ಕೇವಲ 20 ನಿಮಿಷಗಳಲ್ಲಿ ಕೈಸೇರಲಿದೆ ಕೋವಿಡ್ ವರದಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.10- ಕೇವಲ 20 ನಿಮಿಷಗಳಲ್ಲೇ ಕೋವಿಡ್ ಪರೀಕ್ಷೆ ನಡೆಸುವಂತಹ ರ್ಯಾಪಿಡ್ ಆ್ಯಂಟಿಜನ್ ಕೋವಿಡ್ ಟೆಸ್ಟ್ ಕಿಟ್ ನಗರಕ್ಕೆ ಬರಲಿದೆ. 50 ಸಾವಿರ ರ್ಯಾಪಿಡ್ ಟೆಸ್ಟ್ ಕಿಟ್‍ಗಳನ್ನು ಖರೀದಿಸಲು ಸರ್ಕಾರ ತೀರ್ಮಾನಿಸಿದ್ದು, ನಾಳೆ ಅಥವಾ ನಾಡಿದ್ದು ಕಿಟ್‍ಗಳು ಬಿಬಿಎಂಪಿಗೆ ಬರಲಿವೆ.

ಪ್ರತಿನಿತ್ಯ ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರ್ಯಾಪಿಡ್ ಕಿಟ್‍ಗಳನ್ನು ಖರೀದಿಸಲು ತೀರ್ಮಾನಿಸಲಾಗಿದೆ.

ಪ್ರಸ್ತುತ ಗಂಟಲು ದ್ರವ ಪರೀಕ್ಷೆ ನಡೆಸಿದರೆ ವರದಿ ಬರಲು ಮೂರ್ನಾಲ್ಕು ದಿನ ಕಾಯಬೇಕಾದ ಪರಿಸ್ಥಿತಿ ಇದ್ದ ಹಿನ್ನೆಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಲು ಕಾರಣವಾಗಿತ್ತು.

ಇದೀಗ ರ್ಯಾಪಿಡ್ ಕಿಟ್‍ಗಳ ಮೂಲಕ ಕೇವಲ 20 ನಿಮಿಷಗಳಲ್ಲೇ ವರದಿ ಕೈ ಸೇರುವುದರಿಂದ ಶೀಘ್ರ ಸೋಂಕಿತರ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಲಿದೆ. ಪ್ರತಿ ಫೀವರ್ ಕ್ಲಿನಿಕ್‍ಗಳಲ್ಲಿ ರ್ಯಾಪಿಡ್ ಕಿಟ್‍ಗಳನ್ನಿಟ್ಟು ಜನರ ಸ್ವಾಬ್ ಟೆಸ್ಟ್ ನಡೆಸಲು ಬಿಬಿಎಂಪಿ ತೀರ್ಮಾನಿಸಿದೆ.

Facebook Comments