿಗೊಳಿಸಿರುವ ಈ ಕ್ಷಿಪಣಿಯನ್ಜು ನಾಗ್ ಹೆಲಿನಾ ಎಂಬ ಸಮರ ಹೆಲಿಕಾಪ್ಟರ್‍ನಲ್ಲಿರುವ ಅತ್ಯಾಧುನಿಕ ಯುದ್ಧಾಸ್ತ್ರದ ಉನ್ನತೀಕರಣದ ತಂತ್ರಜ್ಞಾನವಾಗಿದೆ.

ಆಗಸದಿಂದ ಅಂದರೆ ಹೆಲಿಕಾಪ್ಟರ್ ಮೂಲಕ ಕ್ಷಿಪಣಿ ಬಳಿ ಶತ್ರುಗಳ ಬಂಕರ್‍ಗಳು (ರಹಸ್ಯ ಅಡಗುದಾಣಗಳು), ಟ್ಯಾಂಕರ್‍ಗಳು, ಮತ್ತು ಸಶಸ್ತ್ರ ವಾಹನಗಳನ್ನು ನಿಖರವಾಗಿ ಧ್ವಂಸಗೊಳಿಸಬಲ್ಲ ಅಗಾಧ ಸಾಮಥ್ರ್ಯವನ್ನು ಧುವಾಸ್ತ್ರ ಮಿಸೈಲ್ ಒಳಗೊಂಡಿದೆ.

ಹೆಲಿಕಾಪ್ಟರ್ ಮೂಲಕ ಎರಡು ಬಾರಿ ನಡೆಸಲಾದ ಕ್ಷಿಪಣಿ ಗುರಿ ಪರೀಕ್ಷೆ ಅತ್ಯಂತ ಯಶಸ್ವಿಯಾಗಿದ್ದು, ಭಾರತೀಯ ಸೇನಾ ಪಡೆಗೆ ಇದೊಂದು ಮಹಾ ಅಸ್ತ್ರವಾಗಲಿದೆ ಎಂದು ಡಿಆರ್‍ಡಿಒದ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

Facebook Comments

Sri Raghav

Admin