ಸೇನೆಯ ಬತ್ತಳಿಕೆಗೆ ಸೇರ್ಪಡೆಯಾಗುತ್ತಿದೆ ಮತ್ತೊಂದು ಅಸ್ತ್ರ, ಟ್ಯಾಂಕರ್ ಧ್ವಂಸಕ ಕ್ಷಿಪಣಿ ಪರೀಕ್ಷೆ ಯಶಸ್ವಿ..!

ಈ ಸುದ್ದಿಯನ್ನು ಶೇರ್ ಮಾಡಿ

ಕರ್ನೂಲ್, ಸೆ.12- ಭಾರತೀಯ ಸೇನೆಯ ಬತ್ತಳಿಕೆಗೆ ಮತ್ತೊಂದು ಪ್ರಬಲ ಶಸ್ತ್ರಾಸ್ತ್ರ ಸೇರ್ಪಡೆಯಾಗುತ್ತಿದೆ, ವೈರಿಪಡೆಯ ಟ್ಯಾಂಕರ್‍ಗಳನ್ನು ಛಿದ್ರಗೊಳಿಸಬಲ್ಲ ಅಗಾಧ ಸಾಮಥ್ರ್ಯದ ಧ್ವಂಸಕಾರಿ ಕ್ಷಿಪಣಿ ಪರೀಕ್ಷೆ ನಡೆಸಲಾಗಿದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‍ಡಿಒ) ಆಂಧ್ರ ಪ್ರದೇಶದ ಕರ್ನೂಲ್‍ನಲ್ಲಿ ಯುದ್ಧ ಟ್ಯಾಂಕರ್ ಹೊಡೆದುರುಳಿಸುವ ಸಾಮಥ್ರ್ಯದ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.

ಶತ್ರು ರಾಷ್ಟ್ರದ ಯಾವುದೇ ಅತ್ಯಾಧುನಿಕ ಮತ್ತು ಪ್ರಬಲ ಟ್ಯಾಂಕ್‍ಗಳನ್ನು ನುಚ್ಚುನೂರು ಮಾಡುವ ಸಾಮಥ್ರ್ಯವನ್ನು ಹೊಂದಿದೆ.  ದೇಶೀಯವಾಗಿ ನಿರ್ಮಿಸಲಾದ ಈ ಕ್ಷಿಪಣಿ ಎಂಪಿಎಟಿಜಿಎಂ ಅನ್ನು ಆಂಧ್ರಪ್ರದೇಶದ ಕರ್ನೂಲ್‍ನಲ್ಲಿರುವ ರಕ್ಷಣಾ ಸಚಿವಾಲಯದ ಉಸ್ತುವಾರಿಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಯುದ್ಧಭೂಮಿಯಲ್ಲಿ ಯೋಧರು ಸುಲಭವಾಗಿ ಈ ಕ್ಷಿಪಣಿಯನ್ನು ಹೊತ್ತೊಯ್ಯಬಹುದಾಗಿದೆ.

ಕೇವಲ ಟ್ರೈಪಾಡ್ (ಮೂರು ಕಾಲುಗಳ ಆಧಾರಗಳ ಮೇಲೆ) ಉಡಾವಣಾ ವ್ಯವಸ್ಥೆಯ ಸಹಾಯದಿಂದ ಉಡಾವಣೆ ಮಾಡಬಹುದಾಗಿದೆ. ಡಿಆರ್‍ಡಿಒ ನಡೆಸಿದ ಯಶಸ್ವಿ ಪರೀಕ್ಷೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದಿಸಿದ್ದಾರೆ.

Facebook Comments