ಬೆಂಗಳೂರಿನ ನವೋದ್ಯಮ ಸಂಸ್ಥೆಗೆ 1.2 ಶತಕೋಟಿ ಡಾಲರ್ ಪರಿಹಾರ ನೀಡಲು ಆ್ಯಂಟ್ರಿಕ್ಸ್ ಗೆ ಅಮೆರಿಕ ಕೋರ್ಟ್ ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಅ.30- ಉಪಗ್ರಹ ನಿರ್ಮಾಣ ಉಡಾವಣೆ ಮತ್ತು ಕಾರ್ಯ ನಿರ್ವಹಣೆಗಾಗಿ ತಂತ್ರಜ್ಞಾನ ಅಭಿವೃದ್ಧಿ ಪಡಿಸಲು ನೀಡಿದ್ದ ಗುತ್ತಿಗೆಯನ್ನು ರದ್ದುಪಡಿಸಲು ಆ್ಯಂಟ್ರಿಕ್ಸ್ ಕಾಪೆರ್ರೇಷನ್ ಸಂಸ್ಥೆಗೆ ಬೆಂಗಳೂರು ಮೂಲದ ನವೋದ್ಯಮ ಸಂಸ್ಥೆಯೊಂದಕ್ಕೆ 1.2 ಶತಕೋಟಿ ಡಾಲರ್‍ಗಳ ಪರಿಹಾರ ನೀಡುವಂತೆ ಅಮೆರಿಕ ನ್ಯಾಯಾಲಯವೊಂದು ಆದೇಶ ನೀಡಿದೆ.

ಬೆಂಗಳೂರಿನ ಮಲ್ಟಿ ಮೀಡಿಯಾ ಎಂಬ ನವೋದ್ಯಮ ಸಂಸ್ಥೆಗೆ ಈ ಬೃಹತ್ ಮೊತ್ತದ ಪರಿಹಾರ ನೀಡುವಂತೆ ಆ್ಯಂಟ್ರಿಕ್ಸ್ ಕಾಪೆರ್ರೇಷನ್‍ಗೆ ವಾಷಿಂಗ್ಟನ್‍ನ ಸಿಯಾಟಲ್ ಜಿಲ್ಲಾ ನ್ಯಾಯಾಧೀಶ ನ್ಯಾಯಮೂರ್ತಿ ಥಾಮಸ್ ಜೆಲ್ಲಿ ಆದೇಶ ನೀಡಿದ್ದಾರೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋಗೆ) ಉಪಗ್ರಹ ಉಡಾವಣೆ ಮತ್ತು ತಂತ್ರಜ್ಞಾನಕ್ಕಾಗಿ ವಾಣಿಜ್ಯ ಸಹಭಾಗಿತ್ವ ಸಂಸ್ಥೆಯಾದ ಆ್ಯಂಟ್ರಿಕ್ಸ್ ಕಾಪೆರ್ರೇಷನ್‍ಗೆ ನ್ಯಾಯಾಲಯದ ಈ ಆದೇಶದಿಂದ ಭಾರೀ ಹಿನ್ನಡೆಯಾಗಿದೆ.

2005ರ ಜನವರಿಯಲ್ಲಿ ಉಪಗ್ರಹ ನಿರ್ಮಾಣ ಉಡಾವಣೆ, ಕಾರ್ಯ ನಿರ್ವಹಣೆ ಹಾಗೂ 75 ಮೆಗಾ ಹಟ್ರ್ಜ್ ಸಾಮಥ್ರ್ಯದ ಎಸ್‍ಬ್ಯಾಂಡ್ ಸ್ಪೆಕ್ಟ್ರಂ ತಂತ್ರಜ್ಞಾನ ಅಭಿವೃದ್ಧಿಗಾಗಿ ಬೆಂಗಳೂರಿನ ದೇವಸ್ ಮಲ್ಟಿ ಮೀಡಿಯಾ ಜತೆ ಒಪ್ಪಂದ ಮಾಡಿಕೊಂಡಿತ್ತು. ಆದರೆ 2011ರ ಫೆಬ್ರವರಿಯಲ್ಲಿ ಈ ಒಪ್ಪಂದವನ್ನು ಆ್ಯಂಟ್ರಿಕ್ಸ್ ಕಾಪೆರ್ರೇಷನ್ ರದ್ದುಗೊಳಿಸಿತ್ತು. ಇದರ ವಿರುದ್ಧ ದೇವಸ್ ಮಲ್ಟಿ ಮೀಡಿಯಾ ಬೆಂಗಳೂರಿನ ನ್ಯಾಯಾಲಯಗಳು , ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‍ಗೆ ಮೊರೆ ಹೋಗಿತ್ತು.

ಈ ಪ್ರಕರಣವನ್ನು ಅಮೆರಿಕದ ನ್ಯಾಯಾಲಯದಲ್ಲಿ ಮುಂದುವರೆಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು. ಅದರಂತೆ ಅಮೆರಿಕದ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯ 592 .5 ದಶಲಕ್ಷ ಡಾಲರ್ ಮತ್ತು ಬಡ್ಡಿ ಮೊತ್ತಗಳು ಸೇರಿ 1.2 ಶತಕೋಟಿ ಡಾಲರ್ ಪರಿಹಾರ ನೀಡುವಂತೆ ಆ್ಯಂಟ್ರಿಕ್ಸ್ ಕಾಪೆರ್ರೇಷನ್‍ಗೆ ಸೂಚನೆ ನೀಡಿದೆ.

Facebook Comments